ನೀವು ಓದ್ಲೇಬೇಕು, ಖರೀದಿಸಿದ ಅಕ್ಕಿ ಪ್ಲಾಸ್ಟಿಕ್ ಅಕ್ಕಿನಾ ಎಂದು ಕಂಡುಹಿಡಿಯೋಕೆ ಇಲ್ಲಿದೆ 5 ವಿಧಾನಗಳು

Public TV
2 Min Read
plastic rice 1

ಬೆಂಗಳೂರು: ಪ್ಲಾಸ್ಟಿಕ್ ಮೊಟ್ಟೆ, ಪ್ಲಾಸ್ಟಿಕ್ ಸಕ್ಕರೆ ಆಯ್ತು. ಇದೀಗ ರಾಜ್ಯದ ಹಲವೆಡೆ ಪ್ಲಾಸ್ಟಿಕ್ ಅಕ್ಕಿ ಮಾರಾಟವಾಗ್ತಿರೋ ಬಗ್ಗೆ ವರದಿಯಾಗ್ತಾನೆ ಇದೆ. ಕರ್ನಾಟಕದಲ್ಲಷ್ಟೇ ಅಲ್ಲ ಆಂಧ್ರಪ್ರದೇಶ ಮತ್ತು ತೆಲಂಗಾಣದ ಕೆಲವು ಅಂಗಡಿಗಳಲ್ಲೂ ಪ್ಲಾಸ್ಟಿಕ್ ಅಕ್ಕಿ ಮಾರಾಟವಾಗ್ತಿರೋ ಬಗ್ಗೆ ರಾಷ್ಟ್ರೀಯ ಪತ್ರಿಕೆಗಳಲ್ಲಿ ವರದಿಯಾಗಿದೆ. ಪ್ಲಾಸ್ಟಿಕ್ ಅಕ್ಕಿಯಿಂದ ಮಾಡಿದ ಅನ್ನ ಸೇವಿಸೋದ್ರಿಂದ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತದೆ. ಕ್ಯಾನ್ಸರ್‍ಗೂ ತುತ್ತಾಗಬಹುದು ಎಂದು ಹೇಳಲಾಗಿದೆ.

ಇದನ್ನೂ ಓದಿ: ಬೆಂಗ್ಳೂರಲ್ಲಿ ಪ್ಲಾಸ್ಟಿಕ್ ಅಕ್ಕಿ ಹಾವಳಿ- ಹೊಟ್ಟೆನೋವಿನಿಂದ ನರಳಿ ಧರಣಿ ಕುಳಿತ ವ್ಯಕ್ತಿ

ಮಂಡ್ಯ ಹಾಗೂ ಬೆಂಗಳೂರಿನ ನಿವಾಸಿಗಳು ತಾವು ಸೇವಿಸುತ್ತಿರುವುದು ಪ್ಲಾಸ್ಟಿಕ್ ಅಕ್ಕಿ ಎಂಬುದನ್ನ ಪತ್ತೆ ಹಚ್ಚಿದ್ದರು. ಹೀಗೆ ನೀವೂ ಕೂಡ ಒಂದು ವೇಳೆ ಗೊತ್ತಿಲ್ಲದೆ ಪ್ಲಾಸ್ಟಿಕ್ ಅಕ್ಕಿ ಬಳಸುತ್ತಿದ್ದರೆ ಅದನ್ನು ಪತ್ತೆ ಮಾಡಲು ಇಲ್ಲಿದೆ 5 ಮಾರ್ಗಗಳು:

ಇದನ್ನೂ ಓದಿ: ಮೊಟ್ಟೆ ತಿನ್ನೋ ಬೆಂಗಳೂರಿಗರೇ ಎಚ್ಚರವಾಗಿರಿ!

1. ಒಂದು ಹಿಡಿಯಷ್ಟು ಅಕ್ಕಿ ತೆಗೆದುಕೊಂಡು ಅದನ್ನ ಬೆಂಕಿ ಕಡ್ಡಿ ಅಥವಾ ಲೈಟರ್‍ನಿಂದ ಸುಟ್ಟು ನೋಡಿ. ಒಂದು ವೇಳೆ ಅಕ್ಕಿಯನ್ನು ಪ್ಲಾಸ್ಟಿಕ್‍ನಿಂದ ಮಾಡಿದ್ದರೆ ಸುಟ್ಟ ತಕ್ಷಣ ಪ್ಲಾಸ್ಟಿಕ್ ವಾಸನೆ ಬರುತ್ತದೆ.

2. ಅಕ್ಕಿಯನ್ನು ಬೇಯಿಸಿ 2-3 ದಿನಗಳವರೆಗೆ ಒಂದು ಬಾಟಲ್‍ನಲ್ಲಿ ಇಡಿ. ಬೇಯಿಸಿದ ಅಕ್ಕಿ ಫಂಗಸ್ ದಾಳಿಯಿಂದ ಹಳಸದೆ ಹಾಗೆ ಇದ್ರೆ ಅದು ಪ್ಲಾಸ್ಟಿಕ್ ಅಕ್ಕಿ.

