ರಾಮನಗರ-ತುಮಕೂರು ಮಧ್ಯೆ ಹೇಮಾವತಿ ಕಲಹ – ಸರ್ವಪಕ್ಷ ಸಭೆ ಕರೆಯಲು ಬಿಜೆಪಿ ಆಗ್ರಹ

tumakuru outrage erupts against hemavati express link canal project work temporarily halted 1

ಬೆಂಗಳೂರು: ರಾಮನಗರಕ್ಕೆ ಹೇಮಾವತಿ ನೀರು (Hemavati Water) ಖಂಡಿಸಿ ಹೋರಾಟ ನಡೆಸಿದವರ ಮೇಲೆ ಎಫ್‌ಐಆರ್ ಹಾಕಿರುವುದನ್ನು ಬಿಜೆಪಿ ನಾಯಕರು (BJP Leaders) ತೀವ್ರವಾಗಿ ಖಂಡಿಸಿದ್ದಾರೆ.

ಈ ಕೂಡಲೇ ಸರ್ಕಾರ ಹೋರಾಟಗಾರರ ಮೇಲೆ ಹಾಕಿದ ಕೇಸ್‌ಗಳನ್ನು ವಾಪಸ್ ಪಡೆಯಬೇಕು. ಅಲ್ಲದೇ ಸರ್ವಪಕ್ಷ ಸಭೆ ಕರೆದು ಎರಡೂ ಜಿಲ್ಲೆಗಳ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: Video | ಹೇಮಾವತಿ ಕೆನಾಲ್‌ ಕಾಮಗಾರಿ ವಿರೋಧಿಸಿ ಪ್ರತಿಭಟನೆ; ನೂರಾರು ರೈತಹೋರಾಟಗಾರರ ವಿರುದ್ಧ FIR

R Ashok 3

ಬೆಂಗಳೂರಿನಲ್ಲಿ ಮಾತಾಡಿದ ವಿಪಕ್ಷ ನಾಯಕ ಆರ್. ಅಶೋಕ್ (R Ashoka), ರಾಮನಗರಕ್ಕೆ ಹರಿಸುವ ಪ್ರಯತ್ನದ ವಿರುದ್ಧ ಸರ್ಕಾರ ತನ್ನ ಎಡಬಿಡಂಗಿತನದಿಂದ ತುಮಕೂರು, ರಾಮನಗರ ರೈತರನ್ನು ಪರಸ್ಪರ ಎತ್ತಿ ಕಟ್ಟಿದೆ. ಸರ್ಕಾರ ಎರಡೂ ಜಿಲ್ಲೆಗಳ ರೈತರಿಗೆ ಸಮಾಧಾನ ಆಗುವ ಪರಿಹಾರ ಕಂಡುಕೊಳ್ಳಲಿ. ಎರಡೂ ಜಿಲ್ಲೆಗಳ ರೈತ ಪ್ರಮುಖರ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲಿ ಎಂದು ಆಗ್ರಹಿಸಿದರು.

ನಾವು ನೀರು ತಗೊಂಡೇ ಹೋಗ್ತೀವಿ ಅಂತ ಡಿಕೆಶಿ ದಾದಾಗಿರಿ ಮಾಡೋದು ಸರಿಯಲ್ಲ. ಹೋರಾಟಗಾರರ ಮೇಲೆ ಎಫ್ಐಆರ್ ಹಾಕಿ ಹೆದರಿಸಿ ಬೆದರಿಸೋದು ನಡೆಯಲ್ಲ. ಕೂಡಲೇ ಕೇಸ್ ವಾಪಸ್ ಪಡೆಯಲಿ ಎಂದು ಅಶೋಕ್ ಕಿಡಿ ಕಾರಿದ್ರು. ಇದನ್ನೂ ಓದಿ: ಹೇಮಾವತಿ ಲಿಂಕ್ ಕೆನಾಲ್ ಕದನ – ಇಬ್ಬರು ಸ್ವಾಮೀಜಿಗಳು ಸೇರಿ ನೂರಾರು ರೈತರ ವಿರುದ್ಧ FIR

ಇನ್ನೂ ಛಲವಾದಿ ನಾರಾಯಣ ಸ್ವಾಮಿ ಮಾತಾಡಿ, ಹೇಮಾವತಿ ನೀರು ಬಗ್ಗೆ ಎರಡೂ ಜಿಲ್ಲೆಗಳ ರೈತರನ್ನು ಸರ್ಕಾರ ಒಪ್ಪಿಸಿ, ಕನ್ವಿನ್ಸ್ ಮಾಡಬೇಕು. ಅದು ಬಿಟ್ಟು ಏಕಾಏಕಿ ಕ್ರಮ ತಗೊಳ್ಳೋದು, ಕೇಸ್ ಹಾಕೋದು ಮಾಡಬೇಡಿ ಎರಡೂ ಜಿಲ್ಲೆಗಳ ಹಿತದ ದೃಷ್ಟಿಯಿಂದ ಸರ್ಕಾರ ಸಮಸ್ಯೆ ಬಗೆಹರಿಸಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ʻಆಪರೇಷನ್‌ ಸಿಂಧೂರʼ ವೇಳೆ ಭಾರತ ಧ್ವಂಸಗೊಳಿಸಿದ್ದ ಮುರಿಡ್ಕೆ ಮಸೀದಿಯಲ್ಲಿ ಮತ್ತೆ ತಲೆಎತ್ತಿದ ಲಷ್ಕರ್‌ ಗುಂಪು; ವಿಡಿಯೋ ವೈರಲ್‌

ಇನ್ನು ಎಕ್ಸ್‌ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸ್ವಾಮೀಜಿಗಳು ಸೇರಿ ಶಾಸಕರು ಹಾಗೂ ರೈತ ಹೋರಾಟಗಾರರ ಮೇಲೆ FIR ದಾಖಲಿಸಿರುವ ಕ್ರಮ ಅತ್ಯಂತ ಖಂಡನೀಯ. ಕಾಂಗ್ರೆಸ್ ಸರ್ಕಾರ ಒಡೆದು ಅಳುವ ನೀತಿ ಅನುಸರಿಸುತ್ತಿದೆ. ಈ ಕೂಡಲೇ ಸರ್ವ ಪಕ್ಷಗಳ ಸಭೆ ಕರೆದು ಸಂಬಂಧಿಸಿದ ಜಿಲ್ಲೆಗಳ ಜನಪ್ರತಿನಿಧಿಗಳು, ಪ್ರಮುಖರು ಹಾಗೂ ರೈತ ಮುಖಂಡರೊಂದಿಗೆ ಚರ್ಚಿಸಲಿ ಎಂದು ಆಗ್ರಹಿಸಿದರು.