– ಗದಗ್ ನಲ್ಲಿ ಗೋಡೆ ಕುಸಿದು ತಾಯಿ-ಮಗಳ ದುರ್ಮರಣ
ಬೆಂಗಳೂರು: ಮಹಾನಗರಿ ಬೆಂಗಳೂರಲ್ಲಿ ಎರಡನೇ ದಿನವೂ ವರುಣ ಅಬ್ಬರಿಸಿದ್ದು, ರಾತ್ರಿ ಧಾರಾಕಾರ ಮಳೆಯಾಗಿದೆ. ಜಾಲಹಳ್ಳಿ, ಗೊರಗುಂಟೆ ಪಾಳ್ಯ, ಯಶವಂತಪುರ, ರಾಜಾಜಿನಗರ, ಮಲ್ಲೇಶ್ವರಂ, ಬಸವೇಶ್ವರನಗರ, ಯಲಹಂಕ, ಹೆಬ್ಬಾಳ, ಆರ್ ಟಿ ನಗರ, ಶೇಷಾದ್ರಿಪುರಂ, ಎಲೆಕ್ಟ್ರಾನಿಕ್ ಸಿಟಿ ರಾಜರಾಜೇಶ್ವರಿನಗರ, ಕೆಂಗೇರಿ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ.
ಬಸವೇಶ್ವರನಗರದಲ್ಲಿ ಮಳೆಯ ರಭಸಕ್ಕೆ ಮರವೊಂದು ಧರೆಗುರುಳಿ ಬಿದ್ದಿದೆ. ರಾತ್ರಿ 9:45ರ ಸುಮಾರಿಗೆ ಬೃಹತ್ ಮರವೊಂದು ಪಾರ್ಕ್ ಮಾಡಿದ್ದ ಇಕೋಸ್ಟೋಟ್ಸ್ ಕಾರ್ ಮೇಲೆ ಬಿದ್ದು ಸಂಪೂರ್ಣ ಜಖಂ ಆಗಿದೆ. ಮರದ ಕೊಂಬೆಗಳು ವಿದ್ಯುತ್ ಕಂಬದ ಮೇಲೆ ಬಿದ್ದಿರುವುದರಿಂದ ಪವರ್ ಕಟ್ ಆಗಿದ್ದು, ಈ ಸಂಬಂಧ ಬೇಸ್ಕಾಂಗೆ ಮತ್ತು ಬಿಬಿಎಂಪಿಗೆ ದೂರು ನೀಡಿದ್ರೂ, ತಡರಾತ್ರಿಯಾದ್ರು ಸ್ಥಳಕ್ಕೆ ಯಾರು ಬಂದು ಮರ ತೆರವು ಕಾರ್ಯ ಮಾಡಿಲ್ಲ.
ಇತ್ತ ಸಾಲು ಸಾಲು ರಜೆಗಳ ಹಿನ್ನಲೆಯಲ್ಲಿ ಊರುಗಳಿಗೆ ತೆರಳುತ್ತಿದ್ದ ಜನ ಮೆಜೆಸ್ಟಿಕ್‍ನಲ್ಲಿ ಬಸ್ ಗಳು ಸಿಗದೆ ಪರದಾಡುತ್ತಿದ್ರೆ, ಮಳೆಯಿಂದ ಭಾರಿ ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು.
ಇತ್ತ ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿಯಲ್ಲಿ ಮಳೆಗೆ ಗೋಡೆ ಕುಸಿದು ತಾಯಿ-ಮಗಳು ಸಾವನ್ನಪ್ಪಿದ್ದಾರೆ. ಅಂಬೇಡ್ಕರ್ ಕಾಲೋನಿಯ 26 ವರ್ಷದ ಗಂಗಮ್ಮ ಕೆಂಗಾರ, 8 ವರ್ಷದ ಕಸ್ತೂರಿ ಮೃತರು. ಮಳೆ ಬರ್ತಿದ್ದಾಗ ಮನೆಯಲ್ಲಿ ಐವರು ಮಲ್ಕೊಂಡಿದ್ರು. ತಾಯಿ-ಮಗಳು ಮಲಗಿಕೊಂಡಿದ್ದ ಕೋಣೆಯ ಹಿಂಬದಿಯ ಗೊಡೆ ಕುಸಿದುಬಿದ್ದು, ಈ ಅವಘಡ ಸಂಭವಿಸಿದೆ.