CricketLatestMain PostSports

ಶೂನ್ಯ ಸುತ್ತಿದ ಕೊಹ್ಲಿ, ರೋಹಿತ್ – 2022ರ ಐಪಿಎಲ್‍ನಲ್ಲಿ ಕಳಪೆ ಪ್ರದರ್ಶನ

ಮುಂಬೈ: ಟೀಮ್ ಇಂಡಿಯಾದ ರನ್ ಮಿಷಿನ್ ವಿರಾಟ್ ಕೊಹ್ಲಿ ಮತ್ತು ಹಿಟ್ ಮ್ಯಾನ್ ರೊಹೀತ್ ಶರ್ಮಾ ಐಪಿಎಲ್ 2022ರ ಟೂರ್ನಿಯಲ್ಲಿ ಅತ್ಯಂತ ಕಳಪೆ ಬ್ಯಾಟಿಂಗ್‍ಗನ್ನು ಪ್ರದರ್ಶಿಸುತ್ತಿದ್ದಾರೆ.

ಐಪಿಎಲ್ 2022ರಲ್ಲಿ ರೋಹಿತ್ ಶರ್ಮಾ ಆಡಿದ ಇದುವರೆಗಿನ 7 ಪಂದ್ಯಗಳಲ್ಲಿ, ಕೇವಲ 114 ರನ್ ಗಳಿಸಿದ್ದಾರೆ. ರೋಹಿತ್ ಸತತ ವೈಫಲ್ಯಗಳ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 41 ರನ್ ಗಳಿಸಿದ್ದರು. ನಂತರದ ಪಂದ್ಯಗಳಲ್ಲಿ ರೋಹಿತ್ 10, 3, 26, 28, ಮತ್ತು 6 ರನ್ ಗಳಿಸಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಶೂನ್ಯ ಸುತ್ತಿದ್ದಾರೆ.

ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಸಹ ಡಕ್ ಔಟ್ ಆಗಿದ್ದರು. ಈಗ ಮುಂಬೈ ತಂಡದ ರೋಹಿತ್ ಶರ್ಮಾ ಕೂಡಾ ಶೂನ್ಯ ಸುತ್ತುವ ಮೂಲಕ ವಿಕೆಟ್ ಒಪ್ಪಿಸಿರುವುದು ಅಭಿಮಾನಿಗಳಲ್ಲಿ ಬೇಸರ ತಂದಿದೆ.

ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಚೆನ್ನೈ ತಂಡ ರೋಹಿತ್ ಪಡೆಯನ್ನು ಬ್ಯಾಟಿಂಗೆ ಆಹ್ವಾನಿಸಿತ್ತು. ಮುಂಬೈ ಬ್ಯಾಟರ್‍ಗಳಿಗೆ ಆರಂಭದಲ್ಲೇ ಕಡಿವಾಣ ಹಾಕಿದ ಬೌಲರ್ ಮುಖೇಶ್ ಚೌಧರಿ ಆರಂಭಿಕ ಆಟಗಾರರನ್ನು ಮೊದಲ ಓವರ್‍ನಲ್ಲೇ ಪೆವಿಲಿಯನ್‍ತ್ತ ಸಾಗಲು ದಾರಿ ಮಾಡಿಕೊಟ್ಟರು. ಮುಂಬೈ ತಂಡದ ಆರಂಭಿಕ ಬ್ಯಾಟರ್ ಇಶಾನ್ ಕಿಶಾನ್ ಅವರು ಸಹ ಖಾತೆ ತೆರೆಯುವ ಮುಂಚೆಯೇ ಚೌಧರಿಗೆ ವಿಕೆಟ್ ಒಪ್ಪಿಸಿ ತಂಡದ ಹಿನ್ನೆಡೆಗೆ ಕಾರಣರಾದರು.

ಈವರೆಗೆ ರೋಹಿತ್ 14 ಬಾರಿಗೆ ಶೂನ್ಯಕ್ಕೆ ಔಟಾದ ಅನಗತ್ಯ ದಾಖಲೆ ಬರೆದಿದ್ದಾರೆ. ಈ ಹಿನ್ನೆಲೆ ಟೀಮ್ ಇಂಡಿಯಾದ ಪ್ರಮುಖ ಬ್ಯಾಟ್ಸಮನ್‍ಗಳು ಟ್ರೋಲ್‍ಗೆ ಗುರಿಯಾಗಿದ್ದಾರೆ.

Leave a Reply

Your email address will not be published.

Back to top button