– ಎಸ್ಟೀಮ್ ಮಾಲ್, ತುಮಕೂರು ರಸ್ತೆ ವಾಹನಗಳಿಗೆ ಮೇಖ್ರೀ ಸರ್ಕಲ್ ಪ್ರವೇಶ ತುಂಬಾ ಸುಲಭ
ಬೆಂಗಳೂರು: ಸಿಲಿಕಾನ್ ಸಿಟಿ ವಾಹನ ಸವಾರರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಹೆಬ್ಬಾಳ ಮೇಲ್ಸೆತುವೆಯ ಹೊಸ ಲೂಪ್ ರ‍್ಯಾಂಪ್ (Flyover Loop Ramp) ಸಂಚಾರಕ್ಕೆ ಮುಕ್ತವಾಗಿದ್ದು, ಯಲಹಂಕ, ಸಹಕಾರನಗರ, ಜಕ್ಕೂರು, ತುಮಕೂರು ರಸ್ತೆಯ ವಾಹನಗಳು ನಗರ ಪ್ರವೇಶಿಲು ತುಂಬಾ ಅನುಕೂಲ ಆಗಿದೆ. ಹೊಸ ಲೂಪ್ ರ‍್ಯಾಂಪ್ ಓಪನ್‌ಗೆ ವಾಹನ ಸವಾರರು ಖುಷಿಯಾಗಿದ್ದಾರೆ.
ಹೌದು. ಹಲವು ವರ್ಷಗಳಿಂದ ಕಾಯುತ್ತಾ ಇದ್ದ ವಾಹನ ಸವಾರರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಹೆಬ್ಬಾಳ ಮೇಲ್ಸೆತುವೆಯ ಮತ್ತೊಂದು ಹೊಸ ಲೂಪ್ ರ‍್ಯಾಂಪ್ ಸಂಚಾರಕ್ಕೆ ಮುಕ್ತ ಆಗಿದೆ. ಎಸ್ಟಿಮ್ ಮಾಲ್ ಮತ್ತು ತುಮಕೂರು ರಸ್ತೆ ವಾಹನ ಸವಾರರು ಮೇಖ್ರಿ ಸರ್ಕಲ್ ಪ್ರವೇಶಕ್ಕೆ ತುಂಬಾ ಅನುಕೂಲಕರ ಮತ್ತು ಯಲಹಂಕ, ಜಕ್ಕೂರು, ಸಹಕಾರನಗರದಿಂದ ನಗರದ ಪ್ರವೇಶಕ್ಕೆ ತುಂಬಾ ಅನುಕೂಲ ಈ ಹೊಸ ಲೂಪ್ ರ‍್ಯಾಂಪ್. ಇದನ್ನೂ ಓದಿ: ಡಿಕೆಶಿ ಏನೇ ಮಾಡಿದ್ರೂ ನನ್ನ ಸ್ಟ್ಯಾಂಡ್ ಬದಲಾಗಲ್ಲ, ನಾನು ಸಿದ್ದರಾಮಯ್ಯ ಪರವೇ: ಕೆ.ಎನ್ ರಾಜಣ್ಣ
ಕಳೆದ ಆಗಸ್ಟ್ ನಲ್ಲಿ ಕೆ.ಆರ್ ಪುರಂನಿಂದ ಮೇಖ್ರಿ ಸರ್ಕಲ್ ಕಡೆಗೆ ಲೂಪ್ ರ‍್ಯಾಂಪ್ ಓಪನ್ ಆಗಿತ್ತು. ಈಗ ಮತ್ತೆ ನಿನ್ನೆಯಿಂದ ಎಸ್ಟಿಮ್ ಮಾಲ್‌ನಿಂದ ಮೇಖ್ರಿ ಸರ್ಕಲ್ ಕಡೆಗೆ ಹೊಸ ಲೂಪ್ ರ‍್ಯಾಂಪ್ ಓಪನ್ ಆಗಿರೋದು ವಾಹನ ಸವಾರರಿಗೆ ಖುಷಿ ತಂದಿದೆ. ವಾಹನ ಸವಾರರು ಟ್ರಾಫಿಕ್ ಕಡಿಮೆ ಆಗಿದೆ ತುಂಬಾ ಅನುಕೂಲ ಆಗಿದೆ ಅಂತಿದ್ದಾರೆ. ಇದನ್ನೂ ಓದಿ: ಸಾವು ರಪ್ಪನೆ ಕಣ್ಮುಂದೆ ಬಂದು ಹೋಯ್ತು – ಕಾರು ಅಪಘಾತದ ಬಳಿಕ ನೋರಾ ಫತೇಹಿ ರಿಯಾಕ್ಷನ್


