ಭೋಪಾಲ್: ಪ್ರಧಾನಿ ಮೋದಿ (Narendra Modi) ಅವರು ಲಕ್ಷ ರೂಪಾಯಿ ಸೂಟ್‌ಗಳನ್ನ ಧರಿಸುತ್ತಾರೆ. ಆದರೆ ನಾನು ಈ ಬಿಳಿ ಟೀ-ಶರ್ಟ್ ಮಾತ್ರ ಧರಿಸುತ್ತೇನೆ ಎಂದು ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಾಗ್ದಾಳಿ ನಡೆಸಿದ್ದಾರೆ.
ಮಧ್ಯಪ್ರದೇಶದಲ್ಲಿ (Madhya Pradesh) ಸತ್ನಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಪ್ರಧಾನಿ ಮೋದಿಯವರ ಭಾಷಣ ಕೇಳಿದ್ದೇನೆ. ಅವರು ಪ್ರತಿ ಭಾಷಣದಲ್ಲಿ ನಾನು ಒಬಿಸಿ ಸಮುದಾಯದವನು ಎಂದು ಎಲ್ಲೆಡೆ ಹೇಳುತ್ತಿದ್ದಾರೆ. ಪದೇ ಪದೇ ಹೇಳುವ ಮೂಲಕ ಅವರು ಪ್ರಧಾನಿಯಾದರು. ಅಂಥವರು ಲಕ್ಷ ರೂಪಾಯಿ ಬೆಲೆ ಬಾಳುವ ಸೂಟ್ ಧರಿಸುತ್ತಾರೆ. ಒಮ್ಮೆ ಬಳಸಿದ ಬಟ್ಟೆಯನ್ನು ಮತ್ತೊಮ್ಮೆ ಬಳಸಿದ್ದನ್ನು ನೀವು ಎಂದಾದರು ನೋಡಿದ್ದೀರಾ ಎಂದು ರಾಗಾ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ವಿರುದ್ಧದ ಸಿಬಿಐ ತನಿಖೆಗೆ ತಡೆ – ಹೈಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥಪಡಿಸಲು ಸುಪ್ರೀಂ ನಿರ್ದೇಶನ
Advertisement
Advertisement
ನಾನು ಈ ಒಂದೇ ಒಂದು ಬಿಳಿ ಅಂಗಿಯನ್ನು ಧರಿಸುತ್ತೇನೆ. ನಾನು ಜಾತಿ ಆಧಾರಿತ ಜನಗಣತಿಯ ಬಗ್ಗೆ ಮಾತನಾಡಲು ಪ್ರಾರಂಭಿಸಿದಾಗ, ಮೋದಿ ಅವರ ಭಾಷಣದಿಂದ ಜಾತಿ ಕಣ್ಮರೆಯಾಯಿತು. ನಾನು ಅದರ ಬಗ್ಗೆ ಮಾತನಾಡಲು ಪ್ರಾರಂಭಿಸಿದಾಗಿನಿಂದ, ಭಾರತದಲ್ಲಿ ಜಾತಿ ಇಲ್ಲ ಎಂದು ಮೋದಿ ಹೇಳತೊಡಗಿದರು ಎಂದು ಟೀಕಾಪ್ರಹಾರ ನಡೆಸಿದ್ದಾರೆ.
Advertisement
ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದರೆ ಎಲ್ಲಾ ರಾಜ್ಯಗಳಲ್ಲಿ ಜಾತಿವಾರು ಜನಗಣತಿ ನಡೆಸುವುದು ನಮ್ಮ ಮೊದಲ ಹೆಜ್ಜೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ರಾಷ್ಟ್ರವ್ಯಾಪಿ ಜಾತಿವಾರು ಗಣತಿ ಸಮೀಕ್ಷೆ ನಡೆಸುತ್ತೇವೆ ಎಂದು ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಮಹುವಾ ಮೊಯಿತ್ರಾ ಲೋಕಸಭಾ ಸದಸ್ಯತ್ವ ರದ್ದು – ನೈತಿಕ ಸಮಿತಿ ವರದಿಯಲ್ಲಿ ಏನಿದೆ?
Advertisement
ದೊಡ್ಡ ಕೈಗಾರಿಕೋದ್ಯಮಿಗಳು ಉದ್ಯೋಗ ನೀಡುವುದಿಲ್ಲ. ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ನಡೆಸುವ ಸಣ್ಣ ವ್ಯಾಪಾರಿಗಳು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉತ್ಪಾದನೆಯಲ್ಲಿ ತೊಡಗಿರುವವರು, ಅಂಗಡಿಗಳನ್ನು ನಡೆಸುವವರು ಉದ್ಯೋಗವನ್ನು ನೀಡುತ್ತಾರೆ. ನಮ್ಮ ಯುವಕರಿಗೆ ಉದ್ಯೋಗ ನೀಡಿದ ಲಕ್ಷಾಂತರ ಸಣ್ಣ ಘಟಕಗಳು ಇದ್ದವು. ಬಿಜೆಪಿ ಮತ್ತು ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ಈ ಘಟಕಗಳ ಮೇಲೆ ದಾಳಿ ಆರಂಭಿಸಿದರು. ಸಣ್ಣ ವ್ಯಾಪಾರಸ್ಥರ ಮೇಲೆ, ಸಣ್ಣ-ಮಧ್ಯಮ ಉದ್ದಿಮೆಗಳ ಮೇಲೆ ನೋಟು ರದ್ದತಿ ಮತ್ತು ಜಿಎಸ್‌ಟಿ ಮೂಲಕ ದಾಳಿ ಮಾಡಿದರು. ಜಿಎಸ್‌ಟಿ ಎಂದರೆ ತೆರಿಗೆ ಅಲ್ಲ. ರೈತರು, ಸಣ್ಣ ವ್ಯಾಪಾರಿಗಳ ಮೇಲಿನ ದಾಳಿ. ಉದ್ಯಮಿಗಳು, ಸಣ್ಣ ವ್ಯಾಪಾರಿಗಳನ್ನು ಮುಗಿಸಲು ಇದು ಒಂದು ಅಸ್ತ್ರವಾಗಿದೆ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.
ಜಿಎಸ್‌ಟಿಯನ್ನು ಒಬಿಸಿ, ಆದಿವಾಸಿ, ಹಿಂದುಳಿದ ವರ್ಗ ಮತ್ತು ಸಾಮಾನ್ಯ ವರ್ಗದ ಬಡ ಜನರು ನೀಡುತ್ತಾರೆ. ಸರ್ಕಾರವು ಬಡವರಿಂದ ಜಿಎಸ್‌ಟಿ ತೆಗೆದುಕೊಳ್ಳುತ್ತದೆ. ಎಲ್ಲಾ ಬ್ಯಾಂಕ್ ಹಣವನ್ನು ಅದಾನಿ ಮತ್ತು ಅಂಬಾನಿಯಂತಹ ದೊಡ್ಡ ಉದ್ಯಮಿಗಳಿಗೆ ಹಸ್ತಾಂತರಿಸುತ್ತದೆ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.