ಕೋಲಾರ: ಬರದ ಜಿಲ್ಲೆ ಕೋಲಾರದಲ್ಲಿ ಕಳೆದೆರಡು ದಿನಗಳಿಂದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ, ರೈತರ ಬದುಕೇ ಮೂರಾಬಟ್ಟೆಯಾಗಿದೆ. ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಬೆಳೆ, ಬಿರುಗಾಳಿ ಸಹಿತ ಮಳೆಗೆ ಕೊಚ್ಚಿಹೋಗಿದೆ.
Advertisement
ಜಿಲ್ಲೆಯ ನಂಬಿಗಾನಹಳ್ಳಿ, ಆನೇಪುರ, ಶಕ್ಲಿಪುರ, ಚಿಕ್ಕಸಬ್ಬೇನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿನ ನೂರಾರು ಎಕರೆಯಲ್ಲಿ ಬೆಳೆದಿದ್ದ ಟೊಮ್ಯಾಟೋ, ಕ್ಯಾಪ್ಸಿಕಂ, ಬೀನ್ಸ್, ಮಾವಿನಕಾಯಿ, ಬಾಳೆ ತೋಟ, ಹಿಪ್ಪುನೇರಳೆ ಬೆಳೆ ನೆಲಸಮವಾಗಿದೆ.
Advertisement
Advertisement
ನಂಬಿಗಾನಹಳ್ಳಿ ಕಾಲೋನಿಯಲ್ಲಿ ಐದಾರು ಮನೆಗಳ ಹೆಂಚುಗಳು ಹಾಗೂ ಸಿಮೆಂಟ್ ಶೀಟ್‍ಗಳು ಹಾರಿಹೋಗಿವೆ. ಇನ್ನೂ ಕೆಲವು ಕಡೆ ಲೈಟ್ ಕಂಬಗಳು, ನೂರಾರು ಮರಗಳು ನೆಲ್ಲಕ್ಕುರುಳಿವೆ. ಇತ್ತ ಜಿಲ್ಲೆಯ ಮುಳಬಾಗಿಲು ತಾಲೂಕಿನ ಅಪ್ಪೇನಹಳ್ಳಿಯಲ್ಲಿ ಮನೆ ಗೋಡೆ ಕುಸಿದು ಒರ್ವ ಸಾವನ್ನಪ್ಪಿ, ಮತ್ತೊರ್ವನಿಗೆ ಗಂಭೀರ ಗಾಯವಾಗಿದೆ.