ಮಡಿಕೇರಿ: ಬಿರುಗಾಳಿಯ ರಭಸಕ್ಕೆ ಮರದ ರೆಂಬೆ ನೆಲಕ್ಕುರಿಳಿದ್ದು, ಆಶ್ಚರ್ಯಕರ ರೀತಿಯಲ್ಲಿ ವ್ಯಕ್ತಿಯೊಬ್ಬರು ಬದುಕುಳಿದ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಸೋಮವಾರಪೇಟೆ ತಾಲೂಕಿನ ದುಬಾರೆ ಪ್ರವಾಸಿತಾಣದಲ್ಲಿ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಅಷ್ಟೇ ಅಲ್ಲದೆ ಮರದ ಅಡಿ ನಿಂತಿದ್ದ ಕಾರುಗಳು ಕೂಡ ಹಾನಿಗೆ ತುತ್ತಾಗಿಲ್ಲ.
ದುಬಾರೆ ಪ್ರವಾಸಿತಾಣದಲ್ಲಿ ಭಾರೀ ಬಿರುಗಾಳಿ ಮಳೆ ಕಾಣಿಸಿಕೊಂಡಿತ್ತು. ಗಾಳಿಯ ರಭಸಕ್ಕೆ ಮರವೊಂದರ ರೆಂಬೆಗಳು ನೆಲಕ್ಕೆ ಉರುಳಲು ಆರಂಭಿಸಿದ್ದವು. ಅದೇ ಮರದ ಕೆಳಗೆ ನಿಂತಿದ್ದ ವ್ಯಕ್ತಿ ತಕ್ಷಣವೇ ಅಲ್ಲಿಂದ ಓಡಲು ಶುರುಮಾಡಿದ. ಈ ವೇಳೆ ವ್ಯಕ್ತಿ ಓಡಿ ಬರುತ್ತಿದ್ದ ಕಡೆಯ ಮರದ ರೆಂಬೆ ನೆಲಕ್ಕೆ ಉರುಳಿದೆ. ಅದೃಷ್ಟವಶಾತ್ ವ್ಯಕ್ತಿಯು ಕೂದಲು ಎಳೆಯ ಅಂತರದಲ್ಲಿ ಪಾರಾಗಿದ್ದಾನೆ.
ಕೊಡಗು ಜಿಲ್ಲೆಯ ವಿವಿಧೆಡೆ ಇಂದು ಭಾರೀ ಮಳೆಯಾಗಿದ್ದು, ವರುಣನ ಆರ್ಭಟ ಮುಂದುವರಿದಿದೆ. ಪ್ರವಾಸಿಗರು, ಸವಾರರು ಪರದಾಡಿದ್ದಾರೆ.