ಬಾಲಿವುಡ್ ಹಿರಿಯ ನಟ ಶತ್ರುಘ್ನ ಸಿನ್ಹಾ ಮಗಳು ಸೋನಾಕ್ಷಿ (Sonakshi Sinha) ಇಂದು (ಜೂನ್ 23) ಝಹೀರ್ ಇಕ್ಬಾಲ್ (Zaheer Iqbal) ಜೊತೆ ಮದುವೆಗೆ ರೆಡಿಯಾಗಿದ್ದಾರೆ. ಮಗಳ ಮದುವೆಗೆ (Wedding) ಶತ್ರುಘ್ನ ಸಿನ್ಹಾ (Shatrughan Sinha) ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಬೆನ್ನಲ್ಲೇ ನಟಿ ಇಸ್ಲಾಂಗೆ ಮತಾಂತರ ಆಗ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಇದಕ್ಕೆ ಸೋನಾಕ್ಷಿ ಮದುವೆಯಾಗಲಿರುವ ವರ ಝಹೀರ್ ತಂದೆ ಇಕ್ಬಾಲ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಮತ್ತೆ ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ ‘ಸೀತಾರಾಮಂ’ ಜೋಡಿ
ಇಕ್ಬಾಲ್ ರತಾನ್ಸಿ ಮಾತನಾಡಿ, ಸೋನಾಕ್ಷಿ ಸಿನ್ಹಾ ಮತಾಂತರಗೊಳ್ಳುತ್ತಿಲ್ಲ. ನಾನು ಮಾನವೀಯತೆಯನ್ನು ನಂಬುತ್ತೇನೆ. ಹಿಂದೂಗಳು ದೇವರನ್ನು ಭಗವಾನ್ ಮತ್ತು ಮುಸ್ಲಿಮರು ಅಲ್ಲಾಹ್ ಎಂದು ಕರೆಯುತ್ತಾರೆ. ಆದರೆ ಕೊನೆಯಲ್ಲಿ ನಾವೆಲ್ಲರೂ ಮನುಷ್ಯರು. ನನ್ನ ಹಾರೈಕೆ ಝಹೀರ್ ಮತ್ತು ಸೋನಾಕ್ಷಿ ಅವರ ಮೇಲಿದೆ ಎಂದಿದ್ದಾರೆ.
ಸೋನಾಕ್ಷಿ ಸಿನ್ಹಾ ಅವರು ಝಹೀರ್ ಇಕ್ಬಾಲ್ ಹಲವು ವರ್ಷಗಳ ಡೇಟಿಂಗ್ ನಂತರ ಮದುವೆಯಾಗುತ್ತಿದ್ದಾರೆ. ಮುಂಬೈನಲ್ಲಿ ಸೋನಾಕ್ಷಿ ಸಿನ್ಹಾ ಅವರು ಜೂನ್ 23ರಂದು ಮದುವೆಯಾಗಲಿದ್ದು, ಶುಕ್ರವಾರ (ಜೂನ್ 21) ಮೆಹಂದಿ ಶಾಸ್ತ್ರವು ಅದ್ಧೂರಿಯಾಗಿ ಜರುಗಿದೆ.