ಹಿಂದೂಗಳ ಪವಿತ್ರ ಹಬ್ಬಗಳಲ್ಲೊಂದಾದ ಶಿವರಾತ್ರಿಯನ್ನು ನಾಡಿನೆಲ್ಲಡೆ ಭಕ್ತರು ಭಕ್ತಿ ಭಾವದಿಂದ ಆಚರಿಸುತ್ತಿದ್ದಾರೆ. ಈ ಹಬ್ಬಕ್ಕೆ ಶಿವನ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುವ ಪರಮೇಶ್ವರ ಮೆಚ್ಚುಗೆಗೆ ಭಕ್ತರು ಪಾತ್ರರಾಗುತ್ತಾರೆ. ಅದರಲ್ಲಿಯೂ ಈ ಬಾರಿ ಸೋಮವಾರದಂದು ಶಿವರಾತ್ರಿ ಬಂದ ಹಿನ್ನೆಲೆಯಲ್ಲಿ ಭಕ್ತಾದಿಗಳು ಲಿಂಗಸ್ಪರ್ಶಕ್ಕೆ ಮುಂದಾಗುತ್ತಾರೆ. ಕ್ರಮಬದ್ಧವಾಗಿಪ ಜಾಗರಣೆ ಮಾಡಿ ಲಿಂಗ ಸ್ಪರ್ಶ ಮಾಡುವದರಿಂದ ಭಗವಂತನ ಕೃಪೆಗೆ ಪಾತ್ರರಾಗುವದರಿಂದ ಪಾಪಗಳು ಪರಿಹಾರ ಆಗುತ್ತೆ ಎಂಬ ನಂಬಿಕೆ ಇದೆ.
ದೇಶದಲ್ಲಿರುವ ಪ್ರಸಿದ್ಧ ಶಿವಲಿಂಗಗಳ ಮಾಹಿತಿ ಈ ಕೆಳಗಿನಂತಿದೆ.
Advertisement
1.
ಸ್ಥಳ – ಕೋಲಾರ, ಕರ್ನಾಟಕ
ಎತ್ತರ – 108 ಅಡಿ
ಜಗತ್ತಿನ ಎತ್ತರದಲ್ಲಿ 1ನೇ ಸ್ಥಾನ
Advertisement
ಕೋಲಾರ ಜಿಲ್ಲೆಯ ಕಮ್ಮಸಂದ್ರ ಹಳ್ಳಿ ಸಮೀಪದಲ್ಲಿ ಕೋಟಿ ಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆ. ತ್ರೇತಾಯುಗದ ಇತಿಹಾಸಹೊಂದಿರುವ ಕೋಟಿಲಿಂಗೇಶ್ವರದಲ್ಲಿ ಮೊದಲು ಶಿವಲಿಂಗವನ್ನು ಪ್ರತಿಷ್ಠಾಪಿಸಿ ಸಾಕ್ಷಾತ್ ಶ್ರೀರಾಮ ಪೂಜಿಸಿದ್ದನಂತೆ. ಇನ್ನು ಇಲ್ಲಿರುವ ಕೋಟಿ ಲಿಂಗಗಳಲ್ಲಿ ಒಂದು ಬೃಹದಾಕಾರವಾದ ಶಿವಲಿಂಗವಿದೆ. 108 ಅಡಿಗಳಷ್ಟು ಎತ್ತರವಿರುವ ಈ ಶಿವಲಿಂಗ ಜಗತ್ತಿನ ಅತಿ ಎತ್ತರದ ಶಿವಲಿಂಗವಾಗಿದೆ.
Advertisement
ಜಗತ್ತಿನ ಅತಿ ಎತ್ತರದ ಶಿವಲಿಂಗದ ದರ್ಶನಕ್ಕೆ, ಸಾಗರೋಪಾದಿಯಲ್ಲಿ ಭಕ್ತರು ಬರುತ್ತಾರೆ. ಕರ್ನಾಟಕ ಮಾತ್ರವಲ್ಲ ದೇಶ ವಿದೇಶಗಳಿಂದಲೂ ಭಕ್ತರು ಇಲ್ಲಿಗೆ ಬಂದು ಕೋಟಿ ಲಿಂಗಗಳ ರೂಪದಲ್ಲಿರುವ ಶಿವನ ದರ್ಶನ ಪಡೆಯುತ್ತಾರೆ.
Advertisement
2.
