ಸಾಂಪ್ರದಾಯಿಕವಾಗಿ ನಡೆಯಿತು ‘ಹೆಬ್ಬುಲಿ’ ನಟಿಯ ಸೀಮಂತ ಶಾಸ್ತ್ರ

Public TV
1 Min Read
amala paul

‘ಹೆಬ್ಬುಲಿ’ (Hebbuli) ಬೆಡಗಿ ಅಮಲಾ ಪೌಲ್ (Amala Paul) ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸಾಂಪ್ರದಾಯಿಕ ಶೈಲಿಯಲ್ಲಿ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದೆ. ಸೀಮಂತ ಶಾಸ್ತ್ರದ ಸುಂದರ ಫೋಟೋಗಳನ್ನು ನಟಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಲೋಕಸಭೆ ಚುನಾವಣೆ: 142 ಕೋಟಿ ರೂ. ಆಸ್ತಿ ಘೋಷಿಸಿದ ನಟಿ ಹೇಮಾ ಮಾಲಿನಿ

amala paul 1

ಕೆಂಪು ಬಾರ್ಡ್‌ರ್‌ ಇರುವ ಬಿಳಿ ಬಣ್ಣದ ಸೀರೆಯುಟ್ಟು ಗಂಡನ ಜೊತೆ ಕುಳಿತು ಪೋಸ್ ನೀಡಿದ್ದಾರೆ. ಸೀರೆಯಲ್ಲಿ ನಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಪತಿ ಜಗತ್ ದೇಸಾಯಿ (Jagath Desai) ಬಿಳಿ ಬಣ್ಣದ ಕುರ್ತಾದಲ್ಲಿ ಕಾಣಿಸಿಕೊಂಡಿದ್ದಾರೆ. ಅಮಲಾ ಕುಟುಂಬದಲ್ಲಿ ಸದ್ಯ ಸಂತಸ ಮನೆ ಮಾಡಿದೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಅಮಲಾಗೆ ಅಭಿಮಾನಿಗಳು ಇದೀಗ ಶುಭಹಾರೈಸುತ್ತಿದ್ದಾರೆ.

amala paul 2

ಇನ್ನೂ ಕಳೆದ ನವೆಂಬರ್‌ನಲ್ಲಿ ಮದುವೆಯಾಗಿದ್ದ ‘ಹೆಬ್ಬುಲಿ’ (Hebbuli) ಖ್ಯಾತಿಯ ನಟಿ ಅಮಲಾ ಪೌಲ್, ಅಭಿಮಾನಿಗಳಿಗೆ ಖುಷಿ ಮತ್ತು ಶಾಂಕಿಂಗ್ ಸುದ್ದಿಯನ್ನು ಒಟ್ಟೊಟ್ಟಿಗೆ ನೀಡಿದ್ದರು. ಅವರು ಮದುವೆಯಾಗಿ ಇನ್ನೂ ಎರಡು ತಿಂಗಳೂ ಆಗಿಲ್ಲ, ಆಗಲೇ ತಾವು ಗರ್ಭಿಣಿ ಎಂದು ತಿಳಿಸಿದ್ದರು.

 

View this post on Instagram

 

A post shared by Amala Paul (@amalapaul)

ಮದುವೆಗೂ ಮುನ್ನ ಅಮಲಾ ಗರ್ಭಿಣಿಯಾಗಿದ್ದರಾ ಎನ್ನುವ ಅನುಮಾನವನ್ನು ಹಲವರು ವ್ಯಕ್ತಪಡಿಸಿದ್ದರು. ಕೆಲವರು ಮದುವೆಗೂ ಮುನ್ನ ಅವರು ಸಹಜೀವನ ನಡೆಸುತ್ತಿರಬೇಕು. ಪ್ರೆಗ್ನೆಂಟ್ ಅಂತ ಗೊತ್ತಾದ ತಕ್ಷಣ ಮದುವೆಯಾಗಿರಬೇಕು ಎಂದು ಅನುಮಾನವನ್ನೂ ನೆಟ್ಟಿಗರು ವ್ಯಕ್ತಪಡಿಸಿದ್ದರು. ಇದನ್ನೂ ಓದಿ:‘ವಿಕ್ಟೋರಿಯಾ ಮಾನ್ಸನ್’ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದ ಶಿವಣ್ಣ

Amala Paul 3

ಅಂದಹಾಗೆ, ಅಮಲಾ ಪೌಲ್ ಅವರು 2023ರ ನವೆಂಬರ್‌ನಲ್ಲಿ ಜಗತ್ ದೇಸಾಯಿ ಜೊತೆ ಕೊಚ್ಚಿಯಲ್ಲಿ ಮದುವೆಯಾದರು. ಇದು ಅಮಲಾ 2ನೇ ಮದುವೆಯಾಗಿತ್ತು. ನಿರ್ದೇಶಕ ವಿಜಯ್ ಜೊತೆಗಿನ ಡಿವೋರ್ಸ್ ನಂತರ ಜಗತ್ ಜೊತೆ ಹಲವು ವರ್ಷಗಳು ಡೇಟಿಂಗ್ ಮಾಡಿದ್ದರು ಅಮಲಾ.

ಕನ್ನಡ, ತಮಿಳು ಸೇರಿದಂತೆ ಬಹುಭಾಷೆಯಲ್ಲಿ ನಾಯಕಿಯಾಗಿ ನಟಿಸುತ್ತಾ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಮದುವೆ ನಂತರ ‘ಆಡುಜೀವಿತಂ’ ಸಿನಿಮಾ ರಿಲೀಸ್ ಆಗಿ ಜನರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಅದರಲ್ಲಿ ಅಮಲಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Share This Article