ಮೈಸೂರು: ಜಿಯೋ ಸಿಮ್‍ನಲ್ಲಿ ಅನಿಯಮಿತ ಕರೆ ಹಾಗೂ ಡೇಟಾ ಸಿಗುವ ಕಾಲದಲ್ಲಿ, ಸಂಸದರಿಗೆ ನೀಡುವ 15 ಸಾವಿರ ಫೋನ್ ಬಿಲ್ ನಿಲ್ಲಿಸಿ, ಎಂಬ ಟ್ವಿಟ್ಟರ್ ಅಭಿಯಾನ ಶುರುವಾಗಿದೆ. ಇದಕ್ಕೆ ಮೈಸೂರು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ತನ್ನ ಸಂಬಳದ ಚೀಟಿಯನ್ನು ಟ್ವಿಟರ್ ಹಾಗೂ ಫೇಸ್ ಬುಕ್ ನಲ್ಲಿ ಹಾಕುವ ಮೂಲಕ ಟೀಕಾಕಾರರ ಹಾಗೂ ಟ್ವಿಟರಿಗರಿಗೆ ತಿರುಗೇಟು ನೀಡಿರುವ ಸಂಸದ, ಕೇಂದ್ರ ಸರ್ಕಾರ ನೀಡುವ ತಮ್ಮ ವೇತನವನ್ನ ಸಾರ್ವಜನಿಕವಾಗಿ ಬಹಿರಂಗಗೊಳಿಸಿದ್ದಾರೆ. ಪ್ರತಿ ಸಂಸದ ತಿಂಗಳಿಗೆ 1 ಲಕ್ಷದ 10 ಸಾವಿರ ಸಂಬಳ ಪಡೆಯುತ್ತಾರೆ. 50 ಸಾವಿರ ಸಂಬಳ, 15 ಸಾವಿರ ಕಚೇರಿ ನಿರ್ವಹಣೆ, 45 ಸಾವಿರ ಕ್ಷೇತ್ರ ನಿರ್ವಹಣೆಗೆ ಹಣ ನೀಡುತ್ತಾರೆ.
Advertisement
ವಾಸ್ತವವಾಗಿ ಒಂದು ಲ್ಯಾಂಡ್ ಲೈನ್ ಬಿಲ್ ಬಿಟ್ಟರೆ ಮತ್ಯಾವುದೆ ಹಣವನ್ನ ಫೋನ್ ಗಾಗಿ ನೀಡುವುದಿಲ್ಲ. ಒಟ್ಟು 1 ಲಕ್ಷದ 10 ಸಾವಿರ ಸಂಬಳ ನೀಡುವ ಕೇಂದ್ರ ಸರ್ಕಾರ ಎಲ್ಲವನ್ನು ಅದರಲ್ಲೆ ಬಳಸು ಎಂದಿದೆ. ಆದರೂ ಕೆಲವರು 15 ಸಾವಿರ ಫೋನ್ ಬಿಲ್ ಎಂದು ಟೀಕಿಸುತ್ತಾರೆ. ಇದಕ್ಕಾಗಿ ನೋಡಿ ನನ್ನ ಸಂಬಳದ ಚೀಟಿ ಎಂದು ಬರೆದು ಟ್ವಿಟರ್‍ನಲ್ಲಿ ಸಂಸದ ಪ್ರತಾಪ್ ಸಿಂಹ ಹಾಕಿದ್ದಾರೆ.
Advertisement
ಏನಿದು ಕ್ಯಾಂಪೇನ್?: 399 ರೂಪಾಯಿಗೆ ಅನಿಯಮಿತ ಕರೆ ಮತ್ತು ಇಂಟರ್ ನೆಟ್ ಡಾಟಾ ಸಿಗುತ್ತಿರುವ ಕಾಲದಲ್ಲಿ ಸಂಸದರಿಗೆ ದೂರವಾಣಿಗಾಗಿ ತಿಂಗಳಿಗೆ 15 ಸಾವಿರ ರೂಪಾಯಿ ಕೊಡುತ್ತಿರುವುದು ದೊಡ್ಡ ಜೋಕ್. ಇದಕ್ಕಾಗಿ ತಿಂಗಳಿಗೆ 11 ಕೋಟಿ ರೂಪಾಯಿ ಯನ್ನು ಕೇಂದ್ರ ಸರಕಾರ ವೆಚ್ಚ ಮಾಡುತ್ತಿದೆ. ಇದನ್ನು ನಿಲ್ಲಿಸಿ ಎಂದು ಟ್ವಿಟರ್ ನಲ್ಲಿ ಅಭಿಯಾನ ಆರಂಭವಾಗಿತ್ತು.
Advertisement
Advertisement
Pls see my salary slip pic.twitter.com/Nei9UZVuGT
— Pratap Simha (@mepratap) August 5, 2017