ಧಾರವಾಡ/ಹುಬ್ಬಳ್ಳಿ/ವಿಜಯಪುರ/ಬೆಂಗಳೂರು: ಮಳೆಯಿಂದಾಗಿ ಕೊಡಗಿನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗೆ ಬರಲು ಹಣ ಹಾಗೂ ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ವಾಣಿಜ್ಯ ನಗರಿಯ ವಿವಿಧ ಸಂಘಟನೆಯ ಕಾರ್ಯಕರ್ತರು ಮುಂದಾಗಿದ್ದಾರೆ.
ಧಾರವಾಡದ ಎಸ್‍ಯುಸಿಐ ಸಂಘಟನೆ ಕಾರ್ಯಕರ್ತರು ಹಣ ಸಂಗ್ರಹ ಮಾಡಿ ಕಳಿಸಲು ಮುಂದಾಗಿದ್ದು, ನಗರದ ಜುಬ್ಲಿ ವೃತ್ತದಲ್ಲಿ ವಾಹನ ಸವಾರರ ಹಾಗೂ ಜನರ ಬಳಿ ಹಣ ಸಂಗ್ರಹ ಮಾಡುತ್ತಿದ್ದಾರೆ. ಈ ವೇಳೆ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಬಂದು ಸಹಾಯ ನೀಡುತ್ತಿದ್ದಾರೆ. ಇಂದು ಸಂಜೆಯವರೆಗೂ ಹಣ ಸಂಗ್ರಹಿ ಬಳಿಕ ಸಂಗ್ರಹವಾದ ಹಣ ಹಾಗೂ ವಸ್ತುಗಳನ್ನ ತಾಲೂಕಿ ಅಧಿಕಾರಿಗಳ ನೆರವಿನ ಮೂಲಕ ಪ್ರವಾಹ ಸಂತ್ರಸ್ತರಿಗೆ ತಲುಪಿಸಲಿದ್ದಾರೆ.
Advertisement
Advertisement
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು, ವ್ಯಾಪಾರಸ್ಥರ ಬಳಿ ಹಣ್ಣು, ಬ್ರೆಡ್ ಸೇರಿದಂತೆ ಅವಶ್ಯಕ ವಸ್ತುಗಳನ್ನು ಸಂಗ್ರಹಿಸಿದ್ದಾರೆ. ತಹಶಿಲ್ದಾರರ ಮೂಲಕ ಕೊಡಗಿಗೆ ಸಂಗ್ರಹಿಸಿದ ಪ್ರವಾಹ ಸ್ಥಳಗಳಿಗೆ ತಲುಪಿಸಲಿದ್ದಾರೆ.
Advertisement
ಕಾಲೇಜು ವಿದ್ಯಾರ್ಥಿಗಳು ಸಾಥ್: ಹುಬ್ಬಳ್ಳಿ ನಗರದ ಕೆಎಚ್ ಪಾಟೀಲ್ ಕಾಲೇಜು ವಿದ್ಯಾರ್ಥಿಗಳು ಕೂಡ ಹಣ ಸಂಗ್ರಹ ಮಾಡಿ ಅವಶ್ಯಕ ವಸ್ತುಗಳನ್ನು ಖರೀದಿಸಿ ಪ್ಯಾಕ್ ಮಾಡಿ ಕಳುಹಿಸಿದ್ದಾರೆ. ಒಂದೇ ದಿನದಲ್ಲಿ ಸಾವಿರಾರು ರೂಪಾಯಿ ಮೌಲ್ಯದ ವಸ್ತುಗಳನ್ನು ಖರೀದಿಸಿ ಪ್ಯಾಕ್ ಮಾಡಿದ್ದಾರೆ. ತಮ್ಮ ಕಾರ್ಯಕ್ಕೆ ಸಹಕಾರ ನೀಡುವಂತೆ ಇತರೇ ಕಾಲೇಜು ವಿದ್ಯಾರ್ಥಿಗಳನ್ನು ಪ್ರೇರೆಪಿಸಿದ್ದು, ನೆರೆ ಸಂತ್ರಸ್ತರಿಗೆ ಸಹಾಯ ಮಾಡುವಂತೆ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.
Advertisement
ಜಾತ್ರೆಗೆ ಕೂಡಿಟ್ಟ ಹಣ ನೀಡಿದ ಬಾಲಕಿ: ವಿಜಯಪುರ ತಾಲೂಕಿನ ಸಾರವಾಡ ಗ್ರಾಮದ ಸುಷ್ಮಿತಾ ತಮ್ಮ ಊರಿನ ಜಾತ್ರೆಗಾಗಿ ಕೂಡಿಟ್ಟ ಹಣವನ್ನ ಸಂತ್ರಸ್ತರ ನೆರವಿಗೆ ನೀಡಿ ಮಾನವೀಯತೆ ಮೆರೆದ್ದಾಳೆ. ಸುಷ್ಮಿತಾ ಸಾರವಾಡ ಗ್ರಾಮದ ಸರಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದು, ಕಳೆದ ಆರು ತಿಂಗಳಿಂದ ನಿಂದ ಕೂಡಿಟ್ಟ ಹಣವನ್ನು ನೀಡಿದ್ದಾಳೆ. ಬಾಲಕಿ ನಡೆ ಕಂಡ ಹಲವರು ಪ್ರೇರಣೆಗೊಂಡು ನೆರೆಯ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಲು ಮುಂದಾಗುತ್ತಿದ್ದಾರೆ.
ಅನೇಕಲ್ ವಿದ್ಯಾರ್ಥಿಗಳು ನೆರವು: ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ಗೋಪಾಲ್ ರಾಜು ಕಾಲೇಜ್ ವಿದ್ಯಾರ್ಥಿಗಳು ಹಾಗೂ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಇಂದು ಆನೇಕಲ್ ಪಟ್ಟಣದಲ್ಲಿ ಪರಿಹಾರ ನಿಧಿ ಹಾಗೂ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿ ಕೊಡಗಿನಲ್ಲಿರುವಂತಹ ಸಂತ್ರಸ್ತರಿಗೆ ರವಾನೆ ಮಾಡಿದ್ದಾರೆ. ಮೈಸೂರಿನಲ್ಲೂ ಹಲವರು ಪಬ್ಲಿಕ್ ಟಿವಿ ಕಚೇರಿಗೆ ಆಗಮಿಸಿ ಕೊಡವರ ನೆರವಿಗೆ ಅಗತ್ಯ ವಸ್ತುಗಳು ಹಾಗೂ ಹಣ ಕಾಸು ಸಹಾಯ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv