– ಚರಂಡಿಯಲ್ಲಿ ಯುವಕನ ಶವ ಪತ್ತೆ
ಬೆಂಗಳೂರು: ಶುಕ್ರವಾರ ಸಂಜೆಯಿಂದ ತಡರಾತ್ರಿವರೆಗೂ ಸುರಿದ ವರ್ಷಧಾರೆಗೆ ಬೆಂಗಳೂರು ಮಹಾನಗರಿ ತತ್ತರಿಸಿ ಹೋಗಿದೆ.
Advertisement
ಎಡಬಿಡದೆ ಸುರಿದ ಮಳೆಗೆ ಬೆಂಗಳೂರಿನ ಬಹುತೇಕ ಭಾಗಗಳು ಸಂಪೂರ್ಣ ಜಲಾವೃತವಾಗಿದ್ದವು. ಮನೆಗಳಿಗೆ ನೀರು ನುಗ್ಗಿತ್ತು. ರಸ್ತೆಗಳು ನದಿಗಳಾಗಿದ್ದವು. ಕಿಲೋ ಮೀಟರ್‍ಗಟ್ಟಲೆ ಟ್ರಾಫಿಕ್ ಜಾಮ್ ಆಗಿತ್ತು. ವಾಹನ ಸವಾರರು ಪರದಾಡಿ ಹೋದ್ರು.
Advertisement
ಮೆಜೆಸ್ಟಿಕ್, ಮಾರ್ಕೆಟ್, ಶಿವಾಜಿನಗರ, ಮಲ್ಲೇಶ್ವರಂ, ಮತ್ತಿಕೆರೆ, ಯಶವಂತಪುರ, ಆರ್‍ಟಿನಗರ, ಹೆಬ್ಬಾಳ, ಕೆ.ಆರ್.ಪುರ, ವೈಟ್‍ಫೀಲ್ಡ್, ಮಹದೇವಪುರ, ಕಾಡುಗೋಡಿ, ಜಯನಗರ, ರಾಜಾಜಿನಗರ, ಕೋರಮಂಗಲ, ಬೆಳ್ಳಂದೂರು, ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಮೈಸೂರು ರಸ್ತೆ, ಕೆಂಗೇರಿ, ಕಮ್ಮನಹಳ್ಳಿ, ಪುಲಿಕೇಶಿನಗರ, ಬಸವನಗುಡಿ, ಆವಲಹಳ್ಳಿಯಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ.
Advertisement
ಭಾರಿ ಗಾಳಿ ಮಳೆಯಿಂದಾಗಿ 20ಕ್ಕೂ ಮರಗಳು ಧರೆಗುರುಳಿವೆ. ಕಟ್ಟಡಗಳು ಕುಸಿದಿವೆ. ಬಿಬಿಎಂಪಿ ಕಂಟ್ರೋಲ್ ರೂಮ್‍ಗೆ ದೂರಿನ ಸುರಿಮಳೆಯೇ ಹರಿದಿದೆ. ಇನ್ನು ಇವತ್ತೂ ಸಹ ನಿನ್ನೆಗಿಂತಲೂ ಬೆಚ್ಚಿಬೀಳಿಸುವ ಮಳೆಯಾಗಲಿದೆ ಎಂದು ಹೇಳಲಾಗಿದೆ.
Advertisement
ಮೂವರ ದುರ್ಮರಣ: ಮಹಾ ಮಳೆಗೆ ಬೆಂಗಳೂರಿನಲ್ಲಿ ಬೃಹತ್ ಮರ ಬಿದ್ದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಮಿನರ್ವ ಸರ್ಕಲ್ ಬಳಿ ಮಳೆ ಬರ್ತಿದ್ದ ಕಾರಣ ಮರದ ಕೆಳಗೆ ಕಾರ್ ನಿಲ್ಲಿಸಿದ್ರು. ಈ ವೇಳೆ ಮರ ಬಿದ್ದು ಸಾವನ್ನಪ್ಪಿದ್ದಾರೆ. ಮೃತರಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದ್ದು, ಇಬ್ಬರಿಗೆ ಉದ್ಯೋಗ ನೀಡುವುದಾಗಿ ಸಚಿವ ಜಾರ್ಜ್ ಹೇಳಿದ್ದಾರೆ.
ಕೊಚ್ಚಿ ಹೋದ ಯವಕ: ಶೇಷಾದ್ರಿಪುರಂ ರೈಲ್ವೇ ಸೇತುವೆ ಕೆಳಗೆ ಯುವಕನೋರ್ವ ಕೊಚ್ಚಿ ಹೋಗಿದ್ದಾನೆ. ಯುವಕ ವರುಣ್‍ಗಾಗಿ ರಾತ್ರಿಯೆಲ್ಲಾ ಎನ್‍ಡಿಆರ್‍ಎಫ್ ಶೋಧ ಕಾರ್ಯ ನಡೆಸ್ತು. ಸುಮಾರು ಐದು ತಾಸು ಕಾರ್ಯಾಚರಣೆ ಬಳಿಕ ಚರಂಡಿಯಲ್ಲಿ ವರುಣ್ ದೇಹ ಪತ್ತೆಯಾಯ್ತು.
ಸುಬ್ಬಣ್ಣ ಗಾರ್ಡನ್ ಬಳಿ ಬಿದ್ದಿದ್ದ ಮರವನ್ನು ಹರಸಾಹಸಪಟ್ಟು ತೆರವು ಮಾಡಲಾಯ್ತು. ಶಿವಾಜಿನಗರದಲ್ಲಿ ಮಳೆಯಿಂದಾಗಿ ಮನೆಗೆ ಹೋಗಲಾಗದೆ ಜನ ಬಸ್ ಸ್ಟ್ಯಾಂಡ್‍ನಲ್ಲಿ ಕಾಲ ಕಳೆಯಬೇಕಾಯ್ತು. ಶಿವಾಜಿನಗರದ ಚರ್ಜ್ ನಲ್ಲಿ ನಡೆಯುತ್ತಿದ್ದ ಮೇರಿ ಫೆಸ್ಟ್‍ಗೆ ಮಳೆರಾಯ ಅಡ್ಡಿಪಡಿಸಿದ. ನಗರದ ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
ಚಿತ್ರದುರ್ಗ ಜಿಲ್ಲೆಯಲ್ಲಿ ಕೂಡ ರಾತ್ರಿಯಿಡೀ ಉತ್ತಮ ಮಳೆಯಾಗಿದೆ. ಚಿತ್ರದುರ್ಗ ನಗರದ ವಿವಿಧೆಡೆ ಮಳೆಯಿಂದ ಕೆಲ ಬಡಾವಣೆಗಳಿಗೆ ನೀರು ನುಗ್ಗಿದೆ. ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದ 15 ವರ್ಷಗಳ ಇತಿಹಾಸನ್ನ ಮುರಿದ ಮಳೆ ದೊಡ್ಡಹಳ್ಳ ಹರಿಯುತ್ತಿರುವುದರಿಂದ ಮನೆಗಳಿಗೆ ನುಗ್ಗಿದ ನೀರು ಅಂಗನವಾಡಿ ಕೇಂದ್ರ, ತೋಟ, ಜಮೀನುಗಳಿಗೆ ನೀರು ನುಗ್ಗಿತ್ತು. ಗೋಪನಹಳ್ಳಿ ಯಿಂದ ರಾಷ್ಟ್ರೀಯ ಹೆದ್ದಾರಿ ರಸ್ತೆ ವಾಹನಹಗಳ ಸಂಚಾರ ಬಂದ್ ಆಗಿತ್ತು.