3. ಸ್ವಲ್ಪ ಅಕ್ಕಿ ತೆಗೆದುಕೊಂಡು ಅದರ ಮೇಲೆ ಕಾಯಿಸಿದ ಎಣ್ಣೆ ಸುರಿಯಿರಿ. ಅಕ್ಕಿ ಪ್ಲಾಸ್ಟಿಕ್‍ನಿಂದ ಮಾಡಿದ್ದಾಗಿದ್ರೆ ಅದು ಕೆಲವೇ ನಿಮಿಷಗಳಲ್ಲಿ ಕರಗಿ ಪಾತ್ರೆಯ ತಳಕ್ಕೆ ಅಂಟಿಕೊಳ್ಳುತ್ತದೆ.

ಇದನ್ನೂ ಓದಿ: ಬೇಕರಿ ತಿನಿಸುಗಳಂದ್ರೆ ಇಷ್ಟನಾ? ಹಾಗಿದ್ರೆ ನೀವು ಈ ಸ್ಟೋರಿ ಓದ್ಲೇಬೇಕು

4. ಒಂದು ಪಾತ್ರೆಯಲ್ಲಿ ನೀರು ತೆಗೆದುಕೊಂಡು ಅದಕ್ಕೆ 1 ಚಮಚ ಅಕ್ಕಿಯನ್ನು ಹಾಕಿ ಕೈಯ್ಯಾಡಿಸಿ. ಒಂದು ವೇಳೆ ಅಕ್ಕಿ ನೀರಿನ ಮೇಲೆ ತೇಲಿದರೆ ಅದು ಪ್ಲಾಸ್ಟಿಕ್ ಅಕ್ಕಿ. ಮಾಮೂಲಿ ಅಕ್ಕಿಯಾದ್ರೆ ನೀರಿನ ಮೇಲೆ ತೇಲುವುದಿಲ್ಲ.

plastic rice test

5. ಅಕ್ಕಿಯನ್ನು ಬೇಯಿಸುವಾಗ ಅದು ಪ್ಲಾಸ್ಟಿಕ್ ಅಕ್ಕಿಯೋ ಅಲ್ಲವೋ ಎಂಬುದನ್ನ ಪತ್ತೆಹಚ್ಚಬಹುದು. ಪ್ಲಾಸ್ಟಿಕ್ ಅಕ್ಕಿಯಾದ್ರೆ ಬೇಯಿಸುವ ಸಂದರ್ಭದಲ್ಲಿ ಪಾತ್ರೆಯ ಮೇಲ್ಭಾಗದಲ್ಲಿ ದೊಡ್ಡ ಪದರ ಕಟ್ಟುತ್ತದೆ.

ಮಂಡ್ಯದ ನಿವಾಸಿಯೊಬ್ಬರು ಪ್ಲಾಸ್ಟಿಕ್ ಅಕ್ಕಿ ಸೇವಿಸಿದ ನಂತರ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಅಕ್ಕಿಯನ್ನ ಪರೀಕ್ಷಿಸಿದ್ದರು. ತಾವು ಬಳಸುತ್ತಿದ್ದ ಅಕ್ಕಿಯಿಂದ ಮಾಡಿದ ಅನ್ನವನ್ನ ಉಂಡೆ ಮಾಡಿ ನೆಲಕ್ಕೆ ಬಡಿದರೆ ಬಾಲ್‍ನಂತೆ ಎಗರಿತು. ಅನ್ನದ ಉಂಡೆ ಬಿರುಕು ಬಿಡದೇ, ಒಡೆದು ಹೋಗದೇ ರಬ್ಬರ್ ಬಾಲಿನಂತೆ ಬೌನ್ಸ್ ಆಗುತ್ತಿತ್ತು.

ಆದ್ದರಿಂದ ಅಕ್ಕಿ ಖರೀದಿಸೋ ಮುನ್ನ ಸ್ವಲ್ಪ ಎಚ್ಚರವಾಗಿರಿ.

ಇದನ್ನೂ ಓದಿ: ಅಕ್ಕಿ, ಮೊಟ್ಟೆ ಆಯ್ತು ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಪ್ಲಾಸ್ಟಿಕ್ ಕ್ಯಾಬೇಜ್ – ವಿಡಿಯೋ ನೋಡಿ

ಇದನ್ನೂ ಓದಿ: ನೀವು ತಿನ್ನುವ ಸಕ್ಕರೆ ಆರೋಗ್ಯಕ್ಕೆ ಎಷ್ಟು ಸೇಫ್?- ನೀರಿಗೆ ಹಾಕಿ ಪರೀಕ್ಷೆ ಮಾಡಿ

ವಿಯಟ್ನಾಮ್ ನ ಫ್ಯಾಕ್ಟರಿಯೊಂದರಲ್ಲಿ ಪ್ಲಾಸ್ಟಿಕ್ ಅಕ್ಕಿ ತಯಾರಿಸಲಾಗುತ್ತಿದೆ ಎಂದು ಯೂಟ್ಯೂಬ್ ನಲ್ಲಿ ವಿಡಿಯೋವೊಂದು ಹರಿದಾಡಿತ್ತು. 

https://www.youtube.com/watch?v=ogz9n9kE_Fw

https://www.youtube.com/watch?v=OcNJ_ZrwYJM

plastic rice 4

plastic rice 3

plastic rice 2

Capture 2

plastic rice 1

Share This Article
Leave a Comment

Leave a Reply

Your email address will not be published. Required fields are marked *