ಹಲ್ವಾ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮಕ್ಕಳಂತೂ ಸಿಹಿಯನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ದಿನಾ ಬಾಳೆಹಣ್ಣು, ಕ್ಯಾರೆಟ್, ಗೋಧಿ ಹಿಟ್ಟಿನ ಹಲ್ವಾ ಮಾಡಿ ಬೇಜಾರಾಗಿರುತ್ತೆ. ಅದಕ್ಕೆ ಈ ಬಾರಿ ಅತ್ಯಂತ ಸುಲಭ ಹಾಗೂ ರುಚಿ ರುಚಿಯಾದ ಹೆಸರುಬೇಳೆ ಹಲ್ವಾ ಮಾಡಿ ಸವಿಯಿರಿ.
Advertisement
ಬೇಕಾಗುವ ಸಾಮಗ್ರಿಗಳು:
* ಹೆಸರು ಬೇಳೆ- 1 ಕಪ್
* ತುಪ್ಪ- ಅರ್ಧ ಕಪ್
* ಹಾಲು- 1 ಕಪ್
* ಸಕ್ಕರೆ- 1 ಕಪ್
* ಏಲಕ್ಕಿ ಪುಡಿ- 1 ಟೀ ಸ್ಪೂನ್
* ಡ್ರೈಫ್ರೂಟ್ಸ್
Advertisement
Advertisement
ಮಾಡುವ ವಿಧಾನ:
* ಮೊದಲು ಹೆಸರು ಬೇಳೆಯನ್ನು ತೊಳೆದುಕೊಂಡು ನೀರನ್ನು ಬಸಿದಿಟ್ಟುಕೊಳ್ಳಿ. ಇತ್ತ ಸ್ಟೌವ್‍ನಲ್ಲಿ ಪ್ಯಾನ್ ಇಟ್ಟು ಅದಕ್ಕೆ 1 ಚಮಚ ತುಪ್ಪ ಹಾಕಿ. ಈ ತುಪ್ಪ ಸ್ವಲ್ಪ ಬಿಸಿಯಾಗ್ತಿದ್ದಂತೆ ಅದಕ್ಕೆ ಹೆಸರುಬೇಳೆ ಹಾಕಿ. ನಂತರ ಇದನ್ನು 5-6 ನಿಮಿಷ ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ಇದು ಗರಿಗರಿಯಾದ ಬಳಿಕ ತಣಿಯಲು ಬಿಡಿ.
Advertisement
* ಪೂರ್ತಿ ತಣಿದ ಬಳಿಕ ಮಿಕ್ಸಿ ಜಾರಿಗೆ ಹುರಿದಿಟ್ಟ ಹೆಸರುಬೇಳೆಯನ್ನು ಹಾಕಿ ಸ್ವಲ್ಪ ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ನಂತರ ಮತ್ತೆ ಅದೇ ಪ್ಯಾನಿಗೆ 2 ಚಮಚ ತುಪ್ಪ ಹಾಕಿ ಅದಕ್ಕೆ ಪುಡಿ ಮಾಡಿಟ್ಟ ಹೆಸರು ಬೇಳೆ ಸೇರಿಸಿ ಮತ್ತೆ 2 ರಿಂದ 3 ನಿಮಿಷ ಸಣ್ಣ ಉರಿಯಲ್ಲಿ ಉರಿದುಕೊಳ್ಳಿ. ಇದನ್ನೂ ಓದಿ: ಶಿವನ ನೈವೇದ್ಯಕ್ಕೆ ಮಾಡಿ ‘ಪಾಲ್ ಪಾಯಸ’
* ಅದಕ್ಕೆ 1 ಕಪ್ ಹಾಲು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಗಂಟಾಗಲು ಬಿಡಬೇಡಿ. ಹೆಸರು ಬೇಳೆ ಪುಡಿ ಹಾಲನ್ನು ಪೂರ್ತಿಯಾಗಿ ಹೀರಿಕೊಂಡ ಬಳಿಕ ಅದಕ್ಕೆ ಉಳಿದ ತುಪ್ಪವನ್ನು ಬೆರೆಸಿ ಮತ್ತೆ ಪುನಃ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ 1 ಕಪ್ ಸಕ್ಕರೆ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಪ್ಯಾನ್ ಬದಿಯಲ್ಲಿ ತುಪ್ಪ ಬಿಡಲು ಶುರುವಾದಾಗ ಕಾಲು ಚಮಚ ಏಲಕ್ಕಿ ಪುಡಿ ಮಿಕ್ಸ್ ಮಾಡಿಕೊಳ್ಳಿ. ಕೊನೆಗೆ ಡ್ರೈಫ್ರೂಟ್ಸ್ ಹಾಕಿ ಚೆನ್ನಾಗಿ ಕಲಸಿ. ಈಗ ಮೂಂಗು ದಾಲ್ ಹಲ್ವಾ ಅಥವಾ ಹೆಸೆರುಬೇಳೆ ಹಲ್ವಾ ಸವಿಯಲು ಸಿದ್ಧ.