ಮುಂಬೈ: ಅಸಲಿ ಟಿ20 ಅಂದ್ರೇನೇ ರೋಚಕ ಆಟ. ಹಾಗಾಗಿಯೇ, ಐಪಿಎಲ್ ಪಂದ್ಯಗಳು ದಿನದಿಂದ ದಿನಕ್ಕೆ ಕ್ರೇಜ್ ಹೆಚ್ಚಿಸಲು ಸಾಧ್ಯವಾಗಿದೆ. 15ನೇ ಆವೃತ್ತಿಯ ಲೀಗ್ ನಲ್ಲಿ ಮಿಂಚಿದ ಅನೇಕರು ತಮ್ಮಲ್ಲಿನ ಅನನ್ಯ ಪ್ರತಿಭೆಯಿಂದಾಗಿ ದಾಖಲೆಗಳನ್ನು ಬರೆದಿದ್ದಾರೆ.
Advertisement
ಫೀಲ್ಡಿಂಗ್ ನಿರ್ಬಂಧಗಳು ಬ್ಯಾಟ್ಸ್ಮನ್ ಗಳಿಗೆ ಮಿಂಚಲು ಹೆಚ್ಚೆಚ್ಚು ಅವಕಾಶ ಮಾಡಿಕೊಟ್ಟಿವೆ. ಹಾಗಾಗಿ ಅನುಭವಿ ಆಟಗಾರರು ಕಡಿಮೆ ಎಸೆತಗಳಲ್ಲೇ ಸ್ಪೋಟಕ ಶತಕಗಳನ್ನು ಸಿಡಿಸಿ ಮಿಂಚಿದ್ದಾರೆ. ಪೈಕಿ ವೆಸ್ಟ್ಇಂಡೀಸ್ ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್‌ಗೇಲ್ 6 ಹಾಗೂ ಆರ್‌ಸಿಬಿ ನಾಯಕನಾಗಿದ್ದ ವಿರಾಟ್ ಕೊಹ್ಲಿ 5 ಶತಕಗಳನ್ನು ಸಿಡಿಸಿದ್ದಾರೆ. ಇದನ್ನೂ ಓದಿ: ಪಠಾಣ್ Vs ಮಿಶ್ರಾ – ಭಾರತ ಶ್ರೇಷ್ಠ ದೇಶವಾಗಬಹುದು ಆದರೆ…
Advertisement
Advertisement
2008ನೇ ಇಸವಿಯ ಏಪ್ರಿಲ್ 18ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಬ್ಯಾಟ್ಸ್ಮನ್ ಆಗಿದ್ದ ನ್ಯೂಜಿಲೆಂಡ್ ಮಾಜಿ ನಾಯಕ ಬ್ರೆಂಡನ್ ಮೆಕಲಮ್ ಭರ್ಜರಿ ಶತಕ ಸಿಡಿಸಿದ್ದರು. 73 ಎಸೆತಗಳಲ್ಲಿ 10 ಬೌಂಡರಿ ಹಾಗೂ 13 ಸಿಕ್ಸರ್‌ಗಳಿಂದ 158 ರನ್ ಗಳಿಸಿ ಅಜೇಯರಾಗುಳಿದಿದ್ದರು. ಈ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ನೇತೃತ್ವದಲ್ಲಿದ್ದ ಆರ್‌ಸಿಬಿ ತಂಡವು 82 ರನ್‌ಗಳಷ್ಟೇ ಗಳಿಸಲು ಸಾಧ್ಯವಾಗಿ 140 ರನ್‌ಗಳ ಅಂತರದ ಹೀನಾಯ ಸೋಲು ಕಂಡಿತು.
