ವೈದ್ಯರು ಗರ್ಭಿಣಿಯರಿಗೆ (Pregnant) ಮನೆಯಲ್ಲಿ ತಯಾರಿಸಿದ ಆಹಾರ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಲು ಸಲಹೆ ನೀಡುತ್ತಾರೆ. ಈ ಸಮಯದಲ್ಲಿ ಆರೋಗ್ಯದ ಹೊರತಾಗಿ, ಮಗುವಿನ ಸರಿಯಾದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಆಹಾರವನ್ನು ತೆಗೆದುಕೊಳ್ಳಬೇಕು. ಆದ್ದರಿಂದ ಗರ್ಭಿಣಿಯರು ಸೇವಿಸುವ ಆಹಾರದಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಆರೋಗ್ಯಕರ (Health) ಕೊಬ್ಬನ್ನು ಒಳಗೊಂಡಿರುವುದು ಮುಖ್ಯವಾಗಿದೆ. 9 ತಿಂಗಳವರೆಗೆ ಮಗುವಿನ ಸರಿಯಾದ ಬೆಳವಣಿಗೆಗೆ ಸಹಾಯ ಮಾಡುವ ಆಹಾರದಲ್ಲಿ ಈ ಕೆಳಗಿನವುಗಳನ್ನು ಕೂಡ ಸೇರಿಸಿ.
Advertisement
ಗರ್ಭಾವಸ್ಥೆಯಲ್ಲಿ ಏನು ತಿನ್ನಬೇಕು?:
ಡೈರಿ ಉತ್ಪನ್ನಗಳು: ಇವುಗಳಿಂದ ದೇಹವು ಜೀವಸತ್ವಗಳು ಮತ್ತು ಕ್ಯಾಲ್ಸಿಯಂನಂತಹ ಅಗತ್ಯವಾದ ಪೋಷಕಾಂಶಗಳನ್ನು ಸುಲಭವಾಗಿ ಪಡೆಯುತ್ತದೆ. ಈ ಪೋಷಕಾಂಶಗಳು ಗರ್ಭಾವಸ್ಥೆಯಲ್ಲಿ ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕಾಟೇಜ್ ಚೀಸ್, ಮೊಸರು, ಹಾಲು, ಬೆಣ್ಣೆ ಮತ್ತು ಚೀಸ್ ಅನ್ನು ಸೇರಿಸಿಕೊಳ್ಳಿ.
Advertisement
ಬೆರ್ರಿ ಹಣ್ಣುಗಳು ಮತ್ತು ಸಿಹಿ ಆಲೂಗಡ್ಡೆ: ಬೆರ್ರಿ ಹಣ್ಣುಗಳು ವಿಟಮಿನ್ ಸಿ ಮತ್ತು ಆರೋಗ್ಯಕರ ಕಾರ್ಬೋಹೈಡ್ರೇಟ್‌ಗಳನ್ನು ಒಳಗೊಂಡಿರುತ್ತವೆ. ಅಲ್ಲದೇ ಅನೇಕ ಇತರ ಪೋಷಕಾಂಶಗಳು ಸಹ ದೊರೆಯುತ್ತದೆ. ಅದೇ ಸಮಯದಲ್ಲಿ ಸಿಹಿ ಆಲೂಗಡ್ಡೆ ತಿನ್ನುವ ಮೂಲಕ ದೇಹದಲ್ಲಿ ಬೀಟಾ ಕ್ಯಾರೋಟಿನ್ ಕೊರತೆಯನ್ನು ತೆಗೆದುಹಾಕಬಹುದು. ಇದು ಮಗುವಿನ ಬೆಳವಣಿಗೆಗೂ ಸಹಾಯ ಮಾಡುತ್ತದೆ.
Advertisement
Advertisement
ದ್ವಿದಳ ಧಾನ್ಯಗಳು: ಇದರಿಂದ ದೇಹಕ್ಕೆ ಕಬ್ಬಿಣ, ಪ್ರೋಟೀನ್, ಫೈಬರ್ ಮತ್ತು ಕ್ಯಾಲ್ಸಿಯಂ ದೊರೆಯುತ್ತದೆ. ಇವು ಸಸ್ಯ ಆಧಾರಿತ ಆಹಾರದ ಅತ್ಯುತ್ತಮ ಮೂಲವಾಗಿದೆ. ಇನ್ನು ಬೀನ್ಸ್ ಸೇವನೆಯಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಸುಲಭವಾಗಿ ಸಿಗುತ್ತವೆ. ಇದನ್ನೂ ಓದಿ: ಎಲೆಗಳು ಮಾತ್ರವಲ್ಲದೆ ತುಳಸಿ ಬೀಜಗಳೂ ಆರೋಗ್ಯಕ್ಕೆ ಒಳ್ಳೆಯದು!
ಹಸಿರು ತರಕಾರಿಗಳು: ಆಹಾರದಲ್ಲಿ ಹಸಿರು ಎಲೆಗಳ ತರಕಾರಿಗಳು ಮತ್ತು ಬ್ರೊಕೊಲಿಯನ್ನು ಸೇರಿಸಿ. ಹಸಿರು ತರಕಾರಿಗಳಿಂದ ದೇಹವು ಫೋಲೇಟ್, ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಎ, ಬಿ 6, ಸಿ ಮತ್ತು ಕೆ ಪಡೆಯುತ್ತದೆ. ಇದು ಹಿಮೋಗ್ಲೋಬಿನ್ ಅನ್ನು ಆರೋಗ್ಯಕರವಾಗಿ ಮತ್ತು ಮೂಳೆಗಳನ್ನು ಆರೋಗ್ಯಕರವಾಗಿರಿಸುತ್ತದೆ.
ನೀರು: ದಿನಕ್ಕೆ ಕನಿಷ್ಠ 10-12 ಗ್ಲಾಸ್ ನೀರನ್ನು ಕುಡಿಯಬೇಕು. ಸಾಕಷ್ಟು ನೀರು ಕುಡಿಯುವುದರಿಂದ ಆಮ್ನಿಯೋಟಿಕ್ ದ್ರವವು ಮಗುವಿನ ಸುತ್ತಲೂ ಇರುತ್ತದೆ. ಇದರಿಂದ ಜೀರ್ಣಕ್ರಿಯೆಯು ಸಹ ಉತ್ತಮವಾಗಿರುತ್ತದೆ ಮತ್ತು ಮಲಬದ್ಧತೆಯ ಸಮಸ್ಯೆ ಇರುವುದಿಲ್ಲ.
ಒಣ ಹಣ್ಣುಗಳು: ಗರ್ಭಿಣಿಯರು ಪ್ರತಿದಿನ ಒಂದು ಹಿಡಿ ಒಣ ಹಣ್ಣುಗಳನ್ನು ತಿನ್ನಬೇಕು. ಬಾದಾಮಿ, ಗೋಡಂಬಿ, ಪಿಸ್ತಾ ಮತ್ತು ವಾಲ್‌ನಟ್‌ಗಳಂತಹ ಒಣ ಹಣ್ಣುಗಳನ್ನು ಸೇವಿಸಬೇಕು. ಇದರಿಂದ ದೇಹಕ್ಕೆ ಶಕ್ತಿ ಬರುತ್ತದೆ.