ಬೆಂಗಳೂರು: ಸ್ಯಾಂಡಲ್‍ವುಡ್‍ನ ಅಭಿನಯ ಚಕ್ರವರ್ತಿ ಬರಿ ಕನ್ನಡಕ್ಕೆ ಮಾತ್ರ ಸೀಮಿತವಾಗಿರದೇ ತಮಿಳು, ತೆಲುಗು ಹಿಂದಿ ಅಷ್ಟೇ ಅಲ್ಲದೆ ಹಾಲಿವುಡ್ ನಲ್ಲಿಯೂ ಅಭಿನಯಿಸುತ್ತಿದ್ದಾರೆ. ಈ ಮೂಲಕ ಸುದೀಪ್ ಜನಪ್ರಿಯತೆ, ಡಿಮ್ಯಾಂಡ್, ಅಭಿಮಾನಿಗಳು ಹೆಚ್ಚಾಗುತ್ತಿದ್ದಂತೆ ಅವರ ಸಂಭಾವನೆ ಕೂಡ ಹೆಚ್ಚಾಗಿದೆ.
ಒಂದು ಕಾಲದಲ್ಲಿ ಸ್ಯಾಂಡಲ್‍ವುಡ್ ನಲ್ಲಿ 8 ಕೋಟಿ ರೂ.ಗೆ ಒಂದು ಸ್ಟಾರ್ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿತ್ತು. ಆದರೆ ಈಗ ಒಂದು ಸಿನಿಮಾದ ಒಬ್ಬ ಸ್ಟಾರ್ ನಟನಿಗೆ 8 ಕೋಟಿ ರೂ. ಸಂಭಾವನೆ ನೀಡಲಾಗುತ್ತಿದೆ.
Advertisement
Advertisement
ಇಷ್ಟು ದೊಡ್ಡ ಮಟ್ಟದ ಸಂಭಾವನೆ ಪಡೆಯುತ್ತಿರುವ ನಟ ಕಿಚ್ಚ. ಇವರು ತಮ್ಮ ಹೊಸ ಚಿತ್ರಕ್ಕೆ ಬರೋಬ್ಬರಿ 8 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಇತ್ತೀಚಿಗಷ್ಟೇ ನಟ ಧ್ರುವ ಸರ್ಜಾ 6 ಕೋಟಿ ರೂ. ಸಂಭಾವನೆ ಪಡೆದಿದ್ದರು. ಆಗ ಈ ಬಗ್ಗೆ ಗಾಂಧಿನಗರದಲ್ಲಿ ದೊಡ್ಡ ಸುದ್ದಿ ಆಗಿತ್ತು. ಆದರೆ ಇದರ ಹಿಂದೆಯೇ ಕಿಚ್ಚನ ಸಂಭಾವನೆ ಬಗ್ಗೆ ಕೂಡ ಗಾಂಧಿನಗರದಲ್ಲಿ ಮಾತು ಶುರುವಾಗಿದೆ.
Advertisement
ಕಿಚ್ಚ `ಕೋಟಿಗೊಬ್ಬ 2′ ಸಿನಿಮಾದ ನಂತರ `ಕೋಟಿಗೊಬ್ಬ 3′ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕಾಗಿಯೇ 8 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ನಿರ್ಮಾಪಕ ಸೂರಪ್ಪ ಬಾಬು ತಮ್ಮ `ಕೋಟಿಗೊಬ್ಬ 3′ ಸಿನಿಮಾಗೆ 8 ಕೋಟಿ ಸಂಭಾವನೆ ನೀಡಿದ್ದಾರಂತೆ. ಈ ವಿಚಾರದ ಬಗ್ಗೆ ಸ್ವತಃ ಅವರೇ ಮಾತನಾಡಿ, ನಿರ್ಮಾಪಕರ ಜೇಬನ್ನು ಭದ್ರವಾಗಿಸುವ ನಟರಲ್ಲಿ ಸುದೀಪ್ ಕೂಡ ಒಬ್ಬರು. ಅವರ ಡಿಮ್ಯಾಂಡ್ ಏನು ಎಂದು ಒಬ್ಬ ನಿರ್ಮಾಪಕನಾಗಿ ನನಗೆ ಗೊತ್ತಿದೆ. ಇದುವರೆಗೂ ನನಗೆ ಇಷ್ಟು ಸಂಭಾವನೆ ಕೊಡಿ ಎಂದು ಕೇಳಿ ಪಡೆದವರಲ್ಲ. ನಾನೇ ಅವರ ಮುಂದೆ 8 ಕೋಟಿ ರೂ. ಆಫರ್ ಕೊಟ್ಟೆ. ನಂತರ ಅವರು `ಕೋಟಿಗೊಬ್ಬ 2′ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ.
Advertisement
ನಿರ್ಮಾಪಕರು ಉಳಿದರೆ ಸಿನಿಮಾರಂಗ ಉಳಿಯುತ್ತದೆ ಎಂಬ ಭಾವನೆ ಹೊಂದಿರುವವರು. ಅವರಿಗೆ ಇಷ್ಟು ಸಂಭಾವನೆ ಕೊಟ್ಟಿರುವುದು ನನಗೆ ಖುಷಿಯಾಗಿದೆ. ಇದರಿಂದ ಯಾವುದೇ ರೀತಿಯ ಕಷ್ಟ ಇಲ್ಲ ಎಂದು ಹೇಳಿದ್ದಾರೆ.
ಸುದೀಪ್ ಕನ್ನಡದಲ್ಲಿ ಮಾತ್ರವಲ್ಲದೇ ಪರಭಾಷೆಯಲ್ಲಿಯೂ ಬೇಡಿಕೆ ನಟರಾಗಿದ್ದಾರೆ. ಹಾಲಿವುಡ್ ನಲ್ಲಿ `ರೈಸನ್’ ಸಿನಿಮಾ ಮಾಡುತ್ತಿರುವ ಇವರು ಬಾಲಿವುಡ್ ನಲ್ಲಿ ಬಚ್ಚನ್ ಜೊತೆ ಮತ್ತೆ ನಟಿಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸದ್ಯಕ್ಕೆ `ದಿ ವಿಲನ್’ ಸಿನಿಮಾದ ಹಾಡಿನ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ನಂತರ `ಕೋಟಿಗೊಬ್ಬ 3′ ಸಿನಿಮಾದ ಶೂಟಿಂಗ್‍ನನ್ನು ನಿರ್ಮಾಪಕರು ಶುರು ಮಾಡುವ ಪ್ಲಾನ್ ಮಾಡಿದ್ದಾರೆ. ಇನ್ನು ಈ ಚಿತ್ರದಲ್ಲಿ ನಾಯಕಿಯಾಗಿ ಕನ್ನಡದ ನಟಿಯನ್ನೇ ಆಯ್ಕೆ ಮಾಡುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.
ಕಿಚ್ಚನ ಕೈ ನಲ್ಲಿ `ದಿ ವಿಲನ್’, `ಪೈಲ್ವಾನ್’, `ರೈಸನ್’ ಮತ್ತು `ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾಗಳು ಇವೆ.