Tuesday, 17th July 2018

Recent News

ರಾಜ್ಯಾದ್ಯಂತ ವರುಣನ ಆರ್ಭಟ-ಹಳ್ಳ ದಾಟುವಾಗ ಒಂದೇ ಕುಟುಂಬದ ಮೂವರು ನೀರುಪಾಲು

– ಗದಗದಲ್ಲಿ ಮೇಲ್ಛಾವಣಿ ಕುಸಿದು ಅಜ್ಜಿ, ಮೊಮ್ಮಕ್ಕಳ ಸಾವು

ಬೀದರ್/ಗದಗ: ಮಳೆಯ ಅವಾಂತರದಿಂದ ಒಂದೇ ಕುಟುಂಬದ ಮೂವರು ಸದ್ಯಸರು ನೀರುಪಾಲಗಿರುವ ಘಟನೆ ಬೀದರ್ ನ ಬಕನಾಳ ಲಾಡವಂತಿ ಬಳಿಯ ಹಳ್ಳದಲ್ಲಿ ನಡೆದಿದೆ.

ಹಳ್ಳ ದಾಟುವಾಗ ಪಕ್ಕದಲ್ಲಿದ್ದ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಕಳೆದ ರಾತ್ರಿ ನಡೆದ ಈ ಘಟನೆಯಲ್ಲಿ ಶಂಕರ್, ಲಕ್ಷ್ಮಿ ಮತ್ತು ಲತಾ ಸಾವನ್ನಪ್ಪಿದ್ದಾರೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಲಾಡವಂತಿ ಗ್ರಾಮದ ಬಳಿ ಘಟನೆ ನಡೆದಿದ್ದು, ಮಂಠಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.

ಗದಗ ಜಿಲ್ಲಾದ್ಯಂತ ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಮನೆಯ ಮೇಲ್ಛಾವಣಿ ಕುಸಿದು ಅಜ್ಜಿ ಹಾಗೂ ಇಬ್ಬರು ಮೊಮ್ಮಕ್ಕಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದೆ. ಮೆಹಬೂಬಿ(56), ಮುಸ್ಕಾನ್(8), ನಾಜೀಯಾ(10) ಮೃತ ದುರ್ದೈವಿಗಳು. ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Leave a Reply

Your email address will not be published. Required fields are marked *