ಸ್ಥಳ – ಹೈದರಾಬಾದ್
ಎತ್ತರ – 108 ಅಡಿ
ನಿರ್ಮಾಣ – 2010
ಜಗತ್ತಿನ ಎತ್ತರದಲ್ಲಿ 2ನೇ ಸ್ಥಾನ
ಜಗತ್ತಿನ ಅತಿ ಎತ್ತರದ ಎರಡನೇ ಶಿವಲಿಂಗ ಭಾರತದ ಮುತ್ತಿನ ನಗರಿ ಹೈದರಾಬಾದ್ ನಲ್ಲಿ ಇದೆ. ಸಿದ್ದೇಶ್ವರ ಪೀಠದ ವತಿಯಿಂದ ಈ ಬೃಹತ್ ಶಿವಲಿಂವನ್ನು ಪ್ರತಿಷ್ಠಾಪನೆ ಮಾಡಲಾಗಿದೆ. 2010ರಲ್ಲಿ ಧರ್ಮ ರಕ್ಷಾ ಮಹಾಯಾಗ ಮಾಡುವ ಮೂಲಕ ಈ ಶಿವಲಿಂಗವನ್ನು ಲೋಕಾರ್ಪಣೆ ಮಾಡಲಾಗಿದೆ. ಈ ಶಿವಲಿಂಗ ಬರೋಬ್ಬರಿ 108 ಅಡಿಗಳಷ್ಟಿದೆ.
3.
ಸ್ಥಳ – ತಮಿಳುನಾಡು
ಎತ್ತರ – 90 ಅಡಿ
ನಿರ್ಮಾಣ – ಅಕ್ಟೋಬರ್ 15, 1989
ಜಗತ್ತಿನ ಎತ್ತರದಲ್ಲಿ 3ನೇ ಸ್ಥಾನ
ತಮಿಳುನಾಡಿನ ತಾಮರೈಪಾಕಮ್ ಪ್ರದೇಶದಲ್ಲಿರುವ ಈ ಶಿವಲಿಂಗವನ್ನು ಅಕ್ಟೋಬರ್ 15 1989 ರಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ಶಿವಲಿಂಗವು ಭೂಮಿಯಿಂದ ಸುಮಾರು 90 ಅಡಿ ಎತ್ತರವಿದೆ. ಹೀಗಾಗಿ ಇದು ಜಗತ್ತಿನ ಅತಿ ಎತ್ತರದ ಶಿವಲಿಂಗಗಳಲ್ಲಿ 3ನೇ ಸ್ಥಾನ ಪಡೆದಿದೆ.
4.
ಸ್ಥಳ – ಜಾರ್ಖಂಡ್
ಎತ್ತರ – 65 ಅಡಿ
ನಿರ್ಮಾಣ – 30 ವರ್ಷಗಳ ಹಿಂದೆ
ಜಗತ್ತಿನ ಎತ್ತರದಲ್ಲಿ 4ನೇ ಸ್ಥಾನ
ಇದು ಜಾರ್ಖಂಡ್‍ನ ಛೋಟಾನಾಗ್‍ಪುರದಲ್ಲಿರುವ ಎತ್ತರದ ಶಿವಲಿಂಗ. ಗಿರಿದಿ ಜಿಲ್ಲೆಯ ಹರಿಹರ ಧಾಮದಲ್ಲಿರುವ ಈ ಶಿವಲಿಂಗ ಇಡೀ ದೇಶ ಮಾತ್ರವಲ್ಲ ಜಗತ್ತಿನಲ್ಲೇ ಪ್ರಖ್ಯಾತಿಯಾಗಿದೆ. ನದಿ ನೀರಿನಿಂದ ಸುತ್ತುವರಿದ 25 ಎಕರೆ ಪ್ರದೇಶದಲ್ಲಿ ಶಿವಲಿಂಗದ ರೂಪದಲ್ಲಿ ವಿರಾಜಮಾನವಾಗಿ ನೆಲೆಯೂರಿದ್ದಾನೆ. ಈ ಶಿವಲಿಂಗ ಸುಮಾರು 65 ಅಡಿ ಎತ್ತರವಿದೆ. 30 ವರ್ಷಗಳ ಹಿಂದೆ ಈ ಶಿವಲಿಂಗ ನಿರ್ಮಾಣ ಮಾಡಲಾಗಿದೆ. ಜಗತ್ತಿನ ಶಿವಲಿಂಗಗಳಲ್ಲಿ ಇದು ನಾಲ್ಕನೇ ಅತಿ ಎತ್ತರವಾದ ಶಿವಲಿಂಗವಾಗಿದೆ. ಶ್ರಾವಣ ಪೌರ್ಣಮಿಯಂದು ಇಲ್ಲಿಗೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸ್ತಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv