– ವೈಜ್ಞಾನಿಕ ಅಧ್ಯಯನದ ಬಳಿಕ ಸ್ವೀಕಾರ ಮಾಡಿ
ರಾಮನಗರ: ಜಾತಿ ಗಣತಿ (Caste Census) ಸ್ವೀಕಾರ ವಿಚಾರಕ್ಕೆ ಕಾಂಗ್ರೆಸ್‌ನ ಹಲವು ನಾಯಕರೇ ಅಪಸ್ವರ ಎತ್ತಿದ್ದು, ಮಾಗಡಿಯಲ್ಲಿ (Magadi) ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ವೈಜ್ಞಾನಿಕ ಅಧ್ಯಯನಕ್ಕೆ ಒತ್ತಾಯಿಸಿದ್ದಾರೆ.
Advertisement
ಜಾತಿ ಗಣತಿ ವರದಿ ಸ್ವೀಕಾರದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಜಾತಿಗಣತಿ ವಿಚಾರದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ಎಲ್ಲಾ ಸಮುದಾಯಕ್ಕೂ ಸಮಾನ ಅವಕಾಶ ಸಿಗಬೇಕು. ಎಲ್ಲಾ ಸಮುದಾಯಗಳ ಅಭಿವೃದ್ಧಿಗಾಗಿ ಈ ಜಾತಿ ಗಣತಿ ಮಾಡಲಾಗುತ್ತಿದೆ. ಆದರೆ ಈ ಜನಗಣತಿಯಲ್ಲಿ ಕೆಲ ದೋಷಗಳಿವೆ. ನಾಲ್ಕು ಜನರ ಮನೆಗೆ ಹೋಗಿದ್ರೆ, ಇನ್ನೂ ಕೆಲವರ ಮನೆಗೆ ಹೋಗಿ ಗಣತಿ ಮಾಡಿಲ್ಲ. ನಮ್ಮ ಸಂಬಂಧಿಕರ ಹಲವು ಮನೆಗಳಿಗೆ ಬಂದೇ ಇಲ್ಲ. ಹೀಗಾಗಿ ಈ ರೀತಿಯ ಜಾತಿ ಗಣತಿಯಲ್ಲಿ ಕೆಲ ಗೊಂದಲಗಳಿವೆ ಎಂದರು. ಇದನ್ನೂ ಓದಿ: ಎಲೆಕ್ಷನ್ ಹೊತ್ತಲ್ಲಿ ಜಾತಿಗಣತಿ ಜ್ವಾಲೆಯಲ್ಲಿ ಸರ್ಕಾರ – ವರದಿಯಲ್ಲಿ ಏನಿದೆ? ಮುಂದೇನು?
Advertisement
Advertisement
ನಮ್ಮ ವೀರಶೈವ ಲಿಂಗಾಯತ ಸಮುದಾಯದಲ್ಲಿ ಅನೇಕ ಉಪಪಂಗಡಗಳಿವೆ. 103 ಉಪ ಪಂಗಡಗಳಿರುವುದರಿಂದ ನಮ್ಮ ಸಮುದಾಯದ ಕೂಲಂಕುಷ ಅಧ್ಯಯನ ಮಾಡಬೇಕು. ಬಳಿಕ ವೈಜ್ಞಾನಿಕ ಗಣತಿ ಮಾಡಬೇಕು. ಆಮೇಲೆ ಸ್ವಲ್ಪ ಸಮಯ ತೆಗೆದುಕೊಂಡು ಸ್ವೀಕಾರ ಮಾಡಬೇಕು ಎಂದು ನಾನು ಮನವಿ ಮಾಡುತ್ತೇನೆ. ಇದರಲ್ಲಿ ನಾವು ರಾಜಕೀಯ ಮಾಡುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಗೃಹಲಕ್ಷ್ಮಿ ಹಣ 2,000 ಅಲ್ಲ, 4 ಸಾವಿರ ರೂ. ಕೊಡಬಹುದು: ಡಿ.ಕೆ ಸುರೇಶ್ ಹೀಗಂದಿದ್ದೇಕೆ?
Advertisement