ಮಡಿಕೇರಿ: ಕೊಡಗು ಜಿಲ್ಲೆಯ ಹಲವೆಡೆಗಳಲ್ಲಿ ಕಾಡಾನೆ (Wild Elephants) ಹಾಗೂ ಮಾನವನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದಿನ ಬೆಳಗಾದ್ರೆ ಅರಣ್ಯ ಪ್ರದೇಶಗಳಲ್ಲಿರುವ ಕಾಡಾನೆ ಹಿಂಡು ಕಾಫಿ ತೋಟಗಳಿಗೆ ಲಗ್ಗೆ ಇಟ್ಟು ಸಾಕಷ್ಟು ಬೆಳೆ ನಾಶ ಮಾಡುತ್ತಿವೆ.
ಈ ನಡುವೆ ಇಂದು ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆಯ ಹಾಗೂ ಘಟ್ಟದಳ ಗ್ರಾಮದ ಕಾಫಿ ತೋಟದಿಂದ ಸುಮಾರು ಹತ್ತಕ್ಕೂ ಅಧಿಕ ಕಾಡಾನೆಗಳ ಹಿಂಡು ಹೆದ್ದಾರಿಯಲ್ಲಿ ಪ್ರತ್ಯಕ್ಷವಾಗಿದೆ. ಮಾಲ್ದಾರೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಸಂಚಾರ ಮಾಡಿದೆ. ಇದನ್ನೂ ಓದಿ: ರಿಷಬ್ ಹರಕೆ ನೇಮೋತ್ಸವ ವಿವಾದ – ಹಿರಿಯರು ಹೇಳಿದ ಉಪದೇಶದ ರೀತಿ ದೈವ ನರ್ತನ ಮಾಡಿದ್ದೇನೆ: ಮುಖೇಶ್
ಪಿರಿಯಾಪಟ್ಟಣ – ಸಿದ್ದಾಪುರದ ಮುಖ್ಯ ರಾಜ್ಯದಲ್ಲಿ ಹೆದ್ದಾರಿ ಆಗಿರುವುದರಿಂದ ಸಾಕಷ್ಟು ವಾಹನ ಸವಾರರು ಇದೇ ಮಾರ್ಗದಲ್ಲಿ ಸಂಚಾರ ಮಾಡುತ್ತಿದ್ದಾರೆ. ಈ ನಡುವೆ ತೋಟದಿಂದ ಬಂದ ಕಾಡಾನೆಗಳು ಕೆಲ ನಿಮಿಷಗಳ ಕಾಲ ಮುಖ್ಯ ರಸ್ತೆಯಲ್ಲೇ ಓಡಾಟ ನಡೆಸಿವೆ.
ಹೀಗಾಗಿ ವಾಹನ ಸವಾರರು ಹಾಗೂ ಕೂಲಿ ಕಾರ್ಮಿಕರು ಕಾಡಾನೆ ಹಿಂಡನ್ನ ನೋಡಿ ಆತಂಕಕ್ಕೆ ಒಳಗಾಗಿದ್ರು. ಈ ನಡುವೆ ಮೀಸಲು ಅರಣ್ಯ ಪ್ರದೇಶದಲ್ಲಿ ಇದ್ದ ಅರಣ್ಯ ಇಲಾಖೆಯ ಸಿಬ್ಬಂದಿ ಕಾಡಾನೆಗಳನ್ನ ಕಾಡಿಗೆ ಅಟ್ಟಿದ್ರು. ಇದರಿಂದಾಗಿ ರಸ್ತೆಯಲ್ಲಿ ಇದ್ದ ವಾಹನ ಸವಾರರು ನಿಟ್ಟುಸಿರು ಬಿಡುವಂತೆ ಆಯ್ತು. ಇದನ್ನೂ ಓದಿ: ನೇಣುಬಿಗಿದ ಸ್ಥಿತಿಯಲ್ಲಿ BAMS ವಿದ್ಯಾರ್ಥಿ ಶವ ಪತ್ತೆ – ಕಾಲೇಜು ವಿರುದ್ಧ FIR, ಮುಗಿಲುಮುಟ್ಟಿದ ಪೋಷಕರ ಆಕ್ರಂದನ


