– ಹೆದ್ದಾರಿಗೆ ಹರಿದ ಭಾರೀ ಪ್ರಮಾಣದ ಕೆಸರು ನೀರು, ವಾಹನ ಸವಾರರ ಪರದಾಟ
– 14 ಫೀಟ್ ಇದ್ದ ಚರಂಡಿ ಈಗ ನಾಲ್ಕು ಫೀಟ್
ಉಡುಪಿ: ಉಡುಪಿಯಲ್ಲಿ(Udupi) ಭಾರೀ ಮಳೆಯಾಗುತ್ತಿದ್ದು, ಅಂಗಡಿಗಳಿಗೆ ಕೆಸರು ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಜಡಿ ಮಳೆಗೆ ಜಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದೆ.
ನಗರ ಅಪ್ಸರಾ ಐಸ್‌ಕ್ರೀಮ್ ಮಳಿಗೆಗೆ ಭಾರೀ ಮಳೆ ನೀರು ಮತ್ತು ಕೆಸರು ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಲಕ್ಷಾಂತರ ರೂ. ಫ್ರಿಡ್ಜ್, ಕೂಲರ್‌ಗಳಿಗೆ ಹಾನಿಯಾಗಿದೆ. ರಸ್ತೆ ಒತ್ತುವರಿ ಹಾಗೂ ಬಿಲ್ಡಿಂಗ್ ಪಾರ್ಕಿಂಗ್ ಒತ್ತುವರಿಯಿಂದ 14 ಫೀಟ್ ಇದ್ದ ಚರಂಡಿ ಈಗ ನಾಲ್ಕು ಅಡಿಗೆ ಇಳಿದಿದೆ. ಅವೈಜ್ಞಾನಿಕ ಚರಂಡಿ ನಿರ್ಮಾಣ ಮತ್ತು ಏಕಾಏಕಿ ಗಾಳಿ ಮಳೆ ಜೊತೆ ಕೆಸರು ಮಿಶ್ರಿತ ನೀರು ಬಂದ ಕಾರಣ ತಗ್ಗು ಪ್ರದೇಶದ ಅಂಗಡಿಗಳು ಮನೆಗಳು ಜಲಾಮಯವಾಗಿದೆ. ಇದನ್ನೂ ಓದಿ: ದರ್ಶನ್ & ಗ್ಯಾಂಗ್‌ಗೆ ಮತ್ತೆ ಶಾಕ್ ಕೊಟ್ಟ ಕಾಮಾಕ್ಷಿಪಾಳ್ಯ ಪೊಲೀಸರು
ಇನ್ನು ಎಡೆಬಿಡದೇ ಸುರಿಯುತ್ತಿರುವ ಮಳೆ ಮಣಿಪಾಲ(Manipal) ಭಾಗದಲ್ಲಿ ಅವಾಂತರ ಸೃಷ್ಟಿ ಮಾಡಿದೆ. ಮಣಿಪಾಲ, ಪರ್ಕಳ ಭಾಗದಲ್ಲಿ ವಿಪರೀತ ಮಳೆಯಾದ ಕಾರಣ ಬೆಟ್ಟದ ಮೇಲಿಂದ ಹರಿದ ಭಾರೀ ಪ್ರಮಾಣದ ನೀರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದೆ. ಮಣಿಪಾಲ- ಲಕ್ಷ್ಮೀಂದ್ರ ನಗರ ಇಳಿಜಾರು ಪ್ರದೇಶವು ಕೆಸರು ನೀರಿನಿಂದ ಜಲಾವೃತವಾಗಿದೆ. ಉಡುಪಿ ಮಣಿಪಾಲ ರಸ್ತೆಯಲ್ಲಿ ಪೊಲೀಸರು ಏಕಮುಖ ಸಂಚಾರ ವ್ಯವಸ್ಥೆ ಮಾಡಿದ್ದು, ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ಇದನ್ನೂ ಓದಿ: ಹೊಸೂರು ರಸ್ತೆಯಲ್ಲಿ ‘ಸ್ವಿಮ್ಮಿಂಗ್ ಪೂಲ್’ – ವಾಹನ ಸಂಚಾರ ಬಂದ್
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮತ್ತು ಸುತ್ತಮುತ್ತಲ ಬಹು ಮಹಡಿ ಕಟ್ಟಡಗಳು ನೀರು ಹರಿಯುವ ಕಾಲುವೆಗಳನ್ನು ಒತ್ತುವರಿ ಮಾಡಿದ್ದೇ ಇಷ್ಟೆಲ್ಲಾ ಸಮಸ್ಯೆಗೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಉಡುಪಿ ಶಾಸಕ ಯಶ್‌ಪಾಲ್(Yashpal) ಸುವರ್ಣ ಸ್ಥಳಕ್ಕೆ ಭೇಟಿ ನೀಡಿ, ಒತ್ತುವರಿಯಾದ ಎಲ್ಲಾ ಕಟ್ಟಡದ ಪಾರ್ಕಿಂಗ್ ಪ್ರದೇಶಗಳನ್ನು ತೆರವು ಮಾಡಬೇಕು ಎಂದು ಆದೇಶ ನೀಡಿದರು. ಇದನ್ನೂ ಓದಿ: ಮುಂದಿನ 3 ಗಂಟೆಯಲ್ಲಿ ಬೆಂಗಳೂರು ಸೇರಿದಂತೆ 5 ಜಿಲ್ಲೆಗಳಲ್ಲಿ ಭಾರೀ ಮಳೆ
ಜಿಲ್ಲೆಯ ಹಲವೆಡೆ ಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ದಿನಪೂರ್ತಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.