ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆ ಕರ್ನಾಟಕದಾದ್ಯಂತ (Karnataka) ಇಂದಿನಿಂದ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
15th to 18th May 2026.
Thunderstorm accompanied by gusty wind with speed 40-50kmph likely to occur at one or two places over SIK from 15th to 18th May 2026.
Thunderstorm accompanied by gusty wind with speed 30-40kmph likely to occur at one or two places over SIK on 19th May2026.— Karnataka State Natural Disaster Monitoring Centre (@KarnatakaSNDMC) May 15, 2026
ಬಂಗಾಳಕೊಲ್ಲಿಯ ನೈರುತ್ಯದಲ್ಲಿ ವಾಯುಭಾರ ಕುಸಿತಗೊಂಡ ಹಿನ್ನೆಲೆ ಇಂದಿನಿಂದ (ಮೇ 15) ಮೂರು ದಿನ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಸಮಯದಲ್ಲಿ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಂಭವವಿದ್ದು, ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಮೇ 26ರಿಂದ ಕೇರಳಕ್ಕೆ ಮುಂಗಾರು ಎಂಟ್ರಿ
ಮುಂದಿನ 3 ದಿನಗಳವರೆಗೆ ಮೋಡ, ಸಾಪೇಕ್ಷ ಆರ್ದ್ರತೆ, ಮಳೆ, ತಾಪಮಾನ ಮತ್ತು ಗಾಳಿಯ ಧಿಕ್ಕು ಹಾಗೂ ವೇಗದಂತಹ ಗ್ರಾಮ ಪಂಚಾಯತ್ ಮಟ್ಟದ ಮುನ್ಸೂಚನೆ.
Gram Panchayat level Forecast -Cloudiness, Relative Humidity, Rainfall, Temperature & Wind speed & direction for the next 3 days. #KSNDMC pic.twitter.com/kSWldt5C0k— Karnataka State Natural Disaster Monitoring Centre (@KarnatakaSNDMC) May 15, 2026
ಮುಂದಿನ 3 ದಿನಗಳವರೆಗೆ ಮೋಡ ಕವಿದ ವಾತಾವರಣ, ಮಳೆ, ತೀವ್ರ ಗಾಳಿ ಹಾಗೂ ತಾಪಮಾನದಲ್ಲಿ ಬದಲಾವಣೆ ಆಗುವ ಸಾಧ್ಯತೆ ಎಂದು ವರದಿ ಮಾಡಿದೆ.

