ಚಿಕ್ಕಮಗಳೂರು: ಕಾಫಿನಾಡಿನ (Chikkamagaluru) ಬಯಲುಸೀಮೆ ಭಾಗಗಳಾದ ಬೆಳವಾಡಿ, ಕಳಸಾಪುರ ಸೇರಿದಂತೆ ಹಲವೆಡೆ ಭಾರೀ (Rain) ಮಳೆಯಾಗುತ್ತಿದೆ. ಇದರಿಂದ ಜನಜೀವನ ಅಸ್ಥವ್ಯಸ್ಥವಾಗಿದೆ.
ಚಿಕ್ಕಮಗಳೂರು, ತರೀಕೆರೆ, ಕಡೂರು ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ನಿನ್ನೆ ರಾತ್ರಿಯಿಂದಲೂ (ಅ.22) ಜಿಲ್ಲೆಯ ನಾನಾ ಭಾಗಗಳಿಂದ ಮಳೆಯಾಗುತ್ತಿದೆ. ಇಂದು (ಅ.23) 1 ಗಂಟೆಯಿಂದ ಭಾರೀ ಮಳೆಯಾಗುತ್ತಿದ್ದು ವಾಹನ ಸವಾರರು ಪರದಾಡಿದ್ದಾರೆ. ಇದನ್ನೂ ಓದಿ: ಅಡಿಕೆಗೆ ವಿಚಿತ್ರ ಕೀಟಬಾಧೆ – ಕೆಲವೇ ದಿನದಲ್ಲಿ ಎಕರೆಗಟ್ಟಲೇ ಹಸಿರು ತಿನ್ನುವ ಕೀಟಕ್ಕೆ ಬೇಕಿದೆ ಪರಿಹಾರ
ಕಳೆದ ರಾತ್ರಿ ತರೀಕೆರೆ ಪಟ್ಟಣದಲ್ಲಿ ಸುರಿದ ಧಾರಾಕಾರ ಮಳೆಗೆ ಭಾರೀ ಮಳೆಗೆ ಪಟ್ಣಣದ ರಸ್ತೆಗಳು ಜಲಾವೃತಗೊಂಡಿದ್ದವು. ಇದರಿಂದ ರಸ್ತೆಯಲ್ಲಿ ನಿಲ್ಲಸಿದ್ದ ಬೈಕ್ಗಳು ಮುಳುಗಡೆಯಾಗಿದ್ದವು.
ಮಳೆಯಿಂದ ಆಕಾಶ ನೊಡುತ್ತಿದ್ದ ಮಲೆನಾಡಿಗರು ನಿಟ್ಟುಸಿರು ಬಿಟ್ಟಿದ್ದಾರೆ. ಕಾಫಿ-ಅಡಿಕೆ ಬೆಳೆ ಉಳಿಸಿಕೊಳ್ಳಲು ಮಳೆ ಅನಿವಾರ್ಯವಾಗಿದೆ. ಈ ಬಾರಿ ಜಿಲ್ಲೆಯಲ್ಲಿ ವಾಡಿಕೆ ಮಳೆಯ ಅರ್ಧದಷ್ಟು ಸಹ ಮಳೆಯಾಗಿಲ್ಲ. ಇದರಿಂದ ರೈತರು ಉತ್ತಮ ಹಿಂಗಾರು ಮಳೆಯ ನಿರೀಕ್ಷೆಯಲ್ಲಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ದಸರಾದಲ್ಲಿ ದಿಕ್ಕಾಪಾಲಾಗಿ ಓಡಿದ ಆನೆ; ವೈಜ್ಞಾನಿಕ ವರದಿ ಬಳಿಕ ಕ್ರಮ: ಮಧು ಬಂಗಾರಪ್ಪ

