ತುಮಕೂರು: ಹೆಡ್ ಬುಷ್ (Headbush) ಸಿನಿಮಾದಲ್ಲಿ (Cinema) ವೀರಗಾಸೆ (Veeragase) ಕುಣಿತಕ್ಕೆ ಅಪಮಾನ ಮಾಡಲಾಗಿದೆ. ಇದರಿಂದ ಹಿಂದೂ ಧರ್ಮಕ್ಕೆ (Hindu Religion) ಅವಮಾನವಾಗಿದೆ ಎಂದು ಆರೋಪಿಸಿ ಭಜರಂಗದಳದ (Bajrang Dal) ಕಾರ್ಯಕರ್ತರು ಡಾಲಿ ಧನಂಜಯ್ ಕಟೌಟ್‌ಗೆ ಚಪ್ಪಲಿ ಹಾರ ಹಾಕಿ, ಕಪ್ಪು ಮಸಿ ಬಳಿದು ಆಕ್ರೋಶ ಹೊರಹಾಕಿದ ಘಟನೆ ತಿಪಟೂರು ನಗರದ ಲಕ್ಷ್ಮೀ ಚಿತ್ರಮಂದಿರದ ಆವರಣದಲ್ಲಿ ನಡೆದಿದೆ.
Advertisement
ಡಾಲಿ ಧನಂಜಯ (Dhananjaya) ಕ್ಷಮೆ ಕೇಳಬೇಕು ಹಾಗೂ ಚಿತ್ರದಿಂದ ವಿವಾದಿತ ದೃಶ್ಯಕ್ಕೆ ಕತ್ತರಿ ಹಾಕಬೇಕು ಎಂದು ಪ್ರತಿಭಟನಾಕಾರು ಆಗ್ರಹಿಸಿದ್ದಾರೆ. ಇಲ್ಲದಿದ್ದರೇ ಯಾವ ಚಿತ್ರಮಂದಿರಗಳಲ್ಲೂ ಈ ಚಿತ್ರ ಪ್ರದರ್ಶನ ಮಾಡದಂತೆ ತಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಬೆಳಕಿನ ಹಬ್ಬಕ್ಕೆ ‘ಕೆಜಿಎಫ್’ ಬೆಡಗಿಯ ಹೊಸ ಫೋಟೋ ಶೂಟ್
Advertisement
I watched #HeadBush first day itself, there is nothing disrespecting veeragase in the movie. #WeStandWithDhananjaya pic.twitter.com/22hNiIrh4o
— Gopi (@gopcma) October 26, 2022
Advertisement
ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ (Head bush) ಸಿನಿಮಾದಲ್ಲಿ (Cinema) ಕರಗ ಮತ್ತು ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಸಿನಿಮಾ ಬೈಕಾಟ್ ಕೂಗು ಒಂದೆಡೆ ಕೇಳಿಬಂದಿದ್ದರೆ, ಮತ್ತೊಂದೆಡೆ ಅಭಿಮಾನಿಗಳು ಡಾಲಿ ಧನಂಜಯ್ ಪರವಾಗಿದ್ದೇವೆ ಎಂಬ ಧ್ವನಿ ಎತ್ತಿದ್ದಾರೆ. ಇದನ್ನೂ ಓದಿ: ಅಪ್ಪು ಗಂಧದಗುಡಿ ರಿಲೀಸ್‍ಗೆ ಕೌಂಟ್‍ಡೌನ್- ಮೊದಲ ಬಾರಿಗೆ ಅಶ್ವಿನಿ ವಿಶೇಷ ಸಂದರ್ಶನ
Advertisement
ಕನ್ನಡದ ಇತರ ಸ್ಟಾರ್ ನಟ ಜೊತೆಗಿರುವ ಡಾಲಿ ಧನಂಜಯ್ ಫೋಟೋ ಹಾಗೂ ಅವರು ಮಾತನಾಡಿರುವ ವೀಡಿಯೋಗಳ ತುಣುಕು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಹ್ಯಾಷ್ ಟ್ಯಾಗ್ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗಿದೆ.