ರಾಂಚಿ: ಭೂ ಹಗರಣ ಪ್ರಕರಣದಲ್ಲಿ ಜೈಲಿನಲ್ಲಿರುವ ಮಾಜಿ ಸಿಎಂ ಹೇಮಂತ್ ಸೊರೆನ್ (Hemant Soren) ಅವರ ಪತ್ನಿ ಕಲ್ಪನಾ ಸೊರೆನ್ (Kalpana Soren)ಅವರು ಸೋಮವಾರ ಗಂಡೇ ಕ್ಷೇತ್ರದಿಂದ ಜಾರ್ಖಂಡ್ ವಿಧಾನಸಭೆಯ ಸದಸ್ಯರಾಗಿ (Jharkhand MLA) ಪ್ರಮಾಣ ವಚನ ಸ್ವೀಕರಿಸಿದರು.
ಸ್ಪೀಕರ್ ರವೀಂದ್ರ ನಾಥ್ ಮಹತೋ ಕಲ್ಪನಾ ಸೊರೆನ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಚಂಪೈ ಸೊರೆನ್ ಮತ್ತು ಇತರ ಜೆಎಂಎಂ ನಾಯಕರು ಉಪಸ್ಥಿತರಿದ್ದರು. ಇದನ್ನೂ ಓದಿ: ಹಾಸ್ಟೆಲ್‍ನಲ್ಲೇ ನೇಣು ಬಿಗಿದುಕೊಂಡು ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ!
ಗಂಡೇ ಉಪಚುನಾವಣೆಯಲ್ಲಿ ಕಲ್ಪನಾ ಸೊರೆನ್ ಅವರು ಬಿಜೆಪಿಯ ದಿಲೀಪ್ ಕುಮಾರ್ ವರ್ಮಾ ಅವರನ್ನು 27,149 ಮತಗಳ ಅಂತರದಿಂದ ಸೋಲಿಸಿದರು. ಜೆಎಂಎಂ ಶಾಸಕ ಸರ್ಫರಾಜ್ ಅಹ್ಮದ್ ರಾಜೀನಾಮೆ ನೀಡಿದ ನಂತರ ಈ ಸ್ಥಾನ ತೆರವಾಗಿತ್ತು. ಮೇ 20 ರಂದು ಮತದಾನ ನಡೆದಿದ್ದು, 3.16 ಲಕ್ಷ ಅರ್ಹ ಮತದಾರರಲ್ಲಿ 2.17 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಇದನ್ನೂ ಓದಿ: ಕ್ರಿಮಿನಲ್‍ಗಳಿಗೆ ಇಲಾಖೆ ಮಾಹಿತಿ ರವಾನೆ – ಐವರು ಪೊಲೀಸ್ ಸಿಬ್ಬಂದಿ ಅಮಾನತು
ಹೇಮಂತ್ ಸೊರೆನ್ ಅವರನ್ನು ಜನವರಿ 31 ರಂದು ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಕೇಸ್‌ನಲ್ಲಿ ಇಡಿ ಬಂಧಿಸಿತ್ತು. ಬಂಧನಕ್ಕೂ ಮುನ್ನ ಹೇಮಂತ್ ಸೊರೆನ್ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇವರ ರಾಜೀನಾಮೆ ಬಳಿಕ ಚಂಪೈ ಸೊರೆನ್ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದರು. ಇದನ್ನೂ ಓದಿ: Modi Cabinet: ಕೇಂದ್ರ ಸಚಿವರಿಗೆ ಖಾತೆ ಹಂಚಿಕೆ – ಬಲಿಷ್ಠ ಖಾತೆಗಳನ್ನು ತನ್ನಲ್ಲೇ ಉಳಿಸಿಕೊಂಡ ಬಿಜೆಪಿ – ಇಲ್ಲಿದೆ ಲಿಸ್ಟ್