ರಾಮನಗರ: ಅಕ್ಕಿ ಕೊಡುತ್ತಾರೋ ಅಥವಾ ದುಡ್ಡು ಕೊಡುತ್ತಾರೋ ಅದು ಅವರ ಹಣೆಬರಹ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೇಳಿದರು.
5 ಕೆ.ಜಿ ಅಕ್ಕಿ, ಉಳಿದ 5 ಕೆ.ಜಿಗೆ ಹಣ ನೀಡುವ ವಿಚಾರ ಕುರಿತು ಚನ್ನಪಟ್ಟಣದಲ್ಲಿ ಪ್ರತಿಕ್ರಿಯಿಸಿ, ಅಕ್ಕಿ (Rice) ಕೊಡುತ್ತಾರೋ, ದುಡ್ಡು ಕೊಡುತ್ತಾರೋ ಅದು ಅವರ ಹಣೆಬರಹ. ಯಾವ ರೀತಿ ಮಾಡಬೇಕು ಅಂತ ಅವರೇ ತೀರ್ಮಾನ ಮಾಡಲಿ. ಚುನಾವಣೆಯಲ್ಲಿ ಮತ ಪಡೆಯಲು ತರಾತುರಿಯಲ್ಲಿ ಘೋಷಣೆ ಮಾಡಿದ್ರು. ಇದು ಅವರು ಮಾಡಿಕೊಂಡಿರೋ ಎಡವಟ್ಟು ಎಂದು ಹೇಳಿದರು.
ಮುಂದಾಗುವ ಅನಾಹುತಗಳ ಬಗ್ಗೆ ಯೋಚನೆ ಮಾಡದೇ ಘೋಷಣೆ ಮಾಡಿದ್ರು ಈಗ ಅನುಭವಿಸಲಿ. 5 ಕೆ.ಜಿ ಅಕ್ಕಿ ಬದಲು ಹಣ ಕೊಡೊದಾದ್ರೆ ಯಾವ ರೀತಿ ಕೊಡ್ತೀರಿ. ಯಾವ ರೀತಿ ಹಣ ತಲುಪಿಸ್ತೀರಿ. ಅದು ಮಧ್ಯವರ್ತಿಗಳ ಕೈ ಸೇರಲ್ವಾ.? ಈ ಎಲ್ಲದರ ಬಗ್ಗೆ ಮುಂದೆ ಮಾತನಾಡ್ತಿನಿ ಎಂದು ಕಿಡಿಕಾರಿದ್ರು. ಇದನ್ನೂ ಓದಿ: 5 ಕೆ.ಜಿ ಅಕ್ಕಿ, ಉಳಿದ 5 ಕೆ.ಜಿ ಅಕ್ಕಿಯ ಹಣ ಕೊಡಲು ಸರ್ಕಾರ ನಿರ್ಧಾರ
ರಾಜ್ಯದಲ್ಲಿ 20 ಸಾವಿರ ಲೋಡ್ ಅಕ್ಕಿ ಕೊಡಲು ಗಿರಣಿ ಮಾಲೀಕರು ರೆಡಿ ಇದ್ದಾರೆ. ಆದರೆ ಇವರಿಗೆ ಕಮಿಟ್ಮೆಂಟ್, ಪಾರದರ್ಶಕತೆ ಇಲ್ಲ. ನನ್ನ ಪ್ರಕಾರ, ಯೋಜನೆಗೆ ಹಣ ಒದಗಿಸಲು ಎನೂ ಸಮಸ್ಯೆ ಇಲ್ಲ. ಹಣ ಎಲ್ಲಿಂದ ತರ್ತಾರೆ ಅಂತ ಬಿಜೆಪಿ (BJP) ಯವರು ಏನು ಬೇಕಾದರೂ ಹೇಳಬಹುದು. ಆದರೆ ನಾನು ಹಿಂದೆ ಸಾಲಮನ್ನಾ ಮಾಡಿದಾಗ ದರೋಡೆ ಮಾಡಿ ಹಣ ಕೊಟ್ನಾ. ಜನರ ದುಡ್ಡನ್ನೆ ಕೊಟ್ಟಿದ್ದೀನಿ. ರಾಜ್ಯದೇ ಯೋಜನೆಗೂ ಯಾವುದಕ್ಕೂ ಹಣಕಾಸಿನ ಕೊರತೆ ಇಲ್ಲ. ಅದನ್ನ ಸರಿಯಾಗಿ ಮ್ಯಾನೇಜ್ ಮಾಡಬೇಕು ಎಂದು ಹೇಳಿದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]