Advertisement
ಐಪಿಎಲ್ ಆರಂಭದಿಂದ ಭಾರತದ ಯಾರೊಬ್ಬರೂ ಶತಕ ಗಳಿಸಿದ ಉದಾಹರಣೆಯಿರಲಿಲ್ಲ. ಆದರೆ, 2009ರಲ್ಲಿ ಆರಂಭವಾದ ಪಂದ್ಯದಲ್ಲಿ ಮನಿಷ್ ಪಾಂಡೆ ಶತಕ ದಾಖಲಿಸಿದ ಮೊದಲ ಭಾರತೀಯ ಎನಿಸಿಕೊಂಡರು. ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಗೊಂಡಿದ್ದ ಟೂರ್ನಿಯಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 73 ಎಸೆತಗಳನ್ನು ಎದುರಿಸಿದ ಮನೀಶ್ ಪಾಂಡೆ 10 ಬೌಂಡರಿ ಹಾಗೂ 4 ಸಿಕ್ಸರ್‌ಗಳಿಂದ 114 ರನ್ ಗಳಿಸಿ ಅಜೇಯರಾಗುಳಿದರು. ಪರಿಣಾಮ ಆರ್‌ಸಿಬಿ 12 ರನ್ ಅಂತರದ ರೋಚಕ ಗೆಲುವು ದಾಖಲಿಸಿತ್ತು. ನಂತರದ ಪಂದ್ಯಗಳಲ್ಲಿ ಅನೇಕರು ಶತಕ ಸಿಡಿಸಿ ದಾಖಲೆ ಬರೆದರು. ಇದನ್ನೂ ಓದಿ: ಶೂನ್ಯ ಸುತ್ತಿದ ಕೊಹ್ಲಿ, ರೋಹಿತ್ – 2022ರ ಐಪಿಎಲ್‍ನಲ್ಲಿ ಕಳಪೆ ಪ್ರದರ್ಶನ
ಟಾಪ್-10 ಪಟ್ಟಿಯಲ್ಲಿ ಯಾರಿದ್ದಾರೆ: ಐಪಿಎಲ್ ಇತಿಹಾಸದಲ್ಲಿ ಈವರೆಗೆ ಕ್ರಿಸ್‌ಗೆಲ್ 6, ವಿರಾಟ್‌ಕೊಹ್ಲಿ 5, ಡೇವಿಡ್‌ವಾರ್ನರ್ 4, ಶೇನ್‌ವಾಟ್ಸನ್ 4, ಎಬಿ ಡಿವಿಲಿಯರ್ಸ್ 4, ಸಂಜು ಸಾಮ್ಸನ್ 3, ಕೆ.ಎಲ್.ರಾಹುಲ್ 3, ಜಾಸ್ ಬಟ್ಲರ್ 3, ಬ್ರೆಂಡನ್ ಮೆಕಲಂ 2, ಆಡಂ ಗಿಲ್‌ಕ್ರಿಸ್ಟ್ 2 ಶತಕಗಳನ್ನು ಸಿಡಿಸಿ ಟಾಪ್-10 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. 2021ರ ಐಪಿಎಲ್ ಆವೃತ್ತಿಯಲ್ಲಿ ಸಂಜು ಸಾಮ್ಸನ್ (63ಕ್ಕೆ 119), ದೇವದತ್ ಪಡಿಕಲ್ (52ಕ್ಕೆ 101), ಜೋಸ್ಟ್ ಬಟ್ಲರ್ (64ಕ್ಕೆ 124), ಋತುರಾಜ್ ಗಾಯಕ್ವಾಡ್ (60ಕ್ಕೆ 101) ಗಳಿಸಿದ್ದರು. ಸದ್ಯ ಈ ಆವೃತ್ತಿಯಲ್ಲಿ ಬಟ್ಲರ್ (2) ಹಾಗೂ ಕೆ.ಎಲ್.ರಾಹುಲ್ (1) ಇಬ್ಬರೇ ಶತಕ ಸಿಡಿಸಿ ಸೈ ಎನ್ನಿಸಿಕೊಂಡಿದ್ದಾರೆ. ಇದನ್ನೂ ಓದಿ: Mumbai Vs Chennai ನಡುವಿನ ಪಂದ್ಯ ಭಾರತ-ಪಾಕ್ ಕಾದಾಟವಿದ್ದಂತೆ: ಭಜ್ಜಿ
ಭಾರತ ಸೆಂಚುರಿ ಸ್ಟಾರ್‌ಗಳು:
ವಿರಾಟ್ ಕೊಹ್ಲಿ – 5
ಕೆ.ಎಲ್.ರಾಹುಲ್ – 3
ಸಂಜು ಸ್ಯಾಮ್ಸನ್ – 3
ಅಜಿಂಕ್ಯ ರಹಾನೆ – 2
ವೀರೇಂದ್ರ ಸೆಹ್ವಾಗ್ – 2