ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದ ಕಾರಣ ತಿಳಿದುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ವಿಜ್ಞಾನಿಗಳ ನೆರವು ಪಡೆದು ವರದಿ ತಯಾರಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಬಿ.ಸಿ.ನಾಗೇಶ್ ಭರವಸೆ ನೀಡಿದರು.
Advertisement
ಮಡಿಕೇರಿ ತಾಲೂಕಿನ ಮದೆನಾಡು ಸಮೀಪದಲ್ಲಿ ಇತ್ತೀಚಿಗೆ ಸಂಭವಿಸಿದ ಭೂಕುಸಿತ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಮದೆನಾಡು ಬಳಿ 2018ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಜಾಗದಲ್ಲಿ ಇದೀಗ ಮತ್ತೊಮ್ಮೆ ಭೂಕುಸಿತಗೊಂಡಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ ಎಂದು ವಿವರಿಸಿದರು. ಇದನ್ನೂ ಓದಿ: 5ನೇ ಮಹಡಿ ಕಿಟಕಿಯಿಂದ ಬೀಳುತ್ತಿದ್ದ 2 ವರ್ಷದ ಕಂದಮ್ಮನನ್ನು ರಕ್ಷಿಸಿದ – ನಮ್ಮ ಹೀರೋ ಎಂದ ನೆಟ್ಟಿಗರು
Advertisement
Advertisement
ಈ ಬಗ್ಗೆ ವೈಜ್ಞಾನಿಕ ವರದಿ ಅಗತ್ಯವಾಗಿರುವ ಕಾರಣ ಜಿಲ್ಲೆಗೆ ವಿಜ್ಞಾನಿಗಳ ತಂಡವನ್ನು ಕಳುಹಿಸಿ ಅವರು ಪರಿಶೀಲಿಸಿ ಕಾರಣ ಹಾಗೂ ಸೂಕ್ತ ಕ್ರಮಕೈಗೊಳ್ಳಬೇಕಾದ ಬಗ್ಗೆ ತಾಂತ್ರಿಕವಾಗಿ ವರದಿ ನೀಡಬೇಕು. ಬಳಿಕ ಸರ್ಕಾರ ಇದಕ್ಕೆ ಅಗತ್ಯ ಕ್ರಮವಹಿಸಲಿದೆ. ಮಣ್ಣು ಜಾರಿದ ಪರಿಣಾಮ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ ಎಂದು ತಿಳಿಸಿದರು
Advertisement
2018ರಲ್ಲಿಯೂ ವೈಜ್ಞಾನಿಕ ವರದಿ ನೀಡಲಾಗಿತ್ತು. ಇದೀಗ ಮತ್ತೊಮ್ಮೆ ಭೂಕುಸಿತ ಸಂಭವಿಸಿದೆ. ಈ ಸಂಬಂಧ ಪರಿಹಾರ ಮಾರ್ಗೋಪಾಯ ಕಂಡುಕೊಳ್ಳಲಾಗುತ್ತದೆ. ಜಿಲ್ಲೆಯಲ್ಲಿ ಉಂಟಾದ ಭೂಕಂಪನದ ನಂತರವೂ ನುರಿತರು ಆಗಮಿಸಿದ್ದರು. ಮಳೆಗಾಲ ಮುಗಿದ ಬಳಿಕ ವೈಜ್ಞಾನಿಕ ಕಾರಣ ತಿಳಿದುಕೊಳ್ಳಬಹುದಾಗಿದೆ ಎಂದರು. ಇದನ್ನೂ ಓದಿ: ಮೂರಂತಸ್ತಿನ ಕಟ್ಟಡದಲ್ಲಿ ನೇತಾಡುತ್ತಿದ್ದ ಮಕ್ಕಳ ಮುದ್ದಿನ ಬೆಕ್ಕು – ಯಶಸ್ವಿ ಕಾರ್ಯಾಚರಣೆ