ಬೆಂಗಳೂರು: ಗುಡುಗು ಮಿಂಚು ಸಹಿತ ಶನಿವಾರ ಸಂಜೆಯಿಂದಲೇ ನಗರದಲ್ಲಿ ಭಾರೀ ಮಳೆಯಾಗಿದ್ದರಿಂದ ದೇವರಿಗೂ ಸಂಕಷ್ಟ ಎದುರಾದಂತಾಗಿದೆ.
Advertisement
ಹೊಸಕೆರೆಹಳ್ಳಿಯಲ್ಲಿರುವ ದತ್ತಾತ್ರೇಯ ದೇವಸ್ಥಾನದ ಗರ್ಭಗುಡಿಗೆ ನೀರು ನುಗ್ಗಿ ಸಂಪೂರ್ಣ ಜಲವೃತವಾಗಿತ್ತು. ದೇವರ ವಿಗ್ರಹ ನೀರಲ್ಲಿ ಮುಳುಗಿ ಹೋಗಿತ್ತು. ಬಳಿಕ ಅಗ್ನಿ ಶಾಮಕ ದಳ ಸಿಬ್ಬಂದಿ ಹಾಗೂ ದೇವಸ್ಥಾನ ಮಂಡಳಿಯವರು ಸೇರಿಕೊಂಡು ಕೊಚ್ಚೆ ನೀರನ್ನು ಹೊರಹಾಕುವ ಕೆಲಸ ಮಾಡ್ತಿದ್ದಾರೆ. ಇಂದು ಗಲೀಜು ಕ್ಲೀನ್ ಮಾಡುವ ಕೆಲಸ ಇರೋದ್ರಿಂದ ಭಕ್ತರಿಗೆ ದೇಗುಲ ಪ್ರವೇಶ ಅಸಾಧ್ಯವೆನಿಸುತ್ತಿದೆ.
Advertisement
Advertisement
ಹೊಸಕೆರೆಹಳ್ಳಿಯ ತಗ್ಗು ಪ್ರದೇಶವಾಗಿರೋದ್ರಿಂದ ದತ್ತಾತ್ರೆಯನಗರದಲ್ಲಿ 30ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. ಮಳೆ ನೀರು ಕಂಡು ಜನ ಗಾಬರಿ ಬಿದ್ದಿದ್ದು, ಮನೆಯಲ್ಲಿದ್ದ ಸರಕು ಸರಂಜಾಮುಗಳನ್ನು ರಕ್ಷಿಸಿಕೊಳ್ಳಲು ಹರಸಾಹಸ ಮಾಡಿದ್ರು.
Advertisement
ಬೈಕೊಂದು ನೀರಲ್ಲಿ ಮುಳುಗಿ ಹೋಗಿತ್ತು. ಕೆರೆಯನ್ನು ಒತ್ತುವರಿ ಮಾಡಿರೋದ್ರಿಂದ ದೇಗುಲಕ್ಕೆ ನೀರು ಬರುತ್ತೆ ಅಂದ್ರೆ ರಾಜಕಾಲುವೆ ಸಮಸ್ಯೆ ಅಷ್ಟೆ ಸ್ಥಳೀಯ ಕಾರ್ಪೊರೇಟರ್ ಹೇಳುತ್ತಿದ್ದಾರೆ.