ಚಿಕ್ಕಬಳ್ಳಾಪುರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ಅವರು ಭಜರಂಗಿ ಹಾಡಿಗೆ ಬೆಂಬಲಿಗರೊಂದಿಗೆ ಕುಣಿದು ಕುಪ್ಪಳಿಸಿದ್ದಾರೆ.
Advertisement
ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ 131ನೇ ಜನ್ಮ ದಿನಾಚರಣೆ ಹಾಗೂ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಮ್ 115ನೇ ಜಯಂತಿ ಅಂಗವಾಗಿ ನಗರದಲ್ಲಿ ‘ಸಾಮಾಜಿಕ ನ್ಯಾಯದೆಡೆಗೆ’ ಎಂಬ ವಿನೂತನ ಕಾಲ್ನಡಿಗೆ (ವಾಕಥಾನ್) ಜಾಥಾಗೆ ಡಾ.ಕೆ.ಸುಧಾಕರ್ ಚಾಲನೆ ನೀಡಿದರು. ವಾಕ್ ಥಾನ್ ವೇಳೆ ಜೈ ಭಜರಂಗಿ ಡಿಜೆ ಹಾಡಿಗೆ ಸುಧಾಕರ್ ಅವರು ಸಖತ್ ಸ್ಟೆಪ್ಸ್ ಹಾಕುವ ಮೂಲಕ ಗಮನ ಸೆಳೆದರು. ಇದನ್ನೂ ಓದಿ: ರಾಮನ ಭಜನೆ ಮಾಡೋರ ಹೃದಯ ಇಷ್ಟೊಂದು ಕಠೋರವಾಯ್ತಾ: ಲಕ್ಷ್ಮಿ ಹೆಬ್ಬಾಳ್ಕರ್
Advertisement
Advertisement
ನಗರದ ಎಂಜಿ ರಸ್ತೆಯ ಜೈ ಭೀಮ್ ಹಾಸ್ಟೆಲ್ ಬಳಿಯಿಂದ ಆರಂಭವಾದ ರ್‍ಯಾಲಿ ಎಂಜಿ ರಸ್ತೆ ಮೂಲಕ ಅಂಬೇಡ್ಕರ್ ವೃತ್ತದ ಮೂಲಕ ಬಿಬಿ ರಸ್ತೆಯಲ್ಲಿ ಸಾಗಿ ನಂದಿರಂಗಮಂದಿರದ ಬಳಿ ಅಂತ್ಯ ಮಾಡಲಾಯಿತು. ವಾಕ್ ಥಾನ್‍ನಲ್ಲಿ ಕಾಲೇಜು ವಿದ್ಯಾರ್ಥಿಗಳು ಸೇರಿ ಸಾವಿರಾರು ಮಂದಿ ಭಾಗವಹಿಸಿದ್ದರು. ಈ ವೇಳೆ ಸಹಬಾಳ್ವೆ, ಸಮಾನತೆ, ಸಹ ಮಾನವರೊಂದಿಗೆ ಸಹೋದರೆತೆ ಹಾಗೂ ಸಾಮಾಜಿಕ ನ್ಯಾಯದ ಜಾಗೃತಿ ಕುರಿತಾಗಿ ಸಚಿವರಿಂದ ಪ್ರಮಾಣ ವಚನ ಸ್ವೀಕರಿಸಿದರು. ಇದನ್ನೂ ಓದಿ: ಬ್ಯಾರಿಕೇಡ್ ಹತ್ತಿ ಪೊಲೀಸರ ಮೇಲೆ ಡಿಕೆಶಿ ಜಂಪ್