– ಕಾಫಿ, ಅಡಿಕೆ, ಮೆಣಸು ಬೆಳೆಗೆ ಹಿಂಗಾರು ಭೀತಿ
ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಧಾರಾಕಾರ ಮಳೆಗೆ ಜನಜೀವನ ಹೈರಾಣಾಗಿದೆ. ಚಿಕ್ಕಮಗಳೂರು (Chikkamagaluru) ತಾಲೂಕಿನ ಮಲ್ಲಂದೂರು ಭಾಗದಲ್ಲಿ ಒಂದೇ ಗಂಟೆಗೆ ಸುಮಾರು 4 ಇಂಚು ಮಳೆ ಸುರಿದಿದ್ದು ರಸ್ತೆಯಲ್ಲಿ ಮಳೆ ನೀರು ನದಿಯಂತೆ ಹರಿದಿದೆ.
Advertisement
ಮಲೆನಾಡು ಹಾಗೂ ಬಯಲುಸೀಮೆ ಭಾಗದಲ್ಲಿ ಧಾರಾಕಾರ ಮಳೆಗೆ ಜನಜೀವನ ಅಕ್ಷರಶಃ ಅಸ್ತವ್ಯಸ್ತಗೊಂಡಿದೆ. ಮಲೆನಾಡು, ಮಲ್ಲಂದೂರು ಭಾಗದಲ್ಲಿ ಒಂದೇ ಗಂಟೆಗೆ ಸುಮಾರು 4 ಇಂಚಿನಷ್ಟು ಮಳೆ ಸುರಿದಿದೆ. ರಸ್ತೆಯಲ್ಲಿ ಮಳೆ ನೀರು ನದಿಯಂತೆ ಹರಿದಿದೆ. ಮಲ್ಲಂದೂರು-ಮುತ್ತೋಡಿ ಭಾಗದಲ್ಲಿ ಭಾರೀ ಮಳೆ ಸುರಿದಿದ್ದು ಗುಡ್ಡದ ಮೇಲಿಂದ ಬಂಡೆ ಕಲ್ಲುಗಳು ಕೂಡ ರಸ್ತೆಗೆ ಉರುಳಿವೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ತುಂತುರು ಮಳೆ – ಯಲಹಂಕದಲ್ಲಿ 7 ಕಾರುಗಳು ಡಿಕ್ಕಿ
Advertisement
Advertisement
ಧಾರಾಕಾರ ಪ್ರಮಾಣದ ಮಳೆ ನೀರು ರಸ್ತೆಯ ಮೇಲೆ ಹರಿದಿದ್ದರಿಂದ ರಸ್ತೆಯ ಒಂದು ಬದಿಯ ಮಣ್ಣು ಸಂಪೂರ್ಣ ಕೊಚ್ಚಿ ಹೋಗಿದ್ದು ಜನರಲ್ಲಿ ಆತಂಕ ಹೆಚ್ಚಿಸಿದೆ. ಈ ಮಾರ್ಗದಲ್ಲಿ ದಿನಕ್ಕೆ ಒಂದೆರಡು ಬಸ್ ಅಷ್ಟೇ ಓಡಾಡುತ್ತದೆ. ರಸ್ತೆ ಹಾನಿಯಾದರೆ ಹತ್ತಾರು ಹಳ್ಳಿಯ ಜನ 40-50 ಕಿ.ಮೀ. ಸುತ್ತಿ ಚಿಕ್ಕಮಗಳೂರು ನಗರಕ್ಕೆ ಬರಬೇಕು. ಹಾಗಾಗಿ, ಮುಂಗಾರುಗಿಂತ ಹಿಂಗಾರು ಮಳೆಗೆ ಮಲೆನಾಡಿಗರು ಕಂಗಾಲಾಗಿದ್ದಾರೆ. ಇದನ್ನೂ ಓದಿ: ಇಂದು ಸೇರಿ ಇನ್ನೂ 4 ದಿನ ಬೆಂಗಳೂರಿನಲ್ಲಿ ಭಾರೀ ಮಳೆ
Advertisement
ಕೊಪ್ಪ (Koppa) ತಾಲೂಕಿನ ಜಯಪುರ-ಮೇಗುಂದಾ-ಬಸರೀಕಟ್ಟೆ ಭಾಗದಲ್ಲಿ ಭಾರೀ ಮಳೆಯಾಗಿದೆ. ಬಸರೀಕಟ್ಟೆ ಸಮೀಪ ರಸ್ತೆ ಮೇಲೆ ತೋಟದ ಕೆಸರು ಮಿಶ್ರಿತ ನೀರು ಹರಿದ ಪರಿಣಾಮ ಪ್ರವಾಸಿಗರ ಜೊತೆ ಸ್ಥಳಿಯರು ಪರದಾಡುವಂತಾಗಿದೆ. ಧಾರಾಕಾರ ಮಳೆಯಿಂದ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ಅಡಿಕೆ-ಕಾಫಿ-ಮೆಣಸಿಗೆ ಕೊಳೆ ರೋಗದ ಭೀತಿ ಆವರಿಸಿದೆ. ಇದನ್ನೂ ಓದಿ: 12 ಕೋಟಿ ರೂ. ಆಸ್ತಿ, ಎರಡು ಎಫ್‌ಐಆರ್ – ಪ್ರಿಯಾಂಕಾ ಗಾಂಧಿ ಬಳಿ ಚಿನ್ನ, ಭೂಮಿ ಎಷ್ಟಿದೆ?