ಬೆಂಗಳೂರು: ಕನ್ನಡ ನಾಡು ನುಡಿಗಾಗಿ, ಕನ್ನಡ ರಾಜ್ಯದ ಹಿರಿಮೆಯನ್ನು ಎಲ್ಲೆಡೆ ಪ್ರಚುರ ಪಡಿಸಲು ಪ್ರತಿ ದಿನ ಶ್ರಮಿಸುತ್ತಿರುವ ಸಾಧಕರಿಗೆ ಗೌರವ ಸಲ್ಲಿಸುವ ಸಲುವಾಗಿ ಜೀ ವಾಹಿನಿ ‘ಹೆಮ್ಮೆಯ ಕನ್ನಡಿಗ-2019’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ತಮ್ಮ ಮಹಾನ್ ಕಾರ್ಯಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡಿರುವ ಸಾಧಕರಿಗೆ, ಬೆಳ್ಳಿ ಪರದೆ ಹಾಗೂ ಸಿನಿಮಾ ರಂಗದಲ್ಲಿ ಸಾಧನೆ ಮಾಡಿರುವ ಎಲ್ಲಾ ಸಾಧಕರಿಗೂ ಗೌರವ ಸಲ್ಲಿಸುವ ಕಾರ್ಯಕ್ರಮವೇ ಹೆಮ್ಮೆಯ ಕನ್ನಡಿಗ. ಕಾರ್ಯಕ್ರಮದ ಚಿತ್ರೀಕರಣ ಈಗಾಗಲೇ ಮುಗಿದಿದ್ದು ಮಾರ್ಚ್ 30 ಹಾಗೂ 31ಕ್ಕೆ ರಾತ್ರಿ 7 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
Advertisement
ರೆಡ್ ಕಾರ್ಪೆಟ್ ಫೋಟೋ ಬೂತ್ ಹೆಮ್ಮೆಯ ಕನ್ನಡಿಗ-2019 ಕಾರ್ಯಕ್ರಮದ ವಿಶೇಷತೆಗಳಲ್ಲಿ ಒಂದಾಗಿತ್ತು. ಕಿರುತೆರೆ ಹಾಗೂ ಹಿರಿತೆರೆಯಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಎಲ್ಲರ ಮನಸೆಳೆದ ನಟ ನಟಿಯರು ರೆಡ್ ಕಾರ್ಪೆಟ್ ಮೇಲೆ ಹೆಮ್ಮೆಯ ಹೆಜ್ಜೆ ಹಾಕಿದರು. ವೀರೇಂದ್ರ ಹೆಗಡೆ, ಸುಧಾಮೂರ್ತಿ, ಪ್ರಕಾಶ್ ಬೆಳವಾಡಿ, ಐಂದ್ರಿತ ರೇ, ದಿಗಂತ್, ಸೃಜನ್ ಲೋಕೇಶ್, ಗಿರಿಜಾ ಲೋಕೇಶ್, ತಾರಾ ಅನುರಾಧ, ವಿ. ಹರಿಕೃಷ್ಣ, ಅರ್ಜುನ್ ಜನ್ಯ, ಹಂಸಲೇಖ, ಗುರುಕಿರಣ್, ಪ್ರಿಯಾಂಕ ಉಪೇಂದ್ರ, ಗರುಡ ರಾಮ್, ಕೆ.ಜಿ.ಎಫ್ ಸಿನಿಮಾ ತಂಡ, ಅರುಂಧತಿ ನಾಗ್, ವಿನಯ ಪ್ರಸಾದ್, ಶ್ರೀ ಮುರಳಿ, ಮೋಕ್ಷಿತ ಪೈ, ಶರತ್ ಭಾರದ್ವಾಜ, ರೂಪಾ ಮೌದ್ಗಿಲ್, ಟೆನ್ನಿಸ್ ಕೃಷ್ಣ, ಬ್ಯಾಂಕ್ ಜನಾರ್ಧನ್, ವಿ. ನಾಗೇಂದ್ರ ಪ್ರಸಾದ್, ಆಶಾ ರಾಣಿ, ರಾಕಿಂಗ್ ಸ್ಟಾರ್ ಯಶ್, ಜಯಂತ್ ಕಾಯ್ಕಿಣಿ, ಅರ್ಜುನ್ ಸರ್ಜಾ, ಮೈಮ್ ರಮೇಶ್, ರಚಿತಾ ರಾಮ್ ಹೀಗೇ ಸ್ಯಾಂಡಲ್ ವುಡ್ ಹಾಗೂ ಜೀ ವಾಹಿನಿಯ ಎಲ್ಲಾ ನಟ ನಟಿಯರ ಸಮಾಗಮ ಹೆಮ್ಮೆಯ ಕನ್ನಡಿಗ 2019 ಕಾರ್ಯಕ್ರಮದಲ್ಲಿ ನಡೆಯಿತು. ಇವರ ಜೊತೆಗೆ ಆಟೋ ಶಿವಕುಮಾರ್ ಸಹ ತಮ್ಮ ಹೆಮ್ಮೆಯ ಆಟೋವನ್ನು ಕಾರ್ಯಕ್ರಮದಲ್ಲಿ ತಂದಿದ್ದು ವಿಶೇಷವಾಗಿತ್ತು.
Advertisement
Advertisement
ರಮೇಶ್ ಅರವಿಂದ್ ಹಾಗೂ ಅನುಶ್ರೀ ಕಾರ್ಯಕ್ರಮದ ನಿರೂಪಣೆಯಲ್ಲಿ ಸಾಕಷ್ಟು ಕಾರ್ಯಕ್ರಮಗಳು ನೆರೆದಿದ್ದ ಜನರನ್ನು ಮನರಂಜಿಸಿದವು. ನಟಿ ಹರಿಪ್ರಿಯ, ನಟಿ ಪ್ರಿಯಾಂಕ ಉಪೇಂದ್ರ, ರಚಿತಾ ರಾಮ್, ರಘು ದೀಕ್ಷಿತ್, ಭಾವನಾ ಅದ್ಭುತ ನೃತ್ಯ ಪ್ರದರ್ಶನವನ್ನು ನೀಡಿದರು.
Advertisement
ಇನ್ನು ಈ ವರ್ಷ ಇಡೀ ದೇಶವೇ ಕನ್ನಡ ಸಿನಿಮಾ ರಂಗದತ್ತ ಮುಖ ಮಾಡಿ ನೋಡುವಂತೆ ಮಾಡಿದ ಕೆ.ಜಿ.ಎಫ್ ಸಿನಿಮಾ ಹಾಡುಗಳಿಗೆ ಜೀ ಕುಟುಂಬದ ನಟರು ಹೆಜ್ಜೆ ಹಾಕಿದರು. ಜೊತೆಗೆ ಜೋಡಿಹಕ್ಕಿ ಧಾರಾವಾಹಿಯ ಚೈತ್ರ ರಾವ್, ಬ್ರಹ್ಮಗಂಟು ಗೀತಾ ಹಾಗೂ ಇನ್ನುಳಿದ ಜೀ ವಾಹಿನಿಯ ನಟಿಯರು ಜಾನಪದ ನೃತ್ಯ ಮಾಡಿ ಗಮನ ಸೆಳೆದರು.