ಬೀಜಿಂಗ್: ಟ್ರಕ್‍ವೊಂದರ ಚಕ್ರದ ಕೆಳಗೆ ಬೈಕ್ ಸವಾರ ಸಿಲುಕಿಕೊಂಡರೂ ಅದೃಷ್ಟವಶಾತ್ ಬದುಕಿ ಬಂದಿರುವ ಅಚ್ಚರಿಯ ಘಟನೆ ನೈರುತ್ಯ ಚೀನಾದ ಗುಯಾಂಗ್‍ನಲ್ಲಿ ನಡೆದಿದೆ.
ಈ ಘಟನೆ ಅಕ್ಟೋಬರ್ 24 ರಂದು ಸುಮಾರು ಬೆಳಗ್ಗೆ 11. 30 ಕ್ಕೆ ನಡೆದಿದ್ದು, ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೈಕ್ ಸವಾರನಿಗೆ ಸಣ್ಣ ಪುಟ್ಟಗಾಯಗಳಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಮಾಡುತ್ತಿದ್ದಾರೆ.
ಸಿಸಿಟಿಯ ಪ್ರಕಾರ, ಗುಯಾಂಗ್ ರಸ್ತೆಯೊಂದರ ಸಿಗ್ನಲ್‍ನಲ್ಲಿ ವಾಹಗಳು ನಿಂತಿದ್ದವು. ಸ್ವಲ್ಪ ಸಮಯದ ನಂತರ ಗ್ರೀನ್ ಸಿಗ್ನಲ್ ಬಿದ್ದ ನಂತರ ಟ್ರಕ್ ಒಂದು ಮುಂದೆ ಬಂದಿದೆ. ಆದರೆ ಅದರ ಮುಂದೆ ಬೈಕ್ ಮತ್ತು ಬೈಕ್ ಸವಾರ ಸಿಲುಕಿಕೊಂಡಿದ್ದು, ಎಲ್ಲರೂ ಬೈಕ್ ಸವಾರ ಸತ್ತೇ ಹೋದ ಅಂದುಕೊಂಡಿದ್ದರು. ಆದರೆ ಟ್ರಕ್ ಕೆಳಗೆ ಸವಾರ ಉರುಳಿ ಉರುಳಿ ನಂತರ ಚಕ್ರದ ಬಳಿಯಿಂದ ಆಚೆಗೆ ಹೋಗಿದ್ದಾರೆ. ಆದರೆ ಟ್ರಕ್ ಬೈಕ್ ಅನ್ನು ಸುಮಾರು 30 ಮೀಟರ್ ದೂರದವರೆಗೆ ತಳ್ಳಿಕೊಂಡು ಹೋಗಿದೆ.