ಗದಗ: ಧಾರಾಕಾರ ಮಳೆಗೆ ಗದಗ(Gadag) ಜಿಲ್ಲೆಯ ಅನೇಕ ಕಡೆಗಳಲ್ಲಿ ಹಳ್ಳ-ಕೊಳ್ಳಗಳು ಭೋರ್ಗರೆಯುತ್ತಿವೆ. ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರ ಬಳಿ ಸೇತುವೆ ಮೇಲ್ಭಾಗದಲ್ಲಿ ನೀರು ಹರಿಯುತ್ತಿದೆ.
ಲಕ್ಷ್ಮೇಶ್ವರ ದೊಡ್ಡೂರ ಸಂಪರ್ಕ ಕಲ್ಪಿಸುವ ರಸ್ತೆ ಸಂಚಾರ ಬಂದ್ ಆಗಿದೆ. ಆದರೂ ಬೆಳಗಿನ ಜಾವ ನೀರನ್ನು ಗಮನಿಸದೇ ಏಕಾಏಕಿ ಬಂದ ಟ್ರಕ್(Truck) ಹಳ್ಳದ ನಡು ನೀರಲ್ಲಿ ಸಿಲುಕಿ ಪರದಾಡಿದೆ. ಇದನ್ನೂ ಓದಿ: ದೇಶದಲ್ಲಿ 5G ಸೇವೆಗೆ ಚಾಲನೆ – ಯಾವ ನಗರಗಳಲ್ಲಿ ಆರಂಭದಲ್ಲಿ ಸಿಗುತ್ತೆ? ಎಷ್ಟು ಸ್ಪೀಡ್ ಇರುತ್ತೆ?
Advertisement
Advertisement
ಸೇತುವೆಯ ಮಧ್ಯ ಭಾಗದ ನೀರಿನಲ್ಲಿ ಸಿಲುಕಿದ ಟ್ರಕ್ ಹೊರ ತೆಗೆಯಲು ಕೆಲಕಾಲ ಹರಸಾಹಸ ಪಡಬೇಕಾಯಿತು. ನಂತರ ಟ್ರ್ಯಾಕ್ಟರ್(Tractor) ಸಹಾಯದಿಂದ ಹೊರ ತೆಗೆಯಲಾಯಿತು. ರಭಸವಾಗಿ ಹರಿಯುವ ನೀರಲ್ಲಿ ಕೆಲವರು ಬೈಕ್ ಸಮೇತ ನಡೆದುಕೊಂಡು ಬರುವ ಮೂಲಕ ಹುಚ್ಚಾಟ ಮಾಡುತ್ತಿದ್ದಾರೆ.
Advertisement
Advertisement
ಶಿರಹಟ್ಟಿ ತಾಲೂಕಿನ ಸಾಸರವಾಡ ಬಳಿ ಸಾಕಷ್ಟು ಬೆಳೆ ಹಾನಿಯಾಗಿವೆ. ಮೆಕ್ಕೆಜೋಳ, ಕಬ್ಬು, ಶೇಂಗಾ, ಸೂರ್ಯಕಾಂತಿ ಬೆಳೆ ನಾಶವಾಗಿದೆ. ಹೀಗೆ ಜಿಲ್ಲೆಯಲ್ಲಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ.