ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಮತ್ತೆ ಭೂಕುಸಿತವಾಗಿದೆ. ಗೇರುಸೊಪ್ಪ ವಿದ್ಯುತ್ ಉತ್ಪಾದನಾ ಘಟಕದ ಬಳಿಯೇ ಧರೆ ಕುಸಿದಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪ ಜಲಾಶಯದ ಬಳಿ ಘಟನೆ ನಡೆದಿದೆ. ಈ ಹಿಂದೆ ಅಬ್ಬರದ ಮಳೆ ಹಿನ್ನೆಲೆಯಲ್ಲಿ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗಿತ್ತು. 20 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರು ಬಿಟ್ಟ ಹಿನ್ನೆಲೆಯಲ್ಲಿ ಜಲಾಶಯದ ತಡೆಗೋಡೆ ಪಕ್ಕದಲ್ಲೇ ಧರೆ ಕುಸಿದಿತ್ತು. ಇದೀಗ ಒಂದು ಭಾಗದ ಧರೆ ಕುಸಿದು ಮರಗಳು ಬಿದ್ದಿವೆ. ಇದನ್ನೂ ಓದಿ: ಅಹಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ಗೋಕರ್ಣದಲ್ಲಿ ಪಿತೃಕಾರ್ಯ
ಮತ್ತೆ ಹೆಚ್ಚಿನ ಮಳೆಯಾದಲ್ಲಿ ಡ್ಯಾಂನ ತಡೆಗೋಡೆ ವರೆಗೂ ಕುಸಿಯುವ ಸಾಧ್ಯತೆ ಇದೆ. ಡ್ಯಾಂನ ಎಡಭಾಗದ ಧರೆ ಕುಸಿದಿರುವುದರಿಂದ ಜಲಾಶಯಕ್ಕೆ ಯಾವುದೇ ಹಾನಿಯಿಲ್ಲ.