ಡೆಹರಾಡೂನ್: ಭಾರೀ ಮಳೆಯಿಂದಾಗಿ ಕೇದಾರನಾಥ ಯಾತ್ರೆ ಸ್ಥಗಿತಗೊಳಿಸಲಾಗಿದ್ದು, ದೇಗುಲಕ್ಕೆ ತೆರಳುವ ಭಕ್ತರು ಗೌರಿಕುಂಡ್ ಮತ್ತು ಕೇದಾರನಾಥ ನಡುವೆ ವಿವಿಧ ಸ್ಥಳಗಳಲ್ಲಿ ಸ್ಥಗಿತಗೊಂಡಿರುವ ಘಟನೆ ನಡೆದಿದೆ.
ಕೇದಾರನಾಥದಲ್ಲಿ ಮಳೆ ಹಾಗೂ ಹಿಮಪಾತ ಅಧಿಕವಾಗುತ್ತಿದೆ. ಇದರಿಂದಾಗಿ ಯಾತ್ರೆಯ ಜೊತೆಗೆ ಫಾಟಾ ಮತ್ತು ಗೌರಿಕುಂಡ್‍ನಿಂದ ಹೆಲಿಕಾಪ್ಟರ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
2013ರ ಕೇದಾರನಾಥ ಪ್ರಳಯದ ದುರಂತದ ಹಿನ್ನೆಲೆಯಲ್ಲಿ ಜಾಗೃತರಾಗಿರುವ ರುದ್ರಪ್ರಯಾಗ ಜಿಲ್ಲಾಡಳಿತವು ಯಾತ್ರಾರ್ಥಿಗಳಿಗೆ ಹವಾಮಾನ ಸುಧಾರಿಸುವವರೆಗೆ ಆಯಾ ನಿಲ್ದಾಣಗಳಲ್ಲಿ ಇರುವಂತೆ ಮನವಿ ಮಾಡಿದ್ದಾರೆ. ಕೇದಾರನಾಥದಲ್ಲಿರುವ ಶಿವನ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಜನರನ್ನು ಹಿಂದಿರುಗುವ ಪ್ರಯಾಣವನ್ನು ನಿಲ್ಲಿಸಲಾಗಿದೆ ಎಂದು ರುದ್ರಪ್ರಯಾಗ ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಇದನ್ನೂ ಓದಿ: ವಂದೇ ಮಾತರಂಗೂ ರಾಷ್ಟ್ರಗೀತೆಯಷ್ಟೇ ಗೌರವ ಕೋಡಿ – ದೆಹಲಿ ಹೈಕೋರ್ಟ್‌ಗೆ ಪಿಐಎಲ್
ಗೌರಿಕುಂಡ್‍ನ ಮೂಲ ಶಿಬಿರದಿಂದ ಕೇದಾರನಾಥಕ್ಕೆ ತೆರಳಲು ಸಿದ್ಧರಾಗಿರುವ ಜನರನ್ನು ದೇಗುಲಕ್ಕೆ ಮುಂದಿನ ಪ್ರಯಾಣವನ್ನು ಕೈಗೊಳ್ಳುವುದನ್ನು ತಡೆಯಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸುತ್ತಿದೆ ಎಂದರು. ಇದನ್ನೂ ಓದಿ: ಕುತುಬ್ ಮಿನಾರ್ ಬಳಿ ಪೂಜೆ ಮಾಡುವ ಹಕ್ಕು ಯಾರಿಗೂ ಇಲ್ಲ – ASI ಖಡಕ್ ಉತ್ತರ