ನವದೆಹಲಿ: ಕೈಲಾಸ ದೇಶದ ಪೀಠಾಧಿಪತಿ ಬಿಡದಿ ನಿತ್ಯಾನಂದನ ಆರೋಗ್ಯ ತೀವ್ರವಾಗಿ ಬಿಗಡಾಯಿಸಿರುವ ಶಂಕೆ ಮೂಡಿದೆ. ತಾನು ಬದುಕಲು ಬಯಸುತ್ತಿಲ್ಲ ಎಂದು ನಿತ್ಯಾನಂದ ಫೇಸ್‍ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
Advertisement
ತನಗೆ ಕ್ಯಾನ್ಸರ್ ಇಲ್ಲ, ದೇಹದ ಎಲ್ಲಾ ಅಂಗಾಂಗ ಸರಿಯಾಗಿ ಕೆಲಸ ಮಾಡ್ತಿವೆ ಎಂದು ವೈದ್ಯಕೀಯ ವರದಿಗಳು ಹೇಳುತ್ತಿವೆ. ಆದರೆ ತಮಗೆ ಅನ್ನ, ನೀರು ಸೇವಿಸಲು ಆಗುತ್ತಿಲ್ಲ. ಒಂದು ವೇಳೆ ಬಲವಂತವಾಗಿ ಆಹಾರ ಸೇವಿಸಿದರೂ ಅದು ಜೀರ್ಣವಾಗುತ್ತಿಲ್ಲ. ನಿತ್ಯ ಪೂಜೆ ಮಾತ್ರ ಮಾಡಲು ಆಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಹಾಲಿ ಓಬಿಸಿ ನೀತಿಯಡಿ ಬಿಬಿಎಂಪಿ ಚುನಾವಣೆ ನಡೆಸಿ – ಸುಪ್ರೀಂ ಮರು ಆದೇಶ
Advertisement
Advertisement
ಕಳೆದ ಆರು ತಿಂಗಳಿಂದ ತಾನು ಇದೇ ಸ್ಥಿತಿಯಲ್ಲಿ ಇದ್ದೇನೆ. ತಾನು ಯಾವಾಗಲೂ ನಿರ್ವಿಕಲ್ಪ ಸಮಾಧಿ ಸ್ಥಿತಿ ಇರುತ್ತೇನೆ. ತನಗೆ ಸೂಕ್ತ ಚಿಕಿತ್ಸೆ ನೀಡಲು ಕೈಲಾಸದಲ್ಲಿ ಆಸ್ಪತ್ರೆಗಳು ಇಲ್ಲದ ಕಾರಣ, ತಮ್ಮ ಶಿಷ್ಯರಾದ ವೈದ್ಯರೇ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ನಿತ್ಯಾನಂದ ಹೇಳಿಕೊಂಡಿದ್ದಾರೆ.
Advertisement