ಸಣ್ಣ ಮಕ್ಕಳಿಗೆ ಆಹಾರ ಕೊಡುವುದು ಅಂದರೆ ತುಂಬಾ ಕಷ್ಟ. ಅದರಲ್ಲೂ ಈ ಚಳಿಗಾಲದಲ್ಲಿ ಮಕ್ಕಳಿಗೆ ಆಹಾರ ತಿನ್ನಿಸುವುದು ತುಂಬಾ ಕಷ್ಟದ ಕೆಲಸವಾಗಿದೆ. ಯಾವ ಆಹಾರ ಕೊಟ್ಟರೆ ಮಕ್ಕಳಿಗೆ ಸಮಸ್ಯೆಯಾಗುವುದಿಲ್ಲ ಎಂದು ಯೋಚನೆ ಮಾಡಿ ಮಕ್ಕಳಿಗೆ ಕೊಡಬೇಕು. ಆದ್ದರಿಂದ 4 ಮತ್ತು 6 ತಿಂಗಳ ಮಕ್ಕಳಿಗೆ ಸುಲಭವಾದ ಹಣ್ಣಿನ ಆಹಾರಗಳು ಇಲ್ಲಿವೆ…
4 ತಿಂಗಳ ಮಗುವಿನ ಆಹಾರ
Advertisement
1. ಸೇಬಿನ ಲಸ್ಸಿ
Advertisement
* ಮೊದಲಿಗೆ ಒಂದು ಸೇಬು ತೆಗೆದುಕೊಂಡು, ಸಿಪ್ಪೆ ತೆಗೆದು ಸಣ್ಣಗೆ ಕಟ್ ಮಾಡಿಕೊಳ್ಳಿ.
* ಬಳಿಕ ಅದಕ್ಕೆ ಸ್ವಲ್ಪ ನೀರು ಹಾಕಿ 5 ರಿಂದ 8 ನಿಮಿಷ ಮೃದುವಾಗುವರೆಗೂ ಬೇಯಿಸಿಕೊಳ್ಳಿ.
* ನಂತರ ಅದನ್ನು ಮಿಕ್ಷಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
* ಈಗ ಒಂದು ಬೌಲ್ ಗೆ ಹಾಕಿ ಮಗುವಿಗೆ ತಿನ್ನಿಸಬಹುದು. ಇದು ಆರೋಗ್ಯಕರವಾದ ಆಹಾರವಾಗಿದೆ.
Advertisement
Advertisement
6 ತಿಂಗಳ ಮಕ್ಕಳಿಗೆ
ಬಾಳೆ ಹಣ್ಣಿನ ಲಸ್ಸಿ
* ಅರ್ಧ ದಪ್ಪ ಬಾಳೆಹಣ್ಣು ತೆಗೆದುಕೊಂಡು ಸಣ್ಣಗೆ ಕಟ್ ಮಾಡಿಕೊಳ್ಳಿ.
* ಬಳಿಕ ಅದನ್ನು ಒಂದು ಬೌಲ್ ಗೆ ಹಾಕಿಕೊಂಡು ಚಮಚದಲ್ಲಿ ಸ್ಮ್ಯಾಶ್ ಮಾಡಿಕೊಳ್ಳಿ.
* ಈಗ ಮಗುವಿನ ಸ್ವೀಟ್ ಬನಾನಾ ಲಸ್ಸಿ ತಿನ್ನಿಸಿ.
ಪಪ್ಪಾಯ ಲಸ್ಸಿ
* ಪಪ್ಪಾಯ ಹಣ್ಣನ್ನು ಸಣ್ಣಗೆ ಕಟ್ ಮಾಡಿಕೊಂಡು ಮಿಕ್ಷಿಗೆ ಹಾಕಿ ರುಬ್ಬಿಕೊಳ್ಳಿ.
* ಈಗ ಒಂದು ಬೌಲ್ ಗೆ ಹಾಕಿಕೊಂಡು ಮಗುವಿಗೆ ತಿನ್ನಿಸಿ.
ಪೇರಳೆ ಹಣ್ಣಿನ ಲಸ್ಸಿ
* ಪೇರಳೆ ಹಣ್ಣಿನ ಸಿಪ್ಪೆ ತೆಗೆದು, ಅದನ್ನು ಸಣ್ಣಗೆ ಕತ್ತರಿಸಿಕೊಳ್ಳಿ.
* ಬಳಿಕ ಅದಕ್ಕೆ ಸ್ವಲ್ಪ ನೀರು ಹಾಕಿ 5ರಿಂದ 8 ನಿಮಿಷ ಬೇಯಿಸಿರಿ.
* ಈಗ ಅದನ್ನು ಮಿಕ್ಷಿಗೆ ಹಾಕಿ ರುಬ್ಬಿಕೊಂಡರೆ ಪೇರಳೆ ಹಣ್ಣಿನ ಲಸ್ಸಿ ಸಿದ್ಧ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv