ರಾಜ್ಯದ ಹಲವೆಡೆ ವರುಣಾರ್ಭಟ – ಭಾರೀ ಮಳೆಗೆ ರಸ್ತೆ ಮುಳುಗಡೆ, ಅವಾಂತರ ಸೃಷ್ಟಿ

Public TV
1 Min Read
Heavy Rain

ಬೆಂಗಳೂರು: ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಮಂಗಳೂರು, ಚಿಕ್ಕಮಗಳೂರು ಸೇರಿ ಕೆಲವು ಜಿಲ್ಲೆಗಳಲ್ಲಿ ವರುಣ ಅಬ್ಬರಿಸುತ್ತಿದ್ದಾನೆ.

ಮಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಪಂಪ್‌ವೆಲ್ ಸರ್ಕಲ್ ಜಲಾವೃತಗೊಂಡಿದ್ದು, ಬಸ್ ಅರ್ಧದಷ್ಟು ಮುಳುಗಿದೆ. ಜೊತೆಗೆ ಆಂಬ್ಯುಲೆನ್ಸ್ ಕೂಡ ನೀರಿನಲ್ಲಿ ಅರ್ಧ ಮುಳುಗಿತ್ತು. ಅತ್ತಾವರ, ಬಿಜೈ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿ ರಸ್ತೆಗಳು ಮುಳುಗಡೆಯಾಗಿವೆ. ಪರಿಣಾಮ ಮನೆಗಳಿಗೆ ನೀರು ನುಗ್ಗಿದೆ.ಇದನ್ನೂ ಓದಿ: ರಘುವರ್ಯ ತೀರ್ಥರ ಮಧ್ಯಾರಾಧನೆ ಮಹೋತ್ಸವ ಸಂಪನ್ನ

ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಭಾರೀ ಮಳೆಯಾಗಿ ಗುಡ್ಡ ಕುಸಿದಿದೆ. ಭೂಕುಸಿತ ಆಗುವ ಸಾಧ್ಯತೆಯಿರುವುದರಿಂದ ಶಿವಮೊಗ್ಗದ ಆಗುಂಬೆ ಘಾಟಿಯಲ್ಲಿ ಭಾರಿ ವಾಹನ ಸಂಚಾರ ನಿಷೇಧಿಸಲಾಗಿದೆ. ಬೀದರ್‌ನ ಔರಾದ್ ತಾಲೂಕಿನ ಜೋಜನಾ ಗ್ರಾಮದಲ್ಲಿ ಮನೆಗಳ ಮುಂದೆ ನೀರು ನಿಂತ ಪರಿಣಾಮ ಜನ ಪರದಾಡುವಂತಾಗಿತ್ತು. ರಾಯಚೂರು ಜಿಲ್ಲೆಯಲ್ಲಿ ನಾರಾಯಣಪುರ ಡ್ಯಾಂ ಭರ್ತಿಯಾದ ಕಾರಣ ಕೃಷ್ಣಾನದಿ ಪಾತ್ರದಲ್ಲಿ ಅಲರ್ಟ್ ಘೋಷಿಸಲಾಗಿದೆ.

ಇನ್ನೂ ಬೆಳಗಾವಿಯಲ್ಲಿ ಮನೆಗೋಡೆ ಕುಸಿದು ವೃದ್ಧೆ ದಾರುಣವಾಗಿ ಸಾವನ್ನಪ್ಪಿದ್ದಾರೆ. ವಿಜಯಪುರದ ಬಸವನ ಬಾಗೇವಾಡಿ ಪಟ್ಟಣದಲ್ಲಿ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಗದಗ ಜಿಲ್ಲೆಯ ಹಲವೆಡೆ ಭಾರಿ ಮಳೆಗೆ ಹಳ್ಳ-ಕೊಳ್ಳಗಳು ಉಕ್ಕಿ ಹರಿದಿವೆ. ಗಜೇಂದ್ರಗಡ ತಾಲೂಕಿನ ದ್ಯಾಮುಣಶಿ ಗ್ರಾಮದ ಬಳಿ ಉಕ್ಕಿ ಹರಿಯುವ ಹಳ್ಳದಲ್ಲೇ ಮಕ್ಕಳನ್ನು ದಾಟಿಸಿ, ಗ್ರಾಮಸ್ಥರು ದುಸ್ಸಾಹಸ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗಿದೆ.ಇದನ್ನೂ ಓದಿ: ಅಣ್ಣ ಶ್ರೀಮಂತ ಆಗ್ಬಿಟ್ಟ ಅಂತ ತಮ್ಮ ಮಾಡಿದ್ದೆಂತ ನೀಚ ಕೆಲ್ಸ ಗೊತ್ತಾ? – ಹಂತಕ ಸಿಕ್ಕಿಬಿದ್ದಿದ್ದೇ ರೋಚಕ!

Share This Article