ವಿಜಯಪುರ: ಮಹಾರಾಷ್ಟ್ರದಲ್ಲಿ (Maharashtra) ಸುರಿಯುತ್ತಿರುವ ಭೀಕರ ಮಳೆಯಿಂದಾಗಿ ಜಿಲ್ಲೆಯ ಭೀಮಾ ನದಿ (Bhima River) ಮೈದುಂಬಿ ಹರಿಯುತ್ತಿದ್ದು, ಜೀವಕಳೆ ಪಡೆದಿದೆ.
ಪುಣೆಯ (Pune) ನೀರಾ ಜಲಾಶಯದಿಂದ 50 ಸಾವಿರ ಕ್ಯುಸೆಕ್ ನೀರನ್ನು ಭೀಮಾ ನದಿಗೆ ಹರಿಬಿಡಲಾಗಿದೆ. ಒಂದು ಕಡೆ ನದಿ ಮೈದುಂಬಿ ಹರಿಯುತ್ತಿದ್ದರೆ, ಇನ್ನೊಂದು ಕಡೆ ರೈತರ ಪಂಪ್‌ಸೆಟ್‌ಗಳು ನೀರಿನಲ್ಲಿ ಮುಳುಗಿ ಸಂಕಷ್ಟ ಎದುರಿಸುವಂತಾಗಿದೆ.ಇದನ್ನೂ ಓದಿ: ಆರ್‌ಸಿಬಿಯಲ್ಲಿರುವ ಅಣ್ಣ ಹುರಿದುಂಬಿಸಿದ್ರು, ನಾನು ನನ್ನ ಆಟವಾಡಿದೆ: ಜಿತೇಶ್ ಶರ್ಮಾ
ವಿಜಯಪುರ (Vijayapura) ಜಿಲ್ಲೆಯ ಚಡಚಣ ತಾಲೂಕಿನ ಹಿಂಗಣಿ ಬ್ಯಾರೇಜ್‌ನ ಐದು ಗೇಟ್‌ಗಳ ಪೈಕಿ ಎರಡು ಗೇಟ್ ಮಾತ್ರ ಓಪನ್ ಮಾಡಿದ್ದು, ರೈತರಿಗೆ ಸಂಕಷ್ಟ ತಂದೊದಗಿದೆ. ಪರಿಣಾಮ ಭೀಮಾ ನದಿಯಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿ, ನೂರಾರು ಪಂಪಸೆಟ್‌ಗಳು ಮುಳುಗಿ ಹೋಗಿವೆ. ಕೆಲ ಪಂಪಸೆಟ್ ಬೋರ್ಡ್ಗಳು ನೀರಲ್ಲಿ ಕೊಚ್ಚಿಹೋಗಿ ರೈತರಿಗೆ ನಷ್ಟವಾಗಿದೆ.
ಈ ಕುರಿತಂತೆ ಮಹಾರಾಷ್ಟ್ರ ಅಧಿಕಾರಿಗಳು ಹಿಂಗಣಿ ಬ್ಯಾರೇಜ್ ಅಧಿಕಾರಿಗಳಿಗೆ ಮುಂಚಿತವಾಗಿಯೇ ಮಾಹಿತಿ ನೀಡಿದ್ದರು. ಆದರೂ ಹಿಂಗಣಿ ಬ್ಯಾರೇಜ್ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಪಂಪಸೆಟ್‌ಗಳು ನೀರಲ್ಲಿ ಮುಳುಗಿದ ಮೇಲೆ ಎಚ್ಚೆತ್ತ ಅಧಿಕಾರಿಗಳು ಐದು ಗೇಟ್‌ಗಳನ್ನು ಓಪನ್ ಮಾಡಿದ್ದಾರೆ.ಇದನ್ನೂ ಓದಿ: ಸದ್ಯಕ್ಕಿಲ್ಲ ಯೆಲ್ಲೊ ಲೈನ್ ಮೆಟ್ರೋ – ಸಿಗ್ನಲಿಂಗ್ ಸಮಸ್ಯೆಯಿಂದ ದಿನಾಂಕ ಮುಂದೂಡಿದ BMRCL