ಮೈಸೂರಿನಿಂದ ಚೆನ್ನೈಗೆ ಜೀವಂತ ಹೃದಯ ಏರ್ ಲಿಫ್ಟ್

Public TV
1 Min Read
heart airlift

ಮೈಸೂರು: ಮೆದುಳು ನಿಷ್ಕ್ರಿಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ಅಂಗಾಂಗ ದಾನ ಮಾಡಲಾಗಿದ್ದು, ಆತನ ಹೃದಯವನ್ನು ಮೈಸೂರಿನಿಂದ ಚೆನ್ನೈಗೆ ವಿಮಾನದ ಮೂಲಕ ರವಾನೆ ಮಾಡಲಾಗಿದೆ.

ಜನವರಿ 18ರಂದು ರಸ್ತೆ ಅಪಘಾತವಾಗಿ ದರ್ಶನ್(24) ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಪಘಾತದ ರಭಸಕ್ಕೆ ಯುವಕನ ಮೆದುಳು ನಿಷ್ಕ್ರಿಯವಾಗಿದ್ದ ಕಾರಣ ಅವರ ಕುಟುಂಬ ಅಂಗಾಂಗ ದಾನ ಮಾಡಲು ಮುಂದಾಗಿತ್ತು. ಇದನ್ನೂ ಓದಿ: ಅಪ್ಪುವಿನ ಪುಟಾಣಿ ಅಭಿಮಾನಿಗಳಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ – ಶಿವಣ್ಣನ ಭೇಟಿಗೆ ಹಾತೊರೆಯುತ್ತಿರುವ ಮಕ್ಕಳು

heart airlift darshan

ಗುಂಡ್ಲುಪೇಟೆ ಮೂಲದ ದರ್ಶನ್ ಮೈಸೂರಿನಲ್ಲಿ ವಾಸವಾಗಿದ್ದು, ಬೆಳವಾಡಿಯಲ್ಲಿ ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದರು. 3 ವರ್ಷಗಳ ಹಿಂದೆ ಮದುವೆಯಾಗಿದ್ದ ವ್ಯಕ್ತಿಗೆ 2 ತಿಂಗಳ ಮಗು ಕೂಡಾ ಇತ್ತು. ತನ್ನ ಅಂಗಾಂಗ ದಾನದ ಮೂಲಕ ಸಾವಿನಲ್ಲೂ 6 ಮಂದಿಗೆ ಮರುಜೀವ ನೀಡಿದ್ದಾರೆ. ಇದನ್ನೂ ಓದಿ: ಮದುವೆಗೆ ಬರಬೇಡಿ, ಆಶೀರ್ವಾದ ಮರಿಬೇಡಿ – ಕರೆಯೋಲೆ ಹಂಚಿದ ವಧು-ವರ

heart airlift ambulance

ದರ್ಶನ್ ಹೃದಯವನ್ನು ಅಪೋಲೊ ಆಸ್ಪತ್ರೆಯಿಂದ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದವರೆಗೆ ಗ್ರೀನ್ ಕಾರಿಡಾರ್ ವ್ಯವಸ್ಥೆಯ ಆಂಬುಲೆನ್ಸ್ ಮೂಲಕ ಕೊಂಡೊಯ್ದು, ಬಳಿಕ ವಿಮಾನದಲ್ಲಿ ಚೆನ್ನೈಗೆ ಸಾಗಿಸಲಾಗಿದೆ. ಚೆನ್ನೈನ ಎಂಜಿಎಂ ಹೆಲ್ತ್ ಕೇರ್‌ಗೆ ಹೃದಯವನ್ನು ರವಾನೆ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *