BollywoodCinemaKarnatakaLatestMain PostSouth cinema

ದುಬಾರಿ ಬೆಲೆಗೆ `ಅವತಾರ್ 2′ ಟಿಕೆಟ್ ಸೋಲ್ಡ್ ಔಟ್

ಹಾಲಿವುಡ್‌ನ ʻಅವತಾರ್ʼ ಪಾರ್ಟ್ ಒನ್ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು. ಹದಿಮೂರು ವರ್ಷಗಳ ಹಿಂದೆ ಕಮಾಲ್ ಮಾಡಿದ್ದ ಈ ಚಿತ್ರದ ಮುಂದಿನ ವರ್ಷನ್ ತೆರೆಗೆ ತರಲು ನಿರ್ದೇಶಕ ಜೇಮ್ಸ್ ಕ್ಯಾಮರಾನ್ ರೆಡಿಯಾಗಿದ್ದಾರೆ. ಸದ್ಯ ಭಾರತದಲ್ಲಿ ಎಲ್ಲೆಡೆ `ಅವತಾರ್ 2′ ಟಿಕೆಟ್ಸ್ ದುಬಾರಿ ಬೆಲೆಗೆ ಸೆಲ್ ಆಗುತ್ತಿದೆ.

`ಅವತಾರ್ 2′ ಸಿನಿಮಾ ಇದೇ ಡಿಸೆಂಬರ್ 16ಕ್ಕೆ ವಿಶ್ವದ ಎಲ್ಲೆಡೆ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಅವತಾರ್ ಸಿನಿಮಾ ಮೋಡಿ ಮಾಡಿದ ಹಾಗೇ `ಅವತಾರ್ 2′ ಚಿತ್ರ ಕೂಡ ಕಮಾಲ್ ಮಾಡುತ್ತೆ ಅಂತಾ ಚಿತ್ರದ ಬಗ್ಗೆ ಫ್ಯಾನ್ಸ್ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಟ್ರೈಲರ್ ನೋಡಿಯೇ ಫಿದಾ ಆಗಿರುವ ಫ್ಯಾನ್ಸ್‌ಗೆ, ಚಿತ್ರದ ರಿಲೀಸ್‌ಗೂ ಮುಂಚೆನೇ ಟಿಕೆಟ್ ಬುಕ್ ಮಾಡ್ತಿದ್ದಾರೆ.

ವಿಶ್ವದ ಹಲವು ದೇಶಗಳಲ್ಲಿ ಮುಂಗಡ ಬುಕ್ಕಿಂಗ್ ಆರಂಭವಾಗಿದ್ದು, ಭಾರತದಲ್ಲೂ ಟಿಕೆಟ್‌ಗೆ ಮುಂಗಡ ಬುಕ್ಕಿಂಗ್ ಪ್ರಾರಂಭವಾಗಿದೆ. ಬೆಂಗಳೂರು, ಚೆನ್ನೈ, ಇಂದೋರ್, ಮುಂಬೈ, ಕೋಲ್ಕತ್ತಾ, ಮುಂತಾದ ನಗರದಲ್ಲಿ ಮುಂಗಡ ಬುಕ್ಕಿಂಗ್ ಓಪನ್ ಆಗಿದೆ. ಸಿನಿಮಾ ಟಿಕೆಟ್ಸ್‌ಗೆ ದುಬಾರಿ ಮೊತ್ತವನ್ನೇ ನಿಗದಿಪಡಿಸಿದ್ದಾರೆ. ಇದನ್ನೂ ಓದಿ: ಬೆಳ್ಳಿ ಪರದೆ ಮೇಲೆ ‘ಸೂರ್ಯ’ನ ಮಾಸ್ ಲವ್ ಸ್ಟೋರಿ

ಬೆಂಗಳೂರು 1450 ರೂ.- ಐಮ್ಯಾಕ್ಸ್ 3ಡಿ, ದೆಹಲಿ 1000- ಐಮ್ಯಾಕ್ಸ್ 3ಡಿ, ಮುಂಬೈ 970- 4ಡಿಎಕ್ಸ್ 3ಡಿ, ಕೋಲ್ಕತ್ತಾ 770 -ಐಮ್ಯಾಕ್ಸ್ 3ಡಿ, ಅಹ್ಮದ್‌ಬಾದ್ 750- 4ಡಿಎಕ್ಸ್ 3ಡಿ, ಇಂದೋರ್ 700- 4ಡಿಎಕ್ಸ್ 3ಡಿ, ಹೈದರಾಬಾದ್ 350- 4ಡಿಎಕ್ಸ್ 3ಡಿ

ಈ ರೀತಿಯಾಗಿ ಟಿಕೆಟ್ ದರವನ್ನ ಫಿಕ್ಸ್ ಮಾಡಲಾಗಿದ್ದು, ಎಲ್ಲಾ ಕಡೆ ಟಿಕೆಟ್ ಸೋಲ್ಡ್ ಔಟ್ ಆಗಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button