ರಾಯಚೂರು: ಜಿಲ್ಲೆಯಾದ್ಯಂತ ಭಾರೀ ಮಳೆ ಹಿನ್ನೆಲೆ ಬಹುದಿನದ ಬಳಿಕ ಮಸ್ಕಿ ಕಿರು ಜಲಾಶಯ ತುಂಬಿದ್ದು, ಜಲಾಶಯದ ನಾಲ್ಕು ಗೇಟ್‍ಗಳಿಂದ ನೀರು ಹೊರಕ್ಕೆ ಬಿಡಲಾಗುತ್ತಿದೆ. ಆದ್ದರಿಂದ ಜಿಲ್ಲೆಯ 12 ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಮಸ್ಕಿ ಕಿರುಜಲಾಶಯ ತುಂಬಿದದ್ದರಿಂದ 2000 ಕ್ಯೂಸೆಕ್‍ಗೂ ಅಧಿಕ ಪ್ರಮಾಣದ ನೀರು ಹೊರ ಬಿಡಲಾಗುತ್ತಿದೆ. ಆದ್ದರಿಂದ ಹಳ್ಳದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಎರಡು ಸೇತುವೆ ಮುಳುಗಡೆಯಾಗಿದೆ. ಕಡಬೂರು- ಹಿರೇಕಡಬೂರು ಮಧ್ಯದ ಸೇತುವೆ, ಮಾರಲದಿನ್ನಿ- ಮಾರಲದಿನ್ನಿ ತಾಂಡ ಮಧ್ಯದ ಸೇತುವೆ ಮುಳುಗಡೆಗೊಂಡಿದ್ದು, ಸೇತುವೆ ಮೇಲೆ ಸಂಚಾರ ಸ್ಥಗಿತಗೊಂಡಿದೆ. ಇದನ್ನೂ ಓದಿ:ಕೊಚ್ಚಿ ಹೋದ ಸೇತುವೆ – ಐದಾರು ಗ್ರಾಮಗಳ ಸಂಪರ್ಕ ಸಂಪೂರ್ಣ ಕಡಿತ
ಸುಮಾರು 12 ಗ್ರಾಮಗಳ ರಸ್ತೆ ಸಂಪರ್ಕ ಕಡಿತವಾಗಿದ್ದು, ಹಳ್ಳದ ಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಹಾಗೆಯೇ ಜಿಲ್ಲೆಯಾದ್ಯಂತ ಬೆಳಿಗ್ಗೆಯಿಂದ ಮಳೆ ಮುಂದುವರಿದಿದೆ.