ಬೆಂಗಳೂರು: ರಾಯಚೂರಿನ (Raichuru) ಬಾಲಕಿಯೊಬ್ಬರಲ್ಲಿ ಝಿಕಾ ವೈರಸ್ (Zika Virus) ಸೋಂಕು ಪತ್ತೆಯಾಗಿರುವುದು ರಾಜ್ಯದಲ್ಲಿ ಆತಂಕ ಮೂಡಿಸಿದೆ. ಸೋಂಕಿನ ಬಗ್ಗೆ ಎಚ್ಚೆತ್ತಿರುವ ಆರೋಗ್ಯ ಇಲಾಖೆ, ವೈರಸ್‌ಗೆ ಚಿಕಿತ್ಸಾ ಕ್ರಮ, ಟೆಸ್ಟಿಂಗ್ ವಿಧಾನ ಮತ್ತು ರೋಗ ಲಕ್ಷಣಗಳ ಪಟ್ಟಿ ಬಿಡುಗಡೆ ಮಾಡಿದೆ.
ಸೋಂಕಿನ ರೋಗ ಲಕ್ಷಣಗಳೇನು? ಅದನ್ನು ಪತ್ತೆ ಹಚ್ಚಲು ಮಾಡಬೇಕಾದ ಪರೀಕ್ಷಾ ವಿಧಾನಗಳೇನು? ಸೋಂಕಿತರನ್ನು ಗುಣಪಡಿಸಲು ಅನುಸರಿಸಬೇಕಾದ ಚಿಕಿತ್ಸಾ ಕ್ರಮಗಳೇನು ಎಂಬ ಬಗ್ಗೆ ಆರೋಗ್ಯ ಇಲಾಖೆ ಪಟ್ಟಿಯಲ್ಲಿ ತಿಳಿಸಿದೆ. ಇದನ್ನೂ ಓದಿ: ಝಿಕಾ ಆತಂಕ – ಕಾಂಡೋಮ್ ಜಾಗೃತಿ ಬಳಿಕ ಗರ್ಭಿಣಿಯರ ಮೇಲೆ ತೀವ್ರ ನಿಗಾ
Advertisement
Advertisement
ಝಿಕಾ ವೈರಸ್ ರೋಗ ಲಕ್ಷಣಗಳು
ಜ್ವರ, ತಲೆನೋವು, ತುರಿಕೆ, ಕಣ್ಣಿನ ಬಣ್ಣ ಬದಲಾವಣೆ, ಮೈ ಕೈ ನೋವು
Advertisement
ಝಿಕಾ ವೈರಸ್ ಟೆಸ್ಟಿಂಗ್ ವಿಧಾನ ಹೇಗೆ?
ಝಿಕಾ ವೈರಸ್ ಪತ್ತೆಯಾದ ಸುತ್ತಮುತ್ತ ಪ್ರದೇಶದಲ್ಲಿ ಕಡ್ಡಾಯವಾಗಿ ಝಿಕಾ ವೈರಸ್ ಟೆಸ್ಟ್ ಮಾಡಬೇಕು. ಇತ್ತೀಚೆಗೆ ಹೊರರಾಜ್ಯ, ಹೊರದೇಶಗಳಿಗೆ ಪ್ರಯಾಣ ಮಾಡಿದ ವ್ಯಕ್ತಿಗಳಿಗೆ ಕಡ್ಡಾಯವಾಗಿ ಝಿಕಾ ವೈರಸ್ ಟೆಸ್ಟ್ ಮಾಡಬೇಕು. ಗರ್ಭಿಣಿಯರು ಇರುವ ಪ್ರದೇಶದ ಸುತ್ತಮುತ್ತ ಹೆಚ್ಚು ನಿಗಾ ಇಡಬೇಕು. ಗರ್ಭಿಣಿಯರನ್ನು ತಪಾಸಣೆಗೆ ಒಳಪಡಿಸಬೇಕು. ಇದನ್ನೂ ಓದಿ: ಸಿದ್ದರಾಮಯ್ಯರಿಗೆ ಕ್ಷೇತ್ರವೇ ಸಿಗ್ತಿಲ್ಲ, ಮುಖ್ಯಮಂತ್ರಿ ಆಗೋಕೆ ಹೇಗೆ ಸಾಧ್ಯ: ಅಭಯ್ ಪಾಟೀಲ್ ವ್ಯಂಗ್ಯ
Advertisement
ಝಿಕಾ ವೈರಸ್‌ಗೆ ಚಿಕಿತ್ಸಾ ಕ್ರಮ ಹೇಗೆ?
ಸೌಮ್ಯ ಗುಣಲಕ್ಷಣ ಇರುವ ರೋಗಿಗಳಿಗೆ ಪ್ರತ್ಯೇಕ ಚಿಕಿತ್ಸೆ ಅಗತ್ಯವಿಲ್ಲ. ಝಿಕಾ ವೈರಸ್‌ಗೆ ಸಾಮಾನ್ಯ ಮೈಕೈ ನೋವು, ಜ್ವರಕ್ಕೆ ನೀಡುವ ಚಿಕಿತ್ಸೆ ನೀಡಬಹುದು. ರೋಗ ಲಕ್ಷಣಗಳಿರುವ ರೋಗಿಗಳಿಗೆ ವೈದ್ಯಕೀಯ ಸಲಹೆ ಪಡೆದುಕೊಂಡೇ ಚಿಕಿತ್ಸೆ ನೀಡಬೇಕು. ಸದ್ಯಕ್ಕೆ ಝಿಕಾ ವೈರಸ್‌ಗೆ ವ್ಯಾಕ್ಸಿನ್ ಇಲ್ಲ.