ಮಂಗಳೂರು: ನಗರದ ಸುರತ್ಕಲ್ ಬಳಿಯ ಕಾಟಿಪಳ್ಳ ಎಂಬಲ್ಲಿ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ದೀಪಕ್ ರಾವ್ ಹತ್ಯೆ ಬಳಿಕ ಗುರುವಾರ ಮಂಗಳೂರಿನಲ್ಲಿ ನಡೆಯಬೇಕಿದ್ದ ದೊಡ್ಡ ರಕ್ತಪಾತವನ್ನು ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ತಡೆದಿದ್ದಾರೆ.
Advertisement
ನಿನ್ನೆ ಮಂಗಳೂರಿನ ಎಜೆ ಆಸ್ಪತ್ರೆಯಿಂದ ಸುರತ್ಕಲ್‍ವರೆಗೆ ದೀಪಕ್ ರಾವ್ ಶವಯಾತ್ರೆಗೆ ಹಿಂದೂ ಸಂಘಟನೆಗಳು ನಿರ್ಧರಿಸಿದ್ದವು. ಈ ವೇಳೆ ಮತ್ತೂ ಮೂವರ ಹೆಣ ಬೀಳುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಕೆಂಪಯ್ಯ ಮುನ್ನೆಚ್ಚರಿಕಾ ಕ್ರಮವಾಗಿ ಶವಯಾತ್ರೆಗೆ ಬ್ರೇಕ್ ಹಾಕಿದ್ರು. ಇದನ್ನೂ ಓದಿ: ಸದ್ದಿಲ್ಲದೇ ದೀಪಕ್ ಮೃತದೇಹ ಸಾಗಿಸಿದ ಪೊಲೀಸರು- ಆಂಬುಲೆನ್ಸ್ ನಿಂದ ಶವ ಇಳಿಸದಂತೆ ಆಕ್ರೋಶ
Advertisement
Advertisement
ವಿಷಯ ತಿಳಿದ ಕೂಡಲೇ ಯಾರಿಗೂ ಗೊತ್ತಾಗದಂತೆ ಶವವನ್ನು ಮನೆಗೆ ತಲುಪಿಸುವಂತೆ ಎಡಿಜಿಪಿ ಕಮಲ್ ಪಂತ್‍ಗೆ ಸೂಚನೆ ನೀಡಿದ್ರು. ಬಳಿಕ ಎಡಿಜಿಪಿ ಕಮಲ್ ಪಂತ್, ಕಮಿಷನರ್ ಸುರೇಶ್ ಮತ್ತು ಎಸ್ಪಿ ಸುದೀಂದ್ರ ಸಹಾಯ ಪಡೆದು ಆಸ್ಪತ್ರೆಯ ವೈದ್ಯರಿಗೂ ತಿಳಿಯದಂತೆ ಶವವನ್ನು ಸುರತ್ಕಲ್‍ನ ಮನೆಗೆ ಸಾಗಿಸಿದ್ರು. ಇದನ್ನೂ ಓದಿ: ದೀಪಕ್ ಹತ್ಯೆ ಖಂಡಿಸಿ ಇಂದು ಸುರತ್ಕಲ್ ಬಂದ್- ಪೊಲೀಸ್ ನಿರ್ಬಂಧದ ನಡುವೆಯೂ ಶವಯಾತ್ರೆಗೆ ಸಿದ್ಧತೆ
Advertisement
ಮನೆಯ ಸುತ್ತ ಪೊಲೀಸರ ಏಳು ಸುತ್ತಿನ ಕೋಟೆ ನಿರ್ಮಾಣ ಮಾಡಿ, ಏನಾದ್ರು ಆಗೋದಾದ್ರೆ ಸೂರತ್ಕಲ್ ಅಲ್ಲಿಯೇ ಆಗ್ಲಿ ರಸ್ತೆಯಲ್ಲಿ ಬೇರೆಯವರಿಗೆಲ್ಲಾ ಆಗೋದನ್ನ ತಡೆಯೋಣಾ ಅಂತ ಪ್ಲಾನ್ ಮಾಡಿ ಯಶಸ್ವಿಯೂ ಆಗಿದ್ರು ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.