ಕೋಲಾರ: ಮುಂಗಾರು ಪೂರ್ವ ಮಳೆಯ (Rain) ಅಬ್ಬರಕ್ಕೆ ಕೋಲಾರದಲ್ಲಿ 1.21 ಕೋಟಿ ರೂ. ಮೌಲ್ಯದ ಬೆಳೆ (Crop) ನಾಶವಾಗಿದೆ.
ಕಳೆದ ವಾರ ಸುರಿದ ಮಳೆಯಿಂದ ವಿಶ್ವ ಪ್ರಸಿದ್ಧ ಮಾವು ಹಾಗೂ ಬಾಳೆ ಸೇರಿದಂತೆ ವಿವಿಧ ಬೆಳೆಗಳು ಹಾನಿಯಾಗಿವೆ. ಒಟ್ಟು 304 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ 1 ಕೋಟಿ 21 ಲಕ್ಷ ರೂ. ಮೌಲ್ಯದ ಬೆಳೆ ನಷ್ಟ ಆಗಿರುವ ಕುರಿತು ಅಂದಾಜು ಮಾಡಲಾಗಿದೆ. 200 ಹೆಕ್ಟೇರು ಮಾವು ಹಾಗೂ 104 ಹೆಕ್ಟೆರು ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಹೆಬ್ಬಾಳ ಫ್ಲೈಓವರ್ ಮೇಲೆ ಸರಣಿ ಅಪಘಾತ – ಚಾಲಕ ದುರ್ಮರಣ
ಕೋಲಾರ (Kolar) ಹೊರವಲಯದ ಬಸವನತ್ತ ಬಳಿ ರೈತ (Farmers) ವಿಜಯ್ ಕುಮಾರ್ ಅವರಿಗೆ ಸೇರಿದ ಒಂದೂವರೆ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಹೂಕೋಸು ಮಳೆಯಿಂದ ಹಾಳಾಗಿದೆ. ಈಗ ಮೂರು ದಿನಗಳಿಂದ ಮಳೆ ಬಿಡುವು ಕೊಟ್ಟಿದ್ದು, ರೈತರು ತಮ್ಮ ಹೊಲಗಳಿಗೆ ತೆರಳಿ, ನಾಶವಾದ ಬೆಳೆಗಳನ್ನು ನೋಡಿ ಕಣ್ಣೀರಿಟ್ಟಿದ್ದಾರೆ. ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.
ಈಗಾಗಲೇ ಜಿಲ್ಲಾಧಿಕಾರಿಗಳಿಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬೆಳೆಹಾನಿ ಬಗ್ಗೆ ವರದಿ ಸಲ್ಲಿಸಿದ್ದಾರೆ. ಈ ಮೂಲಕ ಸರ್ಕಾರದಿಂದ ರೈತರಿಗೆ ಪರಿಹಾರ ಒದಗಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಇದನ್ನೂ ಓದಿ: ಕರ್ನಾಟಕದ ವಿದ್ಯಾರ್ಥಿನಿ ಮೇಲೆ ಮಹಾರಾಷ್ಟ್ರದಲ್ಲಿ ಗ್ಯಾಂಗ್ ರೇಪ್