ತಿರುವನಂತಪುರ: ಕೇರಳದ ಈಶಾನ್ಯ ಭಾಗದಲ್ಲಿ ಮುಂಗಾರಿನ ಚುರುಕುಗೊಂಡಿದ್ದು, ನವೆಂಬರ್ 13 ಮತ್ತು 14ರಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಕೇರಳದ ಆರು ಜಿಲ್ಲೆಗಳಾದ ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಳ, ಕೊಟ್ಟಾಯಂ ಇಡುಕ್ಕಿ ಮತ್ತು ಎರ್ನಾಕುಲಂ ಮತ್ತು ಇಡುಕ್ಕಿಯಲ್ಲಿ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
Advertisement
ಭಾನುವಾರ ಕೂಡ ಪತ್ತನಂತಿಟ್ಟ, ಅಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ ಮತ್ತು ಇಡುಕ್ಕಿ ಎಂಬ ಐದು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಮಳೆ ಮುಂದುವರಿದರೆ ಇಡುಕ್ಕಿ ಜಲಾಶಯದ ಚೆರುಥೋನಿ ಅಣೆಕಟ್ಟಿನ ಶೆಟರ್‌ಗಳನ್ನು ಶನಿವಾರ ಅಥವಾ ಭಾನುವಾರ ತೆರೆಯಲಾಗುವುದು ಎಂದು ಇಡುಕ್ಕಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ 13 ನೊರೊವೈರಸ್ ಪ್ರಕರಣ ಪತ್ತೆ – ನೀರಿನಿಂದ ಹರಡುವ ಹೊಸ ಕಾಯಿಲೆ
Advertisement
Advertisement
ಇಡುಕ್ಕಿ ಅಣೆಕಟ್ಟಿನ ಕೆಳಭಾಗ ಮತ್ತು ಪೆರಿಯಾರ್ ನದಿಯ ದಡದಲ್ಲಿ ವಾಸಿಸುವ ಜನರು ಎಚ್ಚರಿಕೆಯಿಂದ ಇರುವಂತೆ ಈಗಾಗಲೇ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಅಕ್ಟೋಬರ್ 1ರಿಂದ 12ರವರೆಗೂ ಕೇರಳದಲ್ಲಿ ಶೇಕಡಾ 86 ರಷ್ಟು ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ವೆಬ್ ಸೈಟ್‍ನಲ್ಲಿ ತಿಳಿಸಿದೆ. ಇದನ್ನೂ ಓದಿ: ಮದುವೆಗೆ ಆಗಮಿಸಿದ ಅತಿಥಿಗಳಿಗೆ ಊಟದ ಬಿಲ್ ಕೇಳಿದ ವಧು