CinemaKarnatakaLatestMain PostSandalwood

ಬೆಳ್ಳಿ ಪರದೆ ಮೇಲೆ ‘ಸೂರ್ಯ’ನ ಮಾಸ್ ಲವ್ ಸ್ಟೋರಿ

ಬಿ.ಸುರೇಶ್ ಅವರ ಬಹುತೇಕ ಚಿತ್ರಗಳಿಗೆ  ಸಹನಿರ್ದೇಶಕರಾಗಿ  ಕೆಲಸ ಮಾಡಿರುವ  ಸಾಗರ್ ಈಗ ನಿರ್ದೇಶಕರಾಗಿದ್ದಾರೆ. ವಿಭಿನ್ನವಾದ ಮಾಸ್ ಲವ್ ಸ್ಟೋರಿ ಒಳಗೊಂಡ “ಸೂರ್ಯ” ಎಂಬ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು  ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಸಮಾರಂಬ ಕಳೆದ ಸೋಮವಾರ ಮಹಾಲಕ್ಷ್ಮಿ ಲೇಔಟ್ ನ ಶ್ರೀ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಹೊಸ ಪ್ರತಿಭೆ ಪ್ರಶಾಂತ್ ಈ ಚಿತ್ರದ ನಾಯಕನಾಗಿದ್ದು, ಹರ್ಷಿತಾ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಬೆಳ್ಳಿ ಪರದೆ ಮೇಲೆ 'ಸೂರ್ಯ'ನ ಮಾಸ್ ಲವ್ ಸ್ಟೋರಿ

ಮುಹೂರ್ತದ ನಂತರ ಚಿತ್ರದ ಕುರಿತಂತೆ ಮಾತನಾಡಿದ ನಿರ್ದೇಶಕ ಸಾಗರ್, ಸೂರ್ಯ ನಮ್ಮ ಚಿತ್ರದ ನಾಯಕನ ಹೆಸರು. ನಾಯಕ ಪ್ರೀತಿಗೋಸ್ಕರ ಯುದ್ದವನ್ನೇ ಮಾಡಿ ಹೇಗೆ ತನ್ನ ಪ್ರೀತಿಯನ್ನು ಉಳಿಸಿಕೊಳ್ಳುತ್ತಾನೆ ಎನ್ನುವುದೇ ಸೂರ್ಯ ಚಿತ್ರದ ಕಾನ್ಸೆಪ್ಟ್. ಬೆಂಗಳೂರು ಸುತ್ತಮುತ್ತ ಮಾತಿನ ಭಾಗದ ಚಿತ್ರೀಕರಣ ನಡೆಸಿ ಹಾಡುಗಳಿಗೆ ಮಡಿಕೇರಿ, ಮೈಸೂರು, ಪೂನಾಗೆ ಹೋಗುವ ಯೋಜನೆಯಿದೆ. ಇದನ್ನೂ ಓದಿ:ಏಕಾಂಗಿಯಾಗಿ ಹನಿಮೂನ್ ಸ್ಪಾಟ್, ಬಾಲಿಗೆ ಹಾರಿದ ನಿವೇದಿತಾ ಗೌಡ

ಬೆಳ್ಳಿ ಪರದೆ ಮೇಲೆ 'ಸೂರ್ಯ'ನ ಮಾಸ್ ಲವ್ ಸ್ಟೋರಿ

ಆರ್ಮುಗಂ ರವಿಶಂಕರ್ ಅವರನ್ನು ಈವರೆಗೆ ನೋಡಿರದಂಥ ಪಾತ್ರದಲ್ಲಿ ನೋಡಬಹುದು. ಅಲ್ಲದೆ ಶೃತಿ  ಅವರು ಒಬ್ಬ ಡಾಕ್ಟರ್ ಅಗಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಈಗಿನ ಕಾಲದ ಅಮ್ಮನೂ ಹೌದು ಕಾಂತಾರ ಖ್ಯಾತಿಯ ಪ್ರಮೋದ್ ಶೆಟ್ಟಿ ಅವರು ಉತ್ತರ ಕರ್ನಾಟಕ ಶೈಲಿಯ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ನಮ್ಮ ಚಿತ್ರದಲ್ಲಿ ೫ ಹಾಡುಗಳಿದ್ದು ಶ್ರೀಶಾಸ್ತ  ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಬಹದ್ದೂರ್ ಚೇತನ್, ನಾನು ಯೋಗರಾಜ ಭಟ್ ಸಾಹಿತ್ಯ ರಚಿಸಿದ್ದೇವೆ. ಮುಂದಿನ ವಾರದಿಂದ ಶೂಟಿಂಗ್ ಹೊರಡಲಿದ್ದೇವೆ ಎಂದು ಹೇಳಿದರು.  ನಂದಿ ಸಿನಿಮಾಸ್ ಮೂಲಕ ಬಸವರಾಜ್ ಬೆಣ್ಣೆ ಹಾಗೂ ರವಿ ಬೆಣ್ಣೆ ಸಹೋದರರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಮನುರಾಜ್ ಈ ಚಿತ್ರದ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button