ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಾದ್ಯಂತ ಇಂದು ಧಾರಾಕಾರ ಮಳೆಯಾಗುತ್ತಿದೆ. ಮಳೆಯಿಂದಾಗಿ ಕಾರವಾರ ನಗರ ಮತ್ತು ಸುತ್ತಮುತ್ತ ಹಲವು ರಸ್ತೆಗಳು ಜಲಾವೃತವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಕಾರವಾರ ನಗದ ಹಬ್ಬುವಾಡದಲ್ಲಿ ಹೈಚರ್ಚ್ ರಸ್ತೆ, ನಂದನಗದ್ದಾ, ರೈಲು ನಿಲ್ದಾಣ ರಸ್ತೆ ಸೇರಿದಂತೆ ಹಲವೆಡೆ ಚರಂಡಿಯಿಂದ ಮಳೆ ನೀರು ಉಕ್ಕಿ ಹರಿದಿದೆ. ರಸ್ತೆಯಲ್ಲಿ ಉಕ್ಕಿ ಹರಿದ ನೀರಿನಿಂದಾಗಿ ವಾಹನ ಸವಾರರು ಪರದಾಡುವಂತಾಗಿದ್ದು, ನಗರದ ರೈಲ್ವೆ ನಿಲ್ದಾಣರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಇದನ್ನೂ ಓದಿ: ಇಂಥ ವ್ಯಕ್ತಿ ಅಧ್ಯಕ್ಷತೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಲು ಸರ್ಕಾರ ನಿರ್ಧರಿಸಿದ್ದೇ ತಪ್ಪು: ದೇವೇಗೌಡರ ಪತ್ರ
ರವೀಂದ್ರನಾಥ ಟ್ಯಾಗೋರ್ ಕಡಲತೀರದ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಳೆ ನೀರು ತುಂಬಿದ್ದು, ಇದರಿಂದ ಸುಮಾರು ಅರ್ಧ ಕಿಲೋಮೀಟರ್ ರಸ್ತೆಯು ನದಿಯಂತೆ ಗೋಚರಿಸುತ್ತಿತ್ತು. ಕುಮಟಾ ಭಾಗದಲ್ಲಿ ಸಹ ಅಬ್ಬರದ ಮಳೆಗೆ ಹಲವು ರಸ್ತೆಗಳು ನೀರು ತುಂಬಿ ವಾಹನ ಸವಾರರು ಪರದಾಡುವಂತಾಯಿತು.
ಜಿಲ್ಲೆಯಲ್ಲಿ ಇದೇ ತಿಂಗಳು 25ರ ವರೆಗೆ ಯಲ್ಲೋ ಅಲರ್ಟ ಫೋಷಿಸಲಾಗಿದ್ದು, ನದಿ ದಡದಲ್ಲಿರುವ ಗ್ರಾಮಗಳ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.