ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್‍ನ ಪುನೀತ್ ರಾಜಕುಮಾರ್ ಅಪ್ಪಟ ಅಭಿಮಾನಿಗಳಾದ ಪುಟಾಣಿ ಅಣ್ಣತಂಗಿ ಸಾಮಾನ್ಯ ಜ್ಞಾನದ ವಿಷಯಗಳನ್ನು ಪಟಪಟನೇ ಹೇಳುವುದರಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ್ದಾರೆ. ಆದ್ರೆ ಈಗ ವಿಷಯ ಅದಲ್ಲ ತಮ್ಮ ಸಾಧನೆಯ ಪ್ರಮಾಣ ಪತ್ರವನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್‌ರಿಂದಲೇ ಪಡೆಯಬೇಕು ಎಂದು ಮಕ್ಕಳು ಹಂಬಲಿಸುತ್ತಿದ್ದಾರೆ.
Advertisement
ಮುದಗಲ್‍ನ ಚಂದ್ರಕಲಾ, ಯಲ್ಲಪ್ಪ ದಂಪತಿಯ ಮಕ್ಕಳಾದ ಶಿವರಾಜ್ ಹಾಗೂ ಸಂಜನಾ ತಮ್ಮ ಸಾಧನೆಯನ್ನು ಸ್ವತಃ ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್ ಕುಮಾರ್ ಹಾಡಿಹೊಗಳಬೇಕು, ಅವರ ಆಶೀರ್ವಾದ ಪಡೆಯಬೇಕು ಅಂತ ತುಂಬಾನೇ ಆಸೆ ಇಟ್ಟುಕೊಂಡಿದ್ದರು, ಆದ್ರೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಅಪ್ಪು ಸಮಾಧಿ ಬಳಿ ಪ್ರಮಾಣ ಪತ್ರ ಇಟ್ಟು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್‌ರಿಂದ ಆಶೀರ್ವಾದ ಪಡೆದು ಏಷ್ಯಾ ಬುಕ್ ಆಫ್ ರೆಕಾರ್ಡ್‍ಗೆ ತಯಾರಿ ನಡೆಸುವ ಆಸೆಯಲ್ಲಿದ್ದಾರೆ. ಇದನ್ನೂ ಓದಿ: ಮದುವೆಗೆ ಬರಬೇಡಿ, ಆಶೀರ್ವಾದ ಮರಿಬೇಡಿ – ಕರೆಯೋಲೆ ಹಂಚಿದ ವಧು-ವರ
Advertisement
Advertisement
ತಂದೆ ಕೂಲಿ ಕೆಲಸ ಮಾಡುತ್ತಿದ್ದು ಸಣ್ಣ ಗುಡಿಸಲು ರೀತಿಯ ಮನೆಯಲ್ಲಿ ಕುಟುಂಬ ವಾಸಿಸುತ್ತಿದ್ದರೂ ಮಕ್ಕಳ ಸಾಧನೆಗೆ ಅಡ್ಡಿಯಾಗಿಲ್ಲ. ಕವಿಗಳ ಕಾವ್ಯನಾಮ, ಸಂವಿಧಾನದ ವಿಷಯ, ನೋಬೆಲ್, ಭಾರತರತ್ನ ಪ್ರಶಸ್ತಿ ಪಡೆದವರ ಹೆಸರುಗಳು ಹೀಗೆ ಸಾಕಷ್ಟು ವಿಷಯಗಳ ಸುಮಾರು 10 ಸಾವಿರಕ್ಕೂ ಹೆಚ್ಚು ಪ್ರಶ್ನೆಗಳಿಗೆ ಈ ಇಬ್ಬರು ಮಕ್ಕಳು ಪಟಪಟನೇ ಉತ್ತರಿಸುತ್ತಾರೆ. ಈ ಮೂಲಕ ಈ ಅಣ್ಣ ತಂಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ್ದಾರೆ. ತಾಯಿ ಆಶಾ ಕಾರ್ಯಕರ್ತೆಯಾಗಿದ್ದು ಲಾಕ್‍ಡೌನ್ ಸಮಯದಲ್ಲಿ ಮಕ್ಕಳು ಮನೆಯಲ್ಲಿ ಓದಿಕೊಳ್ಳುವುದನ್ನು ಗಮನಿಸಿ ಇವರ ನೆನಪಿನ ಶಕ್ತಿ ಬಗ್ಗೆ ಅಚ್ಚರಿ ಪಟ್ಟಿದ್ದರು. ಇವರಿಗೆ ಟ್ಯೂಷನ್ ಹೇಳುತ್ತಿದ್ದ ಮೇಷ್ಟ್ರು ಮಹಾಂತೇಶ್ ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡಿದ್ದಾರೆ.
Advertisement
ಮಕ್ಕಳ ಆಸೆಗೆ ನಟ ಶಿವರಾಜ್ ಕುಮಾರ್ ಹೇಗೆ ಸ್ಪಂದಿಸುತ್ತಾರೊ ಗೊತ್ತಿಲ್ಲ. ಆದ್ರೆ ಶಿವಣ್ಣನ ಕೈಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಮಾಣ ಪತ್ರ ಪಡೆದು ಮುಂದಿನ ತಯಾರಿ ನಡೆಸಲು ಅಣ್ಣತಂಗಿ ನಿರ್ಧರಿಸಿದ್ದಾರೆ. ಪುಟಾಣಿ ಅಭಿಮಾನಿಗಳ ಆಸೆಯನ್ನು ಶಿವಣ್ಣ ಯಾವಾಗ ಈಡೇರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಮಾಡುತ್ತಿದ್ದಾರೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್ ಎದುರೇ ಬೆಂಕಿ ಹಚ್ಚಿಕೊಂಡು ವ್ಯಕ್ತಿ ಆತ್ಮಹತ್ಯೆಗೆ ಯತ್